ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇವಲ 2 ಗಂಟೆಯಲ್ಲೇ ಓಮಿಕ್ರಾನ್ ಪತ್ತೆ ಹಚ್ಚುವ ಕಿಟ್ ಆವಿಷ್ಕಾರ

|
Google Oneindia Kannada News

ಗುವಾಹಟಿ, ಡಿಸೆಂಬರ್ 13: ಕೊರೊನಾದ ಹೊಸ ರೂಪಾಂತರಿಗೆ ಇಡೀ ವಿಶ್ವವೇ ಭಯ ಪಡುವಂತಾಗಿದೆ. ಬಹುಬೇಗ ಹರಡುವ ವೈರಸ್ ಇದಾಗಿದೆ.

ಈ ಸೋಂಕು ತಗುಲಿರುವುದನ್ನು ಕೇವಲ 2 ಗಂಟೆಗಳಲ್ಲಿ ಪತ್ತೆ ಮಾಡುವ ಕಿಟ್‌ವೊಂದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಎಂಸಿಆರ್) ಅಭಿವೃದ್ಧಿಪಡಿಸಿದೆ.

Breaking; ಕರ್ನಾಟಕದಲ್ಲಿ 3ನೇ ಓಮಿಕ್ರಾನ್ ಪ್ರಕರಣ ಪತ್ತೆBreaking; ಕರ್ನಾಟಕದಲ್ಲಿ 3ನೇ ಓಮಿಕ್ರಾನ್ ಪ್ರಕರಣ ಪತ್ತೆ

ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ಕೊಲ್ಕತ್ತ ಮೂಲದ ಜಿಸಿಸಿ ಬಯೋಟೆಕ್ ಕಂಪನಿಯು ಈ ಕಿಟ್‌ನ್ನು ಉತ್ಪಾದಿಸುತ್ತಿದೆ. ಶೇ. 100 ರಷ್ಟು ಫಲಿತಾಂಶ ನಿಖರವಾಗಿ ದೊರೆತಿರುವುದು ಪರಿಶೀಲನೆಗಳಿಂದ ದೃಢಪಟ್ಟಿದೆ ಎಂದು ಹೇಳಿದ್ದಾರೆ.

Omicron Test Kit Developed In Assam Gives Results In 2 Hours

ಈ ವಿಜ್ಞಾನಿಗಳ ತಂಡ ಕಳೆದ ವರ್ಷ ಜುಲೈನಲ್ಲಿ ಕೊರೊನಾ ವೈರಸ್‌ನ್ನು ಅತ್ಯಂತ ಯಶಸ್ವಿಯಾಗಿ ಪ್ರತ್ಯೇಕ ಮಾಡಿತ್ತು. ಈ ವಿನೂತನ ಸಾಧನೆ ಮಾಡಿದ ದೇಶದ 3ನೇ ಪ್ರಯೋಗಾಲಯ ಎಂಬ ಕೀರ್ತಿಗೆ ದಿಬ್ರೂಘಡದ ಐಸಿಎಂಆರ್ - ಆರ್‌ಎಂಆರ್‌ಸಿ ಭಾಜನವಾಗಿತ್ತು.

