Breaking: ಹಳಿ ತಪ್ಪಿದ ಗುವಾಹಟಿ-ಬಿಕಾನೇರ್ ಎಕ್ಸ್‌ಪ್ರೆಸ್ ರೈಲು
ಗುವಾಹಟಿ, ಜನವರಿ 13: ಪಾಟ್ನಾ-ಗುವಾಹಟಿ-ಬಿಕಾನೆರ್ ಎಕ್ಸ್ ಪ್ರೆಸ್ ರೈಲು ಗುರುವಾರ ಸಂಜೆ ಪಶ್ಚಿಮ ಬಂಗಾಳದಲ್ಲಿ ಹಳಿತಪ್ಪಿದ್ದು, 4 ರಿಂದ 5 ಬೋಗಿಗಳು ಉರುಳಿ ಬಿದ್ದಿದೆ. ಬಿಕಾನೇರ್-ಗುವಾಹಟಿ ರೈಲು ಅಪಘಾತದ ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ನೂರಾರು ಮಂದಿ ಸಣ್ಣಪುಟ್ಟ ಗಾಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈಶಾನ್ಯ ಫ್ರಂಟಿಯರ್ ರೈಲು ವಿಭಾಗಕ್ಕೆ ಬರುವ ಪಟನಾ-ಗುವಾಹಟಿ-ಬಿಕಾನೆರ್ ಎಕ್ಸ್ ಪ್ರೆಸ್ ಅಪಘಾತದಲ್ಲಿ ಸಾಕಷ್ಟು ಸಾವು ನೋವು ಆಗಿರುವ ಶಂಕೆ ವ್ಯಕ್ತವಾಗಿದ್ದು, ರೈಲ್ಷೇ ರಕ್ಷಣಾ ವಿಭಾಗ ಕೂಡ ತುರ್ತಾಗಿ ಸ್ಥಳಕ್ಕೆ ತೆರಳಿದೆ.
In an unfortunate accident, 12 Coaches of Bikaner - Guwahati Exp. derailed near New Maynaguri (West Bengal) this evening.
— Ashwini Vaishnaw (@AshwiniVaishnaw) January 13, 2022
Personally monitoring the situation for swift rescue operations.
ಬೆಳಗ್ಗೆ ಪಟನಾದಿಂದ ಹೊರಟಿದ್ದ ಪ್ರಯಾಣಿಕ ರೈಲು ಜಲಪಾಯಿಗುರಿ ಜಿಲ್ಲೆಯ ಮೈನಾಗುರಿಯ ದೊಮೊಹನಿಯಲ್ಲಿ ಅವಗಢಕ್ಕೆ ತುತ್ತಾಗಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.
Recommended Video

ಎಲ್ಲವೂ ಸ್ಲೀಪರ್ ಕೋಚ್ ನ ಬೋಗಿಗಳಾಗಿವೆ ಎಂದು ವರದಿಯಾಗಿದೆ. ಪಟನಾದಿಂದ ಗುವಾಹಟಿಗೆ ಹೊರಟಿದ್ದ ವೇಳೆ ರೈಲು ಅಪಘಾತಕ್ಕೆ ಈಡಾಗಿದೆ. ಅಪಘಾತದಲ್ಲಿ 4 ರಿಂದ 5 ಬೋಗಿಗಳು ಸಂಪೂರ್ಣವಾಗಿ ತಲೆಕೆಳಗಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯ ಮುಂದುವರೆದಿದೆ.
#UPDATE | High-level Railway Safety inquiry ordered in the Guwahati-Bikaner Express 15633 derailment; Railway Helpline numbers - 03612731622, 03612731623: Indian Railways
— ANI (@ANI) January 13, 2022
ಗುವಾಹಟಿ-ಬಿಕಾನೇರ್ ಎಕ್ಸ್‌ಪ್ರೆಸ್ ಹಳಿತಪ್ಪಿದ ಬಗ್ಗೆ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, "ನಾನು ನಾಳೆ ಬೆಳಿಗ್ಗೆ ಘಟನೆ ನಡೆದ ಪ್ರದೇಶವನ್ನು ತಲುಪುತ್ತಿದ್ದೇನೆ. ಸ್ಥಳದಲ್ಲಿ ವೈದ್ಯಕೀಯ ತಂಡಗಳು, ಹಿರಿಯ ಅಧಿಕಾರಿಗಳು ಇದ್ದಾರೆ. ಪ್ರಧಾನಿ ಮೋದಿ ಕೂಡ ಪರಿಸ್ಥಿತಿ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಅವಲೋಕಿಸಿದ್ದಾರೆ. ನಾವು ರಕ್ಷಣೆ ಕಾರ್ಯಾಚರಣೆ ನಡೆಸುತ್ತಿದ್ದೇವೆ," ಎಂದು ತಿಳಿಸಿದ್ದಾರೆ.
