ಹಾಸನದಲ್ಲಿ ಭೀಕರ ಅಪಘಾತ; ಅಬಕಾರಿ ಅಧಿಕಾರಿ, 3 ಐಟಿ ಉದ್ಯೋಗಿಗಳ ಸಾವು
ಹಾಸನ, ಫೆಬ್ರವರಿ 13: ಚಲಿಸುತ್ತಿದ್ದ ಕಂಟೈನರ್‌ಗೆ ಹಿಂಬದಿಯಿಂದ ಕಾರು ಡಿಕ್ಕಿಯಾದ ಪರಿಣಾಮ, ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಲು ಹೋಗುತ್ತಿದ್ದ ಒಬ್ಬ ಅಬಕಾರಿ ಇಲಾಖೆಯ ಅಧಿಕಾರಿ ಸೇರಿದಂತೆ ಮೂವರು ಐಟಿ ಉದ್ಯೋಗಿಗಳು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.
ಹಾಸನದಲ್ಲಿ ಪುಂಡ ಗಂಡಾನೆಗೆ ರೇಡಿಯೋ ಕಾಲರ್
ಈ ಭೀಕರ ರಸ್ತೆ ಅಪಘಾತದಲ್ಲಿ ಮಂಜುನಾಥ್, ಚೇತನ್, ವಿಕ್ರಂ, ಅಭಿಷೇಕ್ ಮೃತ ದುರ್ದೈವಿಗಳಾಗಿದ್ದು, ಈ ನಾಲ್ವರೂ ಸ್ನೇಹಿತರಾಗಿದ್ದರು. ಅವರು ಒಂದೇ ಕಾರಿನಲ್ಲಿ ಪ್ರಯಾಣ ಬೆಳಸುವಾಗ ಕಾರು ಮತ್ತು ಕಂಟೈನರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಮೌಂಟ್ ಎವರೆಸ್ಟ್ ಹತ್ತದೇ ಸುಳ್ಳು ದಾಖಲೆ ಸಲ್ಲಿಕೆ- ಇಬ್ಬರು ಭಾರತೀಯ ಪರ್ವತಾರೋಹಿಗಳಿಗೆ ನೇಪಾಳ ನಿಷೇಧ | Oneindia Kannada
ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಹಾಸನ ಕಡೆಗೆ ನಾಲ್ವರು ಸ್ನೇಹಿತರು ಪ್ರಯಾಣಿಸುತ್ತಿದ್ದರು. ಈ ವೇಳೆ ಚನ್ನರಾಯಪಟ್ಟಣ ಸಮೀಪ ಕಂಟೈನರ್‌ಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿದೆ. ಇದರ ಪರಿಣಾಮ ನಾಲ್ವರು ಸ್ನೇಹಿತರು ಅಪಘಾತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.