ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸಿಎಎ-ಎನ್‌ಆರ್‌ಸಿ ಭಾರತದ ಮುಸ್ಲಿಂ ನಾಗರಿಕರ ವಿರುದ್ಧವಲ್ಲ' ಎಂದ ಮೋಹನ್‌ ಭಾಗವತ್‌

|
Google Oneindia Kannada News

ಗುವಾಹಟಿ, ಜು.21: ''ಸಿಎಎ-ಎನ್‌ಆರ್‌ಸಿ (ಪೌರತ್ವ ತಿದ್ದುಪಡಿ ಕಾಯ್ದೆ-ನಾಗರಿಕರ ರಾಷ್ಟ್ರೀಯ ನೋಂದಣಿ) ಭಾರತದ ಮುಸ್ಲಿಂ ನಾಗರಿಕರಿಗೆ ಸಂಬಂಧಿಸಿದಲ್ಲ. ಸಿಎಎ ಮತ್ತು ಉದ್ದೇಶಿತ ಎನ್‌ಆರ್‌ಸಿ ಬಗ್ಗೆ ಭಾರತದ ನಾಗರಿಕರು ಚಿಂತಿಸಬೇಕಾಗಿಲ್ಲ,'' ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಬುಧವಾರ ಹೇಳಿದ್ದಾರೆ.

ಗುವಾಹಟಿಯಲ್ಲಿ ನಾನಿ ಗೋಪಾಲ್ ಮಹಂತಾ ಬರೆದಿರುವ ಎನ್‌ಆರ್‌ಸಿ ಮತ್ತು ಸಿಎಎ, ಅಸ್ಸಾಂ ಮತ್ತು ಇತಿಹಾಸದ ರಾಜಕೀಯ ಕುರಿತು ಪೌರತ್ವ ಚರ್ಚೆ (Citizenship Debate over NRC and CAA, Assam and the Politics of History) ಎಂಬ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಸ್ಸಾಂ ಮುಖ್ಯಮಂತ್ರಿ ಡಾ.ಹಿಮಂತ ಬಿಸ್ವಾ ಶರ್ಮಾ ಭಾಗವಹಿಸಿದ್ದರು.

ಚುನಾವಣೆಗೂ ಮುನ್ನ ಆರ್‌ಎಸ್‌ಎಸ್‌ನಲ್ಲಿ ಬದಲಾವಣೆ: ನೂತನ ಬಿಜೆಪಿ ಸಂಪರ್ಕ್ ಅಧಿಕಾರಿ ಅರುಣ್‌ ಯಾರು?ಚುನಾವಣೆಗೂ ಮುನ್ನ ಆರ್‌ಎಸ್‌ಎಸ್‌ನಲ್ಲಿ ಬದಲಾವಣೆ: ನೂತನ ಬಿಜೆಪಿ ಸಂಪರ್ಕ್ ಅಧಿಕಾರಿ ಅರುಣ್‌ ಯಾರು?

''ಸಿಎಎ-ಎನ್‌ಆರ್‌ಸಿ ಯಾವುದೇ ಭಾರತೀಯ ನಾಗರಿಕರ ವಿರುದ್ಧ ಮಾಡಲಾದ ಕಾನೂನು ಅಲ್ಲ. ಭಾರತದ ಮುಸ್ಲಿಂ ನಾಗರಿಕರಿಗೆ ಸಿಎಎ ಹಾನಿಯಾಗುವುದಿಲ್ಲ. ರಾಜಕೀಯ ಲಾಭ ಪಡೆಯಲು ಕೆಲವರು ಇದನ್ನು ಹಿಂದೂ-ಮುಸ್ಲಿಂ ಸಮಸ್ಯೆಯನ್ನಾಗಿ ಮಾಡಿದ್ದಾರೆ. ರಾಜಕೀಯ ಲಾಭಕ್ಕಾಗಿ, ಸಿಎಎ-ಎನ್‌ಆರ್‌ಸಿ ಎರಡೂ ವಿಷಯಗಳನ್ನು ಹಿಂದೂ-ಮುಸ್ಲಿಂ ವಿಷಯವಾಗಿ ಮಾಡಲಾಗಿದೆ. ಇದು ಹಿಂದೂ-ಮುಸ್ಲಿಮರ ವಿಷಯವಲ್ಲ,'' ಎಂದು ಮೋಹನ್‌ ಭಾಗವತ್‌ ಪುನರುಚ್ಛರಿಸಿದರು.