ಅವರು ಓಮಿಕ್ರಾನ್‌ನೊಂದಿಗೆ ಪತ್ತೆಯಾದ ಇತರೆ ರಾಜ್ಯಗಳ ಕೆಲವು ಸೇರಿದಂತೆ ಕೋವಿಡ್ ರೋಗಿಗಳ 1,000 ಕ್ಕೂ ಹೆಚ್ಚು ಮಾದರಿಗಳೊಂದಿಗೆ ಈ ಕಿಟ್ ಅನ್ನು ಪರೀಕ್ಷಿಸಿ ಸ್ಕ್ಯಾನ್ ಮಾಡಿದ್ದಾರೆ. ಪ್ರಸ್ತುತ, ಈ ಪರೀಕ್ಷಾ ಕಿಟ್‌ನ ಪರವಾನಗಿ ಪ್ರಕ್ರಿಯೆಯು ನಡೆಯುತ್ತಿದೆ ಮತ್ತು ಮುಂದಿನ ವಾರದಿಂದ ಲ್ಯಾಬ್‌ಗೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ, ಕರ್ನಾಟಕ, ದೆಹಲಿ, ರಾಜಸ್ತಾನ ಹಾಗೂ ಗುಜರಾತ್ ರಾಜ್ಯಗಳಲ್ಲಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದ್ದು, ಇದುವರೆಗೆ ದೇಶದಲ್ಲಿ 38 ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ಓಮಿಕ್ರಾನ್ ತಳಿಯ ಪತ್ತೆಗಾಗಿ ದಿಬ್ರೂಘಡದ ಐಸಿಎಂಆರ್ - ಆರ್‌ಎಂಆರ್‌ಸಿ ಓಮಿಕ್ರಾನ್ ತಳಿಯ ಪತ್ತೆಗಾಗಿ ಆರ್‌ಟಿಪಿಸಿಆರ್ ಪರೀಕ್ಷೆಯ ಕಿಟ್‌ನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ ಎಂದು ವಿಜ್ಞಾನಿ ಡಾ. ಬಿಸ್ವಜ್ಯೋತಿ ತಿಳಿಸಿದ್ದಾರೆ.

ಸೋಂಕಿತರ ಮಾದರಿಗಳಿಂದಲೇ ಕೆಲವೇ ಗಂಟೆಗಳಲ್ಲಿ ಓಮಿಕ್ರಾನ್ ಪತ್ತೆ ಮಾಡುವ ಕಿಟ್ ಇದಾಗಿದೆ. ಈಶಾನ್ಯ ಪ್ರಾಂತ್ಯದ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ತಂಡ ಈ ಕಿಟ್‌ನ್ನು ಅವಿಷ್ಕಾರಗೊಳಿಸಿದೆ.

ಸಂಗ್ರಹಿಸಿದ ಮಾದರಿಯಲ್ಲೇ ಓಮಿಕ್ರಾನ್ ವೈರಾಣು ತಳಿ ಇರುವುದನ್ನು ಪತ್ತೆ ಮಾಡಬಹುದಾಗಿದೆ. ವಿಜ್ಞಾನಿ ಡಾ. ಬಿಸ್ವಜ್ಯೋತಿ ಬೊರ್ಕಕೋತಿ ಅವರ ನೇತೃತ್ವದ ತಂಡ ಅಭಿವೃದ್ಧಿಪಡಿಸಿದೆ.

ಕರ್ನಾಟಕದಲ್ಲಿ ಓಮಿಕ್ರಾನ್ ಮೂರನೇ ಪ್ರಕರಣ ಭಾನುವಾರ ಪತ್ತೆಯಾಗಿದೆ. ಖುದ್ದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರೇ ಅದನ್ನು ದೃಢಪಡಿಸಿದ್ದಾರೆ.

ದಕ್ಷಿಣ ಆಫ್ರಿಕಾದಿಂದ ಬಂದ ವ್ಯಕ್ತಿಯಲ್ಲಿ ಓಮಿಕ್ರಾನ್ ಪತ್ತೆಯಾಗಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ 5 ಮಂದಿ ಹಾಗೂ ದ್ವಿತೀಯ ಮಟ್ಟದಲ್ಲಿ 15 ಮಂದಿ ಸಂಪರ್ಕಕ್ಕೆ ಬಂದಿದ್ದಾರೆ.

ದಕ್ಷಿಣ ಆಫ್ರಿಕಾದಿಂದ ಬಂದ 34 ವರ್ಷದ ವ್ಯಕ್ತಿಯಲ್ಲಿ ಓಮಿಕ್ರಾನ್ ಕಾಣಿಸಿಕೊಂಡಿದ್ದು ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ವರದಿಗಾಗಿ ಕಾಯಲಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.

English summary
At a time when fresh details and concerns are emerging every day about Omicron, the Indian Council of Medical Research's (ICMR) Regional Medical Research Centre (RMRC) at Assam's Dibrugarh has come up with a testing kit that can detect the new Covid variant in just two hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X