• search
  • Live TV
ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅರಕಲಗೂಡಿನಲ್ಲಿ 1563 ಕೋಟಿ ಕಾಮಗಾರಿ ಉದ್ಘಾಟಿಸಿದ ಕುಮಾರಸ್ವಾಮಿ

|

ಅರಕಲಗೂಡು, ಫೆಬ್ರವರಿ 26: ಅರಕಲಗೂಡು ಕ್ಷೇತ್ರದಲ್ಲಿ ಇಂದು 1563 ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳು, ರಸ್ತೆ, ಕಾಲೇಜು, ಕುಡಿಯುವ ನೀರು, ವಿದ್ಯುತ್‍ಚ್ಛಕ್ತಿ, ಸಾರಿಗೆ, ಇಂಧಿರಾ ಕ್ಯಾಂಟೀನ್ ಹೀಗೆ ಹತ್ತಾರು ಕಾಮಗಾರಿಗಳ ಶಿಲನ್ಯಾಸ ಹಾಗೂ ಉದ್ಘಾಟನೆಯನ್ನು ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಅವರು ನೇರವೇರಿಸಿದರು.

ಪೊಲೀಸ್ ಇಲಾಖೆ ಮೂಲಸೌಕರ್ಯಕ್ಕೆ ಆದ್ಯತೆ: ಕುಮಾರಸ್ವಾಮಿ

145ಕೋಟಿ ರೂಪಾಯಿ ವೆಚ್ಚದಲ್ಲಿ ಅರಕಲಗೂಡು ಕ್ಷೇತ್ರ ಭಾಗದಲ್ಲಿ ಮಾಗಡಿ-ಸೋಮವಾರ ಪೇಟೆ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಇದಲ್ಲದೆ ಅರಲಗೂಡು ಕ್ಷೇತ್ರದಲ್ಲಿ 138.31 ಕೋಟಿ ರೂ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳು ಮತ್ತು ಅರಕಲಗೂಡು ಪ್ರಥಮ ದರ್ಜೆ ಕಾಲೇಜು, ಹೆಬ್ಬಾಲೆ, ದೊಡ್ಡಮಗ್ಗೆ ಹಾಗೂ ರಾಮನಾಥಪುರ ಪದವಿ ಪೂರ್ವ ಕಾಲೇಜು ಕಟ್ಟಡಗಳ ಶಂಕುಸ್ಥಾಪನೆ, 2 ವಿದ್ಯುತ್ ವಿತರಣಾ ಕೇಂದ್ರಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ.

ಮುಂದಿನ ಬಾರಿಯೂ ಬೆಂಗಳೂರಲ್ಲೇ ಏರೋ ಇಂಡಿಯಾ : ಎಚ್ಡಿಕೆ ಮನವಿ

380 ಕೋಟಿ ರೂಪಾಯಿ ವೆಚ್ಚದಲ್ಲಿ ಹೇಮಾವತಿ ಬಲದಂಡೆ ನಾಲೆ ಆಧುನೀಕರಣ 190 ಕೋಟಿ ರೂಪಾಯಿ ವೆಚ್ಚದಲ್ಲಿ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆಗಳಿಗೂ ಚಾಲನೆ ನೀಡಲಾಗಿದೆ. ಅರಕಲಗೂಡು ಕ್ಷೇತ್ರದಲ್ಲಿ 140 ಕೋಟಿ ರೂ ವೆಚ್ಚದಲ್ಲಿ ಹಾರಂಗಿ ನಾಲೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು.

34 ಕೋಟಿ ರೂಪಾಯಿ ವೆಚ್ಚದಲ್ಲಿ ಮೊರಾರ್ಜಿ ವಸತಿಶಾಲೆ, ಅಂಬೇಡ್ಕರ್ ವಸತಿ ಶಾಲೆ, ಕಂಪ್ಯೂಟರ್ ಲ್ಯಾಬ್, ಇಂದಿರಾ ಕ್ಯಾಂಟಿನ್, ರೇಷ್ಮೆ ತರಬೇತಿ ಸಂಸ್ಥೆಕಟ್ಟಡ, ಬಸವೇಶ್ವರ ಮತ್ತು ಭೈರವೇಶ್ವರ ದೇವಾಲಯಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ.

ರೈಲ್ವೆ ಸಚಿವರ ಸಮ್ಮುಖದಲ್ಲಿ ಸಬರ್ಬನ್ ರೈಲ್ವೆ ಯೋಜನೆಗೆ ಒಪ್ಪಿಗೆ ಕೊಟ್ಟ ಕುಮಾರಸ್ವಾಮಿ

ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಡಿ. ರೇವಣ್ಣ ಹಾಗೂ ಅರಕಲಗೂಡು ಶಾಸಕರಾದ ಎ.ಟಿ.ರಾಮಸ್ವಾಮಿ ಮತ್ತಿತರರು ಹಾಜರಿದ್ದರು.

ಇದೇ ದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಸಕಲೇಶಪುರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ಶಾಸಕರಾದ ಹೆಚ್.ಕೆ.ಕುಮಾರಸ್ವಾಮಿ,ಎಸ್.ಎನ್.ಬಾಲಕೃಷ್ಣ ಮತ್ತಿತರು ಹಾಜರಿದ್ದರು.

English summary
CM Kumaraswamy today inaugurates 1563 crore rupees development program in Arakalagudu. He also inaugurate some development program in Sakaleshpura also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X