CAA-NRC is not against Muslim citizens of India says RSS chief Mohan Bhagwat

''ಭಾರತ ವಿಭಜನೆಯ ನಂತರ, ಹೊಸ ರಾಷ್ಟ್ರಗಳು ತಮ್ಮ ಅಲ್ಪಸಂಖ್ಯಾತ ಸಮುದಾಯಗಳನ್ನು ಸಮಾನವಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡಿವೆ. ನಾವು ಇದನ್ನು ಇಂದಿನವರೆಗೂ ಅನುಸರಿಸುತ್ತಿದ್ದೇವೆ. ಆದರೆ ಪಾಕಿಸ್ತಾನ ಹಾಗೆ ಮಾಡಲಿಲ್ಲ,'' ಎಂದು ಮೋಹನ್‌ ಭಾಗವತ್‌ ದೂರಿದರು.

''ಸ್ವತಂತ್ರ ದೇಶ ಇರಬೇಕೆಂಬ ಕನಸಿನಿಂದ ಎಲ್ಲಾ ಜನರು ಬ್ರಿಟಿಷರ ವಿರುದ್ಧ ಹೋರಾಡಿದರು. ದೇಶ ವಿಭಜನೆಯ ಸಮಯದಲ್ಲಿ [ಭಾರತೀಯ] ಜನರ ಒಪ್ಪಿಗೆಯನ್ನು ತೆಗೆದುಕೊಳ್ಳಲಾಗಿಲ್ಲ. ಆ ಸಮಯದಲ್ಲಿ ಒಮ್ಮತವನ್ನು ಕೋರಿದ್ದರೆ, ದೇಶವು ವಿಭಜನೆಯಾಗುತ್ತಿರಲಿಲ್ಲ. ಆದರೆ ನಾಯಕರು ನಿರ್ಧಾರ ತೆಗೆದುಕೊಂಡರು ಮತ್ತು ಸಾರ್ವಜನಿಕರು ಅದನ್ನು ಒಪ್ಪಿಕೊಂಡರು,'' ಎಂದು ಭಾಗವತ್‌ ವಿವರಿಸಿದ್ದಾರೆ.

ಆರ್‌ಎಸ್‌ಎಸ್, ವಿಎಚ್‌ಪಿ ವಿರೋಧ: ಜನಸಂಖ್ಯೆ ಮಸೂದೆ ಮರುಪರಿಶೀಲನೆಗೆ ಮುಂದಾದ ಯುಪಿ ಸರ್ಕಾರಆರ್‌ಎಸ್‌ಎಸ್, ವಿಎಚ್‌ಪಿ ವಿರೋಧ: ಜನಸಂಖ್ಯೆ ಮಸೂದೆ ಮರುಪರಿಶೀಲನೆಗೆ ಮುಂದಾದ ಯುಪಿ ಸರ್ಕಾರ

''ವಿಭಜನೆಯ ನಿರ್ಧಾರದ ನಂತರ ಹೆಚ್ಚಿನ ಸಂಖ್ಯೆಯ ಜನರನ್ನು [ತಮ್ಮ ಮನೆಗಳಿಂದ] ಹೊರಹಾಕಲಾಗಿದೆ. ಇಂದಿಗೂ ಈ ಜನರನ್ನು ಹೊರಹಾಕಲಾಗುತ್ತಿದೆ. ಅಷ್ಟಕ್ಕೂ ಆ ಜನರ ತಪ್ಪು ಏನು? ಆ ಜನರ ಬಗ್ಗೆ ಯಾರು ಯೋಚಿಸುತ್ತಾರೆ? ಎಂದು ಪ್ರಶ್ನಿಸಿದ ಮೋಹನ್‌ ಭಾಗವತ್‌, ಆ ಜನರಿಗೆ ಸಹಾಯ ಮಾಡುವುದು ನಮ್ಮ ನೈತಿಕ ಕರ್ತವ್ಯ,'' ಎಂದು ಹೇಳಿದರು.

