ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರೇಕಿಂಗ್; ಅಸ್ಸಾಂನಲ್ಲಿ ಭೂ ಕುಸಿತ; 20 ಸಾವು

|
Google Oneindia Kannada News

ಗೌಹಾತಿ, ಜೂನ್ 02 : ದಕ್ಷಿಣ ಅಸ್ಸಾಂನ ವಿವಿಧ ಜಿಲ್ಲೆಗಳಲ್ಲಿ ಭೂಕುಸಿತದಿಂದಾಗಿ 20 ಜನರು ಮೃತಪಟ್ಟಿದ್ದಾರೆ. ಮಣ್ಣಿನ ಅಡಿ ಇನ್ನೂ ಹಲವರು ಸಿಕ್ಕಿ ಹಾಕಿಕೊಂಡಿರುವ ಶಂಕೆ ಇದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಮಂಗಳವಾರ ಮಧ್ಯಾಹ್ನ ದಕ್ಷಿಣ ಅಸ್ಸಾಂನ ಮೂರು ಜಿಲ್ಲೆಗಳಲ್ಲಿ ಭೂಕುಸಿತ ಉಂಟಾಗಿದೆ. ಈ ಘಟನೆಯಲ್ಲಿ 20 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ನಮ್ಮತ್ರ ದುಡ್ಡಿಲ್ಲ, ನಮ್ಮನ್ನು ಕರೆಸಿಕೊಳ್ಳಿ: ಚೆನ್ನೈನಲ್ಲಿ ಅಸ್ಸಾಂ ಜನರು ಮನವಿನಮ್ಮತ್ರ ದುಡ್ಡಿಲ್ಲ, ನಮ್ಮನ್ನು ಕರೆಸಿಕೊಳ್ಳಿ: ಚೆನ್ನೈನಲ್ಲಿ ಅಸ್ಸಾಂ ಜನರು ಮನವಿ

Land Slide In Assam 20 Dead Several Injured

ದಕ್ಷಿಣ ಅಸ್ಸಾಂನ ಹಲವು ಪ್ರದೇಶಗಳಲ್ಲಿ ಕಳೆದ ವಾರದಿಂದ ನಿರಂತರವಾಗಿ ಮಳೆಯಾಗುತ್ತಿದೆ. ಇದರಿಂದಾಗಿಯೇ ಭೂ ಕುಸಿತ ಸಂಭವಿಸಿದೆ. ಮೇ 26 ಮತ್ತು 27ರಂದು ಸಹ ಹಲವು ಪ್ರದೇಶದಲ್ಲಿ ಭೂ ಕುಸಿತವಾಗಿತ್ತು.

ಅಸ್ಸಾಂನಲ್ಲಿ ಅಧಿಕ ಮಳೆಯ ಮುನ್ಸೂಚನೆ ಅಸ್ಸಾಂನಲ್ಲಿ ಅಧಿಕ ಮಳೆಯ ಮುನ್ಸೂಚನೆ

ದಕ್ಷಿಣ ಅಸ್ಸಾಂನ ಬೇರೆ ಬೇರೆ ಪ್ರದೇಶದಲ್ಲಿ ಈ ಭೂ ಕುಸಿತ ಸಂಭವಿಸಿದೆ. ಚಾಚರ್‌ ಜಿಲ್ಲೆಯಲ್ಲಿ 7 ಜನರು ಮತ್ತು ಹೈಲಕಂಡಿ ಜಿಲ್ಲೆಯಲ್ಲಿ 7 ಹಾಗೂ ಕರೀಂಗಂಜ್ ಜಿಲ್ಲೆಯಲ್ಲಿ 6 ಜನರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ದೇಶದಲ್ಲಿ ಸರಾಸರಿಗಿಂತಲೂ ಅಧಿಕ ಮಳೆ, ಈ ಬಾರಿ ಉತ್ತಮ ಮುಂಗಾರು ದೇಶದಲ್ಲಿ ಸರಾಸರಿಗಿಂತಲೂ ಅಧಿಕ ಮಳೆ, ಈ ಬಾರಿ ಉತ್ತಮ ಮುಂಗಾರು

ಮಣ್ಣಿನ ಅವಶೇಷಗಳ ಅಡಿ ಇನ್ನೂ ಹಲವರು ಸಿಲುಕಿದ್ದಾರೆ. ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭವಾಗಿದೆ.

ಕಳೆದ ವಾರದಿಂದ ಅಸ್ಸಾಂನಲ್ಲಿ ಭಾರಿ ಮಳೆಯಾಗುತ್ತಿದೆ. 9 ಸಾವಿರ ಗ್ರಾಮಸ್ಥರನ್ನು 35 ನಿರಾಶ್ರಿತರ ಶಿಬಿರಗಳಿಗೆ ಕಳುಹಿಸಲಾಗಿದೆ.

English summary
20 People dead and several injured in South Assam due to landslides. Region witnessed for heavy rain for the past couple of days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X