ಬೇಲೂರು, ಹಂದಿ ಉರುಳಿನಲ್ಲಿ ಮೃತವಾದ ಚಿರತೆ
ಬೇಲೂರು: ಹಂದಿ ಹಿಡಿಯಲು ಹಾಕಿದ್ದ ಉರುಳಿಗೆ ಆರು ವರ್ಷದ ಚಿರತೆಯೊಂದು ಸಿಲುಕಿ ಮೃತಪಟ್ಟಿರುವ ಘಟನೆ ಬೇಲೂರು ತಾಲ್ಲೂಕಿನ ಹೆಬ್ಬಾಳು ಸಮೀಪದ ಅಮ್ಮನಗುಡಿ ಕಾವಲ್ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಅಮ್ಮನಗುಡಿ ಕಾವಲ್ ಅರಣ್ಯ ಪ್ರದೇಶದ ಸಮೀಪವಿರುವ ತೋಟವೊಂದರಲ್ಲಿ ಕೂಲಿ ಕಾರ್ಮಿಕ ಮೃತಪಟ್ಟ ಚಿರತೆಯನ್ನು ನೊಡಿ ಶಿವಾಲದಹಳ್ಳಿ ಗ್ರಾಮಸ್ಥರಿಗೆ ತಿಳಿಸಿದ್ದು ಅವರು ನೊಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಕಂಡುಬಂದಿದೆ.[ನಿದ್ದೆಗೆಡಿಸಿದ್ದ ಚಿರತೆಯನ್ನು ಸೆರೆ ಹಿಡಿದ ಪದೂರು ಗ್ರಾಮದ ಯುವಕರು]

ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಗಿರೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ದುಷ್ಕರ್ಮಿಗಳು ಕಾಡು ಹಂದಿ ಸಾಯಿಸಲು ಹಾಕಿದ್ದ ಉರುಳುನಲ್ಲಿ ಸಿಲುಕಿ ಚಿರತೆ ಮೃತವಾಗಿದೆ ಎಂದು ಇಖಾಖೆ ಸ್ಪಷ್ಟಪಡಿಸಿದ್ದು, 'ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು' ಎಂದು ಹೇಳಿದರು.
ಈ ಹಿಂದೆ ಕಲ್ಲಹಳ್ಳಿ ಅರಣ್ಯ ಪ್ರದೇಶ ವ್ಯಾಪ್ತಿಯ ಬೇಲೂರು- ಹಳೇಬೀಡು ರಸ್ತೆಯಲ್ಲಿ ಎರಡು ವರ್ಷದ ಚಿರತೆ ವಾಹನಕ್ಕೆ ಡಿಕ್ಕಿಹೊಡೆದು ಅಸುನೀಗಿತ್ತು. ಈಗ ಮತ್ತೊಂದು ಚಿರತೆ ಉರುಳಿಗೆ ಸಿಲುಕಿದೆ. ಹೀಗೆ ಮಾನವ-ಪ್ರಾಣಿ ಸಂಘರ್ಷದಲ್ಲಿ ವನ್ಯಜೀವಿಗಳು ನಾಶವಾಗುತ್ತಿರುವುದು ಪ್ರಾಣಿಸಂಕುಲಕ್ಕೆ ತುಂಬಲಾದ ನಷ್ಟವಾಗಿದೆ ಎನ್ನುತ್ತಾರೆ ಪರಿಸರವಾದಿಗಳು.












Click it and Unblock the Notifications