ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ನಾವೇನೂ ಹಿಂದೂಗಳಲ್ವಾ?” ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

By Sachhidananda Acharya
|
Google Oneindia Kannada News

ಹಾಸನ, ಜುಲೈ 3: "ಬಿಜೆಪಿಯ ಯಡಿಯೂರಪ್ಪ, ಈಶ್ವರಪ್ಪ, ಸದಾನಂದಗೌಡರು ಮಾತ್ರ ಹಿಂದೂಗಳಾ? ನಾವೇನು ಹಿಂದೂಗಳಲ್ವಾ?" ಹೀಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಹಾಸನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೈಸೂರು ವಿಭಾಗೀಯ ಮಟ್ಟದ ಸಮಾವೇಶ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು "ನಾವು ಸಮಾಜವನ್ನು ಒಗ್ಗೂಡಿಸುತ್ತಿದ್ದೇವೆ. ಆದರೆ, ಬಿಜೆಪಿಯವರು ಅದೇ ಸಮಾಜ ಒಡೆಯುತ್ತಿದ್ದಾರೆ," ಎಂದೂ ಇದೇ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಮೂಢನಂಬಿಕೆ ವಿರೋಧಿ ಕಾಯ್ದೆ ಮೇಲೆ ಆಸೆ, ಚುನಾವಣೆ ಬಗ್ಗೆ ಪ್ರೀತಿಮೂಢನಂಬಿಕೆ ವಿರೋಧಿ ಕಾಯ್ದೆ ಮೇಲೆ ಆಸೆ, ಚುನಾವಣೆ ಬಗ್ಗೆ ಪ್ರೀತಿ

ಕಾರ್ಯಕ್ರಮದುದ್ದಕ್ಕೂ ಬಿಜೆಪಿಯನ್ನು ಝಾಡಿಸಿದ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರುದ್ಧ ಹರಿಹಾಯ್ದರು. "ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಮೇಲೆ ಕ್ರಿಮಿನಲ್ ಮೊಕದ್ದಮೆಗಳಿವೆ. ಒಂದೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗದೇ ಇರುತ್ತಿದ್ದರೆ ಇವತ್ತು ಅಮಿತ್ ಶಾ ಜೈಲಿನಲ್ಲಿರುತ್ತಿದ್ದರು," ಎಂದು ಸಿದ್ದರಾಮಯ್ಯ ಹೇಳಿದರು.

ಕೋಮುವಾದಿ ಪಕ್ಷವನ್ನು ದೂರ ಇಡಿ

ಕೋಮುವಾದಿ ಪಕ್ಷವನ್ನು ದೂರ ಇಡಿ

ಕಾರ್ಯಕರ್ತರೆಲ್ಲರೂ ಸೇರಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಕರೆ ನೀಡಿದ ಅವರು, "ಸಮಾಜವನ್ನು ಒಡೆಯುವಂತಹ ಶಕ್ತಿ ಇರುವುದು ಕೋಮುವಾದಕ್ಕೆ. ಅದೇ ಕೋಮುವಾದವನ್ನು ನೆಚ್ಚಿಕೊಂಡಿರುವ ಪಕ್ಷವನ್ನು ಅಧಿಕಾರದಿಂದ ದೂರ ಇಡಬೇಕು. ಇದು ಕಾಂಗ್ರೆಸ್ ಕಾರ್ಯಕರ್ತರ ಮೇಲಿರುವ ಜವಾಬ್ದಾರಿ," ಎಂದು ಸಿದ್ದರಾಮಯ್ಯ ಹೇಳಿದರು.

ಇದೇ ವೇಳೆ ಬಿಜೆಪಿ ಜಿಎಸ್ಟಿಯನ್ನು ತನ್ನ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದಕ್ಕೂ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು. "ಜಿಎಸ್ಟಿ ಕಾಂಗ್ರೆಸ್ ಕಾಲದ್ದು. ಕಾಂಗ್ರೆಸ್ ಜಿಎಸ್ಟಿಗೆ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಅದನ್ನು ತಮ್ಮದೇ ಸಾಧನೆ ಎಂಬಂತೆ ಬಿಜೆಪಿ ಬಿಂಬಿಸಿಕೊಳ್ಳುತ್ತಿರುವುದಕ್ಕೆ ನಮ್ಮ ವಿರೋಧವಿದೆ," ಎಂದು ಹೇಳಿದರು.

