ಪುತ್ರ ಪ್ರಜ್ವಲ್ ಚುನಾವಣೆ ಸ್ಪರ್ಧೆ ಬಗ್ಗೆ ಕಡ್ಡಿ ಮುರಿದಂತೆ ಹೇಳಿದ ರೇವಣ್ಣ

Posted By:
Subscribe to Oneindia Kannada

ಹಾಸನ, ನವೆಂಬರ್ 10: ಪುತ್ರ ಪ್ರಜ್ವಲ್ 2018ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಒಂದು ಮಾತು ತುಟಿಕ್ ಪಿಟಿಕ್ ಎನ್ನದೆ ಮೌನವಾಗಿದ್ದ ಎಚ್ ಡಿ ರೇವಣ್ಣ ಕೊನೆಗೂ ಮಾತನಾಡಿದ್ದಾರೆ.

ಪ್ರಜ್ವಲ್ ಸ್ಪರ್ಧಿಸುವ ಬಗ್ಗೆ ದೇವೇಗೌಡ್ರ ಮನೆಯಿಂದ ದಿನಕ್ಕೊಂದು ಮಾತು

ರೇವಣ್ಣ ತಮ್ಮ ಪುತ್ರ ಚುನಾವಣೆ ಸ್ಪರ್ಧೆಯ ನಿರ್ಧಾರವನ್ನು ಕುಮಾರಣ್ಣ ಹಾಗೂ ದೊಡ್ಡಗೌಡ್ರ ಹೆಗಲಿಗೆ ಹೊರಿಸಿ ಕೈತೊಳೆದುಕೊಂಡಿದ್ದಾರೆ.

ಹಾಸನದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, "ಪ್ರಜ್ವಲ್ ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ವಿಚಾರದಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ ಎಂದು ಕಡ್ಡಿ ಮುರಿದಂತೆ ಹೇಳಿದರು.

Deve Gowda and HD Kumaraswamy will decide on Prajwal's candidature in upcoming polls says Revanna

ಪ್ರಜ್ವಲ್ ಸ್ಪರ್ಧೆ ವಿಚಾರದಲ್ಲಿ ನಮ್ಮ ಕುಟುಂಬದವರೇ ಹೊಡೆದಾಡುತ್ತಿದ್ದಾರೆ ಎನ್ನುವುದು ಕೆಲವರು ಭ್ರಮೆ. ಪ್ರಜ್ವಲ್ ಗೆ ಮುಂದೆ ರಾಜಕೀಯ ಭವಿಷ್ಯ ಇದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಕುಮಾರಸ್ವಾಮಿ ಹಾಗೂ ನಾನು ಮಾತ್ರ ಸ್ಪರ್ಧಿಸುವುದಾಗಿ ಹೇಳಿದ ಮೇಲೂ ಗೊಂದಲ‌ ಏಕೆ‌ ಎಂದು ಖಾರವಾಗಿ ಪ್ರಶ್ನಿಸಿದರು.

ಪ್ರಜ್ವಲ್ ಚುನಾವಣೆ ಸ್ಪರ್ಧೆ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ಎಂದು ದೇವೇಗೌಡ ಅವರು ಈಗಾಗಲೇ ಹೇಳಿದ್ದಾರೆ. ಮತ್ತೊಂದೆಡೆ ನಮ್ಮ ಕುಟುಂಬದಲ್ಲಿ ಇಬ್ಬರೇ ಸ್ಪರ್ಧೆ ಅಂತ ಕುಮಾಸ್ವಾಮಿ ಅವರು ಹೋದಲ್ಲಿ ಬಂದಲ್ಲಿ ಹೇಳುತ್ತಿದ್ದಾರೆ.

ಒಟ್ಟಿನಲ್ಲಿ ಇವರೆಲ್ಲರ ಮಾತುಗಳನ್ನು ಗಮನಿಸಿದರೇ ಪ್ರಜ್ವಲ್ ರೇವಣ್ಣ ಚುನಾವಣೆ ಸ್ಪರ್ಧಿಸಬೇಕೆಂಬ ಆಸೆ ಬಹುತೇಕ ಕಮರಿದಂತೆ ಕಾಣುತ್ತದೆ. ಆದರೆ, ಕೊನೆ ಘಳಿಗೆಯಲ್ಲಿ ಪ್ರಜ್ವಲ್ ಗೆ ದೊಡ್ಡಗೌಡ್ರು ಟಿಕೆಟ್ ಕೋಟ್ರೂ ಆಶ್ಚರ್ಯ ಪಡಬೇಕಿಲ್ಲ. ಕಾದು ನೋಡಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Deve Gowda and HD Kumaraswamy will decide on Prajwal's candidature in upcoming assembly polls said Prajwal's father HD Revanna in Hassan on Friday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