CAA-NRC is not against Muslim citizens of India says RSS chief Mohan Bhagwat

''ನಮಗೆ ಯಾವುದೇ ಧರ್ಮ, ಭಾಷೆ ಅಥವಾ ಪ್ರದೇಶದೊಂದಿಗೆ ಸಮಸ್ಯೆಗಳಿಲ್ಲ. ಪ್ರಾಬಲ್ಯದ ಉದ್ದೇಶ ಹೊಂದಿರುವ ಯಾರಾದರೂ ಏಕರೂಪತೆಯನ್ನು ಹೇರಲು ಪ್ರಯತ್ನಿಸಿದಾಗ ಸಮಸ್ಯೆ ಪ್ರಾರಂಭವಾಗುತ್ತದೆ,'' ಎಂದು ಭಾಗವತ್‌ ಅಭಿಪ್ರಾಯಿಸಿದ್ದಾರೆ.

ಯಾವುದೇ ನಿರ್ದಿಷ್ಟ ಧರ್ಮಕ್ಕೆ ವಿರುದ್ಧವಲ್ಲ ಎನ್‌ಆರ್‌ಸಿ

''ಎನ್‌ಆರ್‌ಸಿ ನಮ್ಮ ದೇಶದ ಪ್ರಜೆ ಯಾರು ಎಂದು ತಿಳಿಯುವ ವಿಧಾನವಾಗಿದೆ. ಇದು ಯಾವುದೇ ನಿರ್ದಿಷ್ಟ ಧರ್ಮಕ್ಕೆ ವಿರುದ್ಧವಲ್ಲ. ದೇಶದ ರಾಜಕೀಯದಲ್ಲಿ, ರಾಜಕೀಯ ಮೈಲೇಜ್ ಪ್ರಕಾರ ಮಾತ್ರ ಇದನ್ನು ಪರಿಗಣಿಸಲಾಗುತ್ತದೆ. ಕೆಲವರು ಇದನ್ನು ಕೋಮುವಾದಿ ಮಾರ್ಗಕ್ಕೆ ತಂದಿದ್ದಾರೆ. ಕೆಲವರು ಇದನ್ನು ಹಿಂದೂ-ಮುಸ್ಲಿಂ ಸಮಸ್ಯೆಯನ್ನಾಗಿ ಮಾಡಿದ್ದಾರೆ,'' ಎಂದು ಮೋಹನ್‌ ಭಾಗವತ್‌ ಆರೋಪಿಸಿದರು.

''ಕರ್ತವ್ಯಗಳನ್ನು ಪಾಲಿಸದೆ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಹಕ್ಕುಗಳನ್ನು ಯಾರಾದರೂ ಕೇಳಿದಾಗ ಸಮಸ್ಯೆ ಉದ್ಭವಿಸುತ್ತದೆ. ನಾವು ಜಾತ್ಯತೀತತೆ, ಸಮಾಜವಾದ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಪ್ರಪಂಚದಿಂದ ಕಲಿಯಬೇಕಾಗಿಲ್ಲ. ಇದು ನಮ್ಮ ಸಂಪ್ರದಾಯ. ನಮ್ಮ ದೃಷ್ಟಿ ವಸುದೈವ ಕುಟುಂಬಕಂ (ಇಡೀ ಜಗತ್ತು ಕುಟುಂಬ). ಪ್ರದೇಶ, ಭಾಷೆ ಅಥವಾ ಧರ್ಮದೊಂದಿಗೆ ನಮಗೆ ಯಾವುದೇ ಸಮಸ್ಯೆಗಳಿಲ್ಲ. ಭಾಷೆಗಳು ಮತ್ತು ಜೀವನಶೈಲಿಯ ವ್ಯತ್ಯಾಸಗಳ ಹೊರತಾಗಿಯೂ, ಭಾರತೀಯ ನಾಗರಿಕತೆಯು ಸಾಮಾನ್ಯವಾಗಿದೆ,'' ಎಂದು ಹೇಳಿದರು.

(ಒನ್‌ಇಂಡಿಯಾ ಸುದ್ದಿ)

English summary
CAA-NRC is not against Muslim citizens of India says RSS chief Mohan Bhagwat
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X