ಬಿಜೆಪಿ, ಜೆಡಿಎಸ್ ಗೆ ಅಧಿಕಾರದ ಕನಸು

ಬಿಜೆಪಿ, ಜೆಡಿಎಸ್ ಗೆ ಅಧಿಕಾರದ ಕನಸು

"ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್ ನವರು ಅಧಿಕಾರಕ್ಕೆ ಬರುತ್ತೇವೆಂದು ಕನಸು ಕಾಣುತ್ತಿದ್ದಾರೆ. ಆದರೆ ಅದು ಎಂದಿಗೂ ಸಾಧ್ಯವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಗೆ ಪೂರಕ ವಾತಾವರಣವಿದೆ. ಗುಂಡ್ಲುಪೇಟೆ ಮತ್ತು ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿರುವುದೇ ಇದಕ್ಕೆ ಸಾಕ್ಷಿ. ಈ ಚುನಾವಣೆ ನಂತರ ಯಡಿಯೂರಪ್ಪರ ಧ್ವನಿ ಕ್ಷೀಣಿಸುತ್ತಿದೆ," ಎಂದು ಮುಖ್ಯಮಂತ್ರಿಗಳು ಲೇವಡಿ ಮಾಡಿದರು.

"ಸರ್ಕಾರದ ಕಾರ್ಯಕ್ರಮಗಳ ಮೇಲೆ ಜನರಿಗೆ ವಿಶ್ವಾಸವಿದೆ. ಆದ್ದರಿಂದ ಜನರು ಸರ್ಕಾರದ ಪರವಾಗಿದ್ದಾರೆ," ಎಂದೂ ಸಿಎಂ ಹೇಳಿದರು.

2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ನಿಚ್ಚಳ ಬಹುಮತ!2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ನಿಚ್ಚಳ ಬಹುಮತ!

 ಕಾಂಗ್ರೆಸ್ ಅಧಿಕಾರಕ್ಕೇರುವುದು ಸೂರ್ಯ ಚಂದ್ರರಷ್ಟೇ ಸತ್ಯ

ಕಾಂಗ್ರೆಸ್ ಅಧಿಕಾರಕ್ಕೇರುವುದು ಸೂರ್ಯ ಚಂದ್ರರಷ್ಟೇ ಸತ್ಯ

"ಕರ್ನಾಟಕದ ನಾಡಿ ಮಿಡಿತ ಅರ್ಥವಾಗಿದೆ. ಈ ಜಗತ್ತಿನಲ್ಲಿ ಸೂರ್ಯಚಂದ್ರರು ಇರುವುದು ಎಷ್ಟು ಸತ್ಯವೋ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ," ಎಂದು ಸಿದ್ದರಾಮಯ್ಯ ವಿಶ್ವಾಸದಿಂದ ನುಡಿದರು.

"ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರು ಇವತ್ತು ಆತಂಕದಲ್ಲಿ ಬದುಕುತ್ತಿದ್ದಾರೆ. ದೇಶಕ್ಕಾಗಿ ಈ ಬಿಜೆಪಿಯವರು ಒಬ್ಬರಾದರೂ ಸತ್ತಿದ್ದಾರಾ?," ಎಂದು ಸಿಎಂ ಪ್ರಶ್ನಿಸಿದರು.

ಮೋಡ ಬಿತ್ತನೆ

ಮೋಡ ಬಿತ್ತನೆ

"ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಮಳೆ ಕೊರತೆ ಎದ್ದು ಕಾಣುತ್ತಿದೆ. ಇದರಿಂದ ಮೋಡ ಬಿತ್ತನೆಗೆ ಟೆಂಡರ್ ಕರೆದಿದ್ದೇವೆ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

"ಈ ಬಾರಿ ಮಳೆ ಕೈಕೊಟ್ಟಿದೆ. ಅಂದಾಜಿನಷ್ಟು ಬೀಳುತ್ತಿಲ್ಲ. ಆರಂಭದಲ್ಲಿ ಬಿರುಸಾಗಿ ಸುರಿದರೂ ಈಗ ಕಡಿಮೆಯಾಗಿದೆ. ಮಳೆಯ ಪ್ರಮಾಣ ನೋಡಿಕೊಂಡು ಸದ್ಯದಲ್ಲಿಯೇ ಮೋಡ ಬಿತ್ತನೆ ಆರಂಭಿಸಲಾಗುತ್ತದೆ," ಎಂದರು.

 ಹಿರಿಯರ ಉಪಸ್ಥಿತಿ

ಹಿರಿಯರ ಉಪಸ್ಥಿತಿ

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ , ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಇಂಧನ ಸಚಿವ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ , ಹಾಸನ ಜಿಲ್ಲಾ ಉಸ್ತುವಾರಿ ಹಾಗೂ ಪಶುಸಂಗೋಪನೆ ಸಚಿವ ಎ. ಮಂಜು ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ವೇದಿಯಲ್ಲಿ ಉಪಸ್ಥಿತರಿದ್ದರು.

English summary
Chief Minister Siddaramaiah accuses BJP on dividing society in the name of caste. “We are not Hindus? Only Yeddyurappa, Sadanand Gowda and Eshwarappa are Hindus?” he asks in a workers meet here in Hassan. Speaking on the occasion of Hassan Congress party’s Mysuru division level representative function, Siddaramaiah said, when PM Narendra Modi was Chief Minister of Gujarat, he opposes the introduction of Goods and Services Tax Act (GST) for 10 years and now they are claiming the credit for GST.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X