ಮೋದಿ ಸಂತಾಪ
ಈ ದುರ್ಘಟನೆಯ ವಿವರಗಳನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಂದ ಕೇಳಿ ಪಡೆದುಕೊಂಡಿದ್ದೇನೆ. ಮೃತರ ಕುಟುಂಬಕ್ಕೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಸೂಚಿಸಿದ್ದೇನೆ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.
''ದೋಮೊಹಾನಿ ಮತ್ತು ನ್ಯೂ ಮೇನಗುರಿ ಸಂಜೆ 5 ಗಂಟೆಗೆ ಅಪಘಾತ ಸಂಭವಿಸಿದೆ. ಸುಮಾರು 10 ಕೋಚ್‌ಗಳು ಪರಿಣಾಮ ಬೀರಿವೆ. 3 ಸಾವು, 20 ಮಂದಿಗೆ ಗಾಯ; ಮೃತರಿಗೆ 5 ಲಕ್ಷ, ತೀವ್ರ ಗಾಯಗೊಂಡವರಿಗೆ 1 ಲಕ್ಷ, ಸಣ್ಣಪುಟ್ಟ ಗಾಯಗಳಿಗೆ 25,000 ರೂ. ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ,'' ಎಂದು ಈಶಾನ್ಯ ರೈಲ್ವೆ ಮುಖ್ಯ ಪಿಆರ್‌ಒ ಉನೀತ್ ಕೌರ್ ಹೇಳಿದ್ದಾರೆ.
ಅಪಘಾತದಿಂದ ಸಂತ್ರಸ್ತರಾದವರಿಗೆ ಸಹಾಯವನ್ನು ವಿಸ್ತರಿಸುವ ಪೂರ್ವ ರೈಲ್ವೇಯು ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಸಹಾಯಕ್ಕಾಗಿ ರಾಜಸ್ಥಾನ (01512725942), ಅಸ್ಸಾಂ (0361-2731621, 2731622, 2731623), ಮತ್ತು ಪಶ್ಚಿಮ ಬಂಗಾಳ (8134054999) ಗಾಗಿ ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಹಂಚಿಕೊಂಡಿದೆ.
ಬಿಕಾನೇರ್-ಗುವಾಹಟಿ ಎಕ್ಸ್‌ಪ್ರೆಸ್ ಹಳಿತಪ್ಪಿದ ಕಾರಣ ಪೂರ್ವ ರೈಲ್ವೆಯು ರೈಲ್ವೇ ಸಮಯಗಳಲ್ಲಿ ಬದಲಾವಣೆಯನ್ನು ಘೋಷಿಸಿದೆ. "15633 ರ ಹಳಿತಪ್ಪಿದ ಕಾರಣ ಎನ್.ಎಫ್. ರೈಲ್ವೇ, 13147ಅಪ್ ಸೀಲ್ಡಾ - ಬಮನ್‌ಹಾಟ್ ಉತ್ತರಬಂಗಾ ಎಕ್ಸ್‌ಪ್ರೆಸ್ (ಜೆ.ಸಿ.ಒ 13.01.2022) ನ್ಯೂ ಜಲ್ಪೈಗುರಿ ಮತ್ತು 13148 ಡೌನ್ ಉತ್ತರಬಂಗಾ ಎಕ್ಸ್‌ಪ್ರೆಸ್‌ನಲ್ಲಿ (ಜೆ.ಸಿ.ಒ 14.01.2022) ಅಲ್ಪಾವಧಿಗೆ ಹೊಸ ಜಲ್ಪೈಗುರಿಯಿಂದ ಸಂಚರಿಸಲಿದೆ.
ಅಪಘಾತದಲ್ಲಿ ಸಿಲುಕಿರುವ ಪ್ರಯಾಣಿಕರನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಎರಡು ತಂಡಗಳನ್ನು ಧಾವಿಸಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications