ಬಿಜೆಪಿ-ಕಾಂಗ್ರೆಸ್‌ಗೆ ರಾಜ್ಯದ ಜನರ ಬಗ್ಗೆ ಕಾಳಜಿ ಇಲ್ಲ: ಎಚ್‌ಡಿಕೆ

ಹಾಸನ, ಆಗಸ್ಟ 21: ಮೊಟ್ಟೆ ಎಸೆದರೆಂದು ಎರಡು ಪಕ್ಷಗಳು ಪಾದಯಾತ್ರೆ, ಪ್ರತಿಭಟನೆ ಹಮ್ಮಿಕೊಂಡಿವೆ. ರಾಜ್ಯದಲ್ಲಿ ಉಂಟಾದ ನೆರೆ, ಪ್ರವಾಹ ಪರಿಸ್ಥಿತಿ ಬಗ್ಗೆ ಇವರಲ್ಲಿ ಕಾಳಜಿ ಇಲ್ಲ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಿಡಿ ಕಾರಿದ್ದಾರೆ.

ಭಾನುವಾರ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, 2019ರಲ್ಲಿ ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ಮನೆ ಒದಗಿಸಲಾಗಿಲ್ಲ. ಕೆಲವರು ಮೂರು ವರ್ಷದಿಂದ ತಾತ್ಕಾಲಿಕ ಶೆಡ್‌ಗಳಲ್ಲೇ ಕಾಲ ಕಳೆಯುತ್ತಿದ್ದಾರೆ. ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಇದ್ದು ಅದರತ್ತ ಗಮನ ಕೊಡದ ರಾಜಕೀಯ ಪಕ್ಷಗಳು ಕೇವಲ ಪಾದಯಾತ್ರೆಯ ನಾಟಕ ಮಾಡುತ್ತಿವೆ ಎಂದು ಅವರು ಟೀಕಿಸಿದರು.

ಸ್ವಾತಂತ್ರೋತ್ಸವ ಹಿನ್ನೆಲೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ವರ್ತನೆಯನ್ನು ನಾಡಿನ ಜನರು ಗಮನಿಸಿದ್ದಾರೆ. ಜಾಹೀರಾತುಗಳ ಮೂಲಕ ಸ್ವಾತಂತ್ರ್ಯ ಹೋರಾಟಗಾರರನ್ನು ಅವಹೇಳನ ಮಾಡಿದನ್ನೂ ನೋಡಿದ್ದಾರೆ. ನೂರಾರು ಸಮಸ್ಯೆಗಳಿವೆ. ರೈತ ಪರ ಯೋಚನೆ ಎರಡು ಕಾಂಗ್ರೆಸ್ ಬಿಜೆಪಿ ಮಾಡುತ್ತಿಲ್ಲ. ಇವರಿಗೆ ಜನರೇ ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡುತ್ತಾರೆ ಎಂದರು.

BJP, Congress Have No Concern For People, Criticises HDK

ಸಿದ್ದರಾಮಯ್ಯ ಭ್ರಮಾಲೋದಲ್ಲಿದ್ದಾರೆ

ಸಿದ್ದರಾಮೋತ್ಸವ ನಂತರ ಜೆಡಿಎಸ್, ಬಿಜೆಪಿ ಹತಾರಾಗಿವೆ ಎಂದು ಹೇಳಿದ್ದ ಸಿದ್ದರಾಮಯ್ಯಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಇಂತಹ ಎಷ್ಟು ಸಮಾವೇಶಗಳನ್ನು ನಾನು ನೋಡಿಲ್ಲ. ಎಂತೆಂಥ ಸಮಾವೇಶಗಳನ್ನು ಎಷ್ಟೇ ಷ್ಟು ಪಕ್ಷಗಳು ಮಾಡಿಲ್ಲ. ಇತರ ಪಕ್ಷಗಳು ಹಾತಾರಾಗಿವೆ ಎಂದು ಸಿದ್ದರಾಮಯ್ಯ ಅವರು ತಮ್ಮ ಚಪಲಕ್ಕೆ ಹೇಳಿಕೊಳ್ಳುತ್ತಾರೆ. ಅವರು ಭ್ರಮಾಲೋಕದಲ್ಲಿದ್ದಾರೆ.

ದೇವರ, ಜನರ ಆಶೀರ್ವಾದವಿದ್ದರೆ ಮುಖ್ಯಮಂತ್ರಿ ಆಗಬಹುದು. ಭಗವಂತ ಆಶೀರ್ವಾದ ನೀಡಿದಾಗ ನಮ್ಮ ಸಹಕಾರ ಇದೆ ಎಂದಿದ್ದೆ. ಸದ್ಯ ನಮ್ಮ ಪಕ್ಷವನ್ನು ನಾನು ಸಂಘಟನೆ ಮಾಡುತ್ತಿದ್ದೇನೆ. ಕಾಂಗ್ರೆಸ್‌ನವರು ಅವರ ಪಕ್ಷವನ್ನು ಸಂಘಟಿಸುತ್ತಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಕುಮಾರಸ್ವಾಮಿ ಉತ್ತರಿಸಿದರು.

BJP, Congress Have No Concern For People, Criticises HDK

ನನ್ನ ಹೋರಾಟ ಜೆಡಿಎಸ್ ಅನ್ನು ಸ್ವತಂತ್ರವಾಗಿ ರಾಜ್ಯದಲ್ಲಿ ಅಧಿಕಾರಕ್ಕೆ ತರುವುದಾಗಿದೆ. ಜನರೇ ನನ್ನನ್ನು ಮುಖ್ಯಮಂತ್ರಿ ಆಗಿ ನೋಡಲು ಆಸೆ ಪಡುತ್ತಿದ್ದಾರೆ. ಆ.26 ರಂದು ಕಾಂಗ್ರೆಸ್‌ ನಡೆಸಲಿರುವ ಪಾದಯಾತ್ರೆಗೆ ಹೆಚ್ಚಿನ ಮಹತ್ವ ಕೊಡಬೇಕಾಗಿಲ್ಲ. ಜನರು ಮಹತ್ವ ಕೊಡದಿದ್ದರೆ ಉತ್ತಮ. ಆ ಪಾದಯಾತ್ರೆ ಜನರ ಪರವಾಗಿ, ಜನತೆಯ ಹಿತಕ್ಕಾಗಿ ಮಾಡುತ್ತಿಲ್ಲವಲ್ಲ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+