ಹಾಸನ : 10 ಜನರ ತಂಡದಿಂದ ಅಂಚೆ ಕಚೇರಿಯಲ್ಲಿ 2 ಲಕ್ಷ ದರೋಡೆ

ಹಾಸನ, ಜೂನ್ 30 : 10 ಜನರ ತಂಡವೊಂದು ಹಾಸನದ ಅಂಚೆ ಕಚೇರಿಯಲ್ಲಿ 2 ಲಕ್ಷ ರೂಪಾಯಿ ದರೋಡೆ ಮಾಡಿರುವ ಘಟನೆ ನಡೆದಿದೆ. ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶನಿವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಹಾಸನದ ಪ್ರಧಾನ ಅಂಚೆ ಕಚೇರಿಯಲ್ಲಿ ಈ ಘಟನೆ ನಡೆದಿದೆ. 10 ಜನರ ತಂಡ ಅಂಚೆ ಕಚೇರಿಗೆ ಬಂದಿದ್ದು, ಅಂಚೆ ಸಹಾಯಕಿಯ ಗಮನ ಬೇರೆ ಕಡೆ ಸೆಳೆದು ಎರಡು ಲಕ್ಷ ನಗದು ಕಳವು ಮಾಡಿದೆ.

ಪಾಸ್‌ ಪುಸ್ತಕ ಎಂಟ್ರಿ ಮಾಡಿಸುವ ನೆಪದಲ್ಲಿ ಬಂದ ತಂಡದಲ್ಲಿದ್ದ ಮೂವರು ಕ್ಯಾಶ್ ಕೌಂಟರ್ ಬಳಿ ಬಂದಿದ್ದರು. ಉಳಿದವರು ಕೌಂಟರ್ ಮುಂಭಾಗ ಮಾತನಾಡುತ್ತಾ ನಿಂತಿದ್ದರು. ಅಂಚೆ ಸಹಾಯಕಿ ಕಾಂಚನಾ ಅವರ ಬಳಿ ಮಾತನಾಡುತ್ತಾ ಅವರ ಗಮನ ಬೇರೆಕರೆ ಸೆಳೆದು ಹಣ ದೋಚಿದ್ದಾರೆ.

2 lakh stolen form Hassan post office

ಸಿಸಿಟಿವಿಯಲ್ಲಿ ದುಷ್ಕರ್ಮಿಗಳ ಕೃತ್ಯ ಸೆರೆಯಾಗಿದೆ. ಶನಿವಾರ ಅಂಚೆ ಕಚೇರಿಯಲ್ಲಿ ಹೆಚ್ಚು ಜನರಿದ್ದರು. ಇದರ ಲಾಭ ಪಡೆದ ತಂಡ ಹಣವನ್ನು ಎಗರಿಸಿ ಪರಾರಿಯಾಗಿದೆ.

ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ಹುಡುಕಾಟ ನಡೆಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+