ದೇಹದಾನ ಮಾಡಿ ಆದರ್ಶ ಮೆರೆದ ಹಾಸನದ ಮಹಿಳೆ
ಹಾಸನ, ಸೆಪ್ಟೆಂಬರ್ 22 : ನಗರದ ಸಂಗಮೇಶ್ವರ ಬಡಾವಣೆಯ ನಿವಾಸಿ 74 ವರ್ಷದ ಅನ್ನಪೂರ್ಣ ಶಿವನಂಜಪ್ಪ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಅನ್ನಪೂರ್ಣ ಶಿವನಂಜಪ್ಪ ಅವರು 06 ವರ್ಷಗಳ ಹಿಂದೆಯೇ ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಗೆ ತಮ್ಮ ದೇಹವನ್ನು ಮರಣೋತ್ತರ ದಾನ ಮಾಡಲು ನೋಂದಣಿ ಮಾಡಿಸಿದ್ದರು. ಅವರ ಇಚ್ಛೆಯಂತೆ ದೇಹವನ್ನು ಎಸ್.ಡಿ.ಎಂ.ಅಯುರ್ವೇದ ಕಾಲೇಜಿಗೆ ನೀಡಲಾಯಿತು. 20-09-2017 ರಂದು ಅನ್ನಪೂರ್ಣ ಶಿವನಂಜಪ್ಪ ನಿಧನರಾಗಿದ್ದರು.

ಈ ಸಂದರ್ಭದಲ್ಲಿ ಕಾಲೇಜು ಸಂಸ್ಥೆಯ ಪ್ರಾಂಶುಪಾಲ ಡಾ.ಪ್ರಸನ್ನ ನರಸಿಂಹ ರಾವ್ ಅವರು ಮಾತನಾಡಅನ್ನಪೂರ್ಣ ಅವರು ಸರಳ ಜೀವಿ ಮತ್ತು ಆಧ್ಯಾತ್ಮ ಚಿಂತಕರಾಗಿದ್ದವರು.
ತಮ್ಮ ದೇಹವನ್ನು ಮರಣೋತ್ತರ ದಾನ ಮಾಡಿ ನಮ್ಮ ಕಾಲೇಜಿನ ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶರೀರ ರಚನೆಯ ಜ್ಞಾನಾರ್ಜನೆಗೆ ಮತ್ತು ಸಂಶೋಧನೆಗೆ ಮಹತ್ತರ ಕೊಡುಗೆ ನೀಡಿ ಮರಣ ನಂತರ ದೇಹದಾನ ಮಾಡಲು ಇತರರಿಗೆ ಮಾದರಿಯಾಗಿದ್ದಾರೆ.
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗು ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಅವರ ಈ ಕೊಡುಗೆಗಾಗಿ ಅಭಿನಂದಿಸುತ್ತಾ, ಅವರ ಆತ್ಮಕ್ಕೆ ಶಾಂತಿ ಕೋರಿ, ಅವರ ಈ ಉದಾತ್ತ ಚಿಂತನೆ ಇತರರಿಗೆ ಮಾದರಿಯಾಗಲಿ ಎಂದು ಹಾರೈಸಿದರು.












Click it and Unblock the Notifications