ಎಂಥಾ ಗ್ರಹಚಾರ: ಚೀನಾದಿಂದಲೇ ಬಂತು ಮತ್ತೊಂದು ಡೆಡ್ಲಿ ವೈರಸ್?
ಗುವಾಹಟಿ, ಮೇ.05: ನೊವೆಲ್ ಕೊರೊನಾ ವೈರಸ್. ಜಾಗತಿಕ ಮಟ್ಟದಲ್ಲಿ ಮಾರಣಹೋಮ ನಡೆಸಿರುವ ಮಾರಕ ರೋಗಕ್ಕೆ ಬಲಿಯಾದವರು ಲಕ್ಷ ಲಕ್ಷ ಜನರು. ಚೀನಾದ ವುಹಾನ್ ನಗರದಲ್ಲಿ ಮೊದಲು ಕಾಣಿಸಿಕೊಂಡ ನೊವೆಲ್ ಕೊರನಾ ವೈರಸ್ ಭಾರತದಲ್ಲೂ ರೌದ್ರ ನರ್ತನ ನಡೆಸುತ್ತಿದೆ.
Recommended Video
ಕೊರೊನಾ ವರೈಸ್ ಹಾವಳಿಯಿಂದ ಭಾರತಕ್ಕೆ ಭಾರತವೇ ಲಾಕ್ ಡೌನ್ ಆಗಿದೆ. ಮಂಗಳವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ 1,521 ಮಂದಿ ಕೊರೊನಾಗೆ ಬಲಿಯಾಗಿದ್ರೆ, 46,541 ಜನರಿಗೆ ಸೋಂಕು ಕನ್ಫರ್ಮ್ ಆಗಿದೆ. 12,920 ಮಂದಿ ಗುಣಮುಖರಾಗಿದ್ರೆ, 32,045 ಜನರಿಗೆ ಚಿಕಿತ್ಸೆ ಮುಂದುವರಿದಿದೆ.
ಭಾರತೀಯರ ಜೀವ ಹಿಂಡುತ್ತಿರುವ ಕೊರೊನಾ ವೈರಸ್ ಕಾಟದ ನಡುವೆ ಮತ್ತೊಂದು ಡೆಡ್ಲಿ ವೈರಸ್ ಪ್ರಾಣಿಗಳ ಮಾರಣಹೋಮಕ್ಕೆ ಕಾರಣವಾಗಿದೆ. ಅಸ್ಸಾಂನಲ್ಲಿ ಕಾಣಿಸಿಕೊಂಡ ಡೇಂಜರಸ್ ಸೋಂಕಿನಿಂದ ಸಾವಿರಾರು ಹಂದಿಗಳು ಪ್ರಾಣ ಬಿಟ್ಟಿವೆ. 2019ರಲ್ಲಿ ರಾಷ್ಟ್ರೀಯ ಪ್ರಾಣ ಸಂರಕ್ಷಣಾ ಸಂಸ್ಥೆಯು ನೀಡಿರುವ ಅಂಕಿ-ಅಂಶಗಳ ಪ್ರಕಾರ ಅಸ್ಸಾಂನಲ್ಲಿ ಹಂದಿಗಳ ಸಂಖ್ಯೆಯು 21 ಲಕ್ಷದಿಂದ 30 ಲಕ್ಷಕ್ಕೆ ಏರಿಕೆಯಾಗಿತ್ತು.

2,800 ಹಂದಿಗಳ ಪ್ರಾಣ ತೆಗೆದ ಆಫ್ರಿಕನ್ ಹಂದಿ ಜ್ವರ
ಕೊರೊನಾ ವೈರಸ್ ನಿಂದ ದೇಶಕ್ಕೆ ದೇಶವೇ ನರಳುತ್ತಿದ್ದರೆ ಇದರ ನಡುವೆ ಅಸ್ಸಾಂನಲ್ಲಿ ಕಾಣಿಸಿಕೊಂಡ ಆಫ್ರಿನ್ ಹಂದಿಜ್ವರಕ್ಕೆ ಹಂದಿಗಳು ಪ್ರಾಣ ಬಿಡುತ್ತಿವೆ. ಕಳೆದ ಫೆಬ್ರವರಿಯಿಂದ ಈವರೆಗೂ ರಾಜ್ಯದಲ್ಲಿ 2,800 ಹಂದಿಗಳು ಮಾರಕ ಜ್ವರಕ್ಕೆ ಬಲಿಯಾಗಿವೆ. ಇನ್ನು ಎಲ್ಲ ಹಂದಿಗಳನ್ನು ವ್ಯಾಪಾರಿ ಉದ್ದೇಶದಿಂದ ಸಾಕಾಣಿಕೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.

ಡ್ರ್ಯಾಗನ್ ರಾಷ್ಟ್ರದಿಂದಲೇ ಅಸ್ಸಾಂಗೆ ಲಗ್ಗೆಯಿಟ್ಟ ವೈರಸ್
ನೊವೆಲ್ ಕೊರೊನಾ ವೈರಸ್ ಚೀನಾದಿಂದ ವಿಶ್ವಕ್ಕೆ ವ್ಯಾಪಿಸಿದ್ದು ಗೊತ್ತಿದೆ. ಅದೇ ರೀತಿ ಆಫ್ರಿಕನ್ ಹಂದಿಜ್ವರ ಕೂಡಾ ಚೀನಾದಿಂದಲೇ ಅಸ್ಸಾಂಗೆ ಲಗ್ಗೆ ಇಟ್ಟಿದೆ. ಈ ಹಿಂದೆ 2018 ರಿಂದ 2020ರ ಅವಧಿಯಲ್ಲಿ ಚೀನಾದಲ್ಲಿ ವ್ಯಾಪಾರಿ ದೃಷ್ಟಿಯಿಂದ ಸಾಕಿದ್ದ ಶೇ.60ರಷ್ಟು ಹಂದಿಗಳು ಆಫ್ರಿಕನ್ ಹಂದಿಜ್ವರದಿಂದಲೇ ಪ್ರಾಣ ಬಿಟ್ಟಿದ್ದವು ಎಂದು ಹೇಳಲಾಗುತ್ತಿದೆ.

ಸರ್ಕಾರದಿಂದ ಹಂದಿಗಳ ಸಾವು ನಿಯಂತ್ರಣಕ್ಕೆ ಮುನ್ನೆಚ್ಚರಿಕೆ
ಅಸ್ಸಾಂನಲ್ಲಿ ಪಶುವೈದ್ಯಕೀಯ ಮತ್ತು ಪಶುಸಂಗೋಪನಾ ಇಲಾಖೆ ಅಧಿಕಾರಿಗಳ ಜೊತೆಗೆ ಮುಖ್ಯಮಂತ್ರಿ ಸರ್ಬಾನಂದ್ ಸೋನೋವಾಲ್ ಚರ್ಚೆ ನಡೆಸಿದ್ದಾರೆ. ರಾಜ್ಯದಲ್ಲಿ ಹಂದಿ ಸಾಕಾಣಿಕೆಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಲು ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗುತ್ತಿದೆ. ರಾಜ್ಯದಲ್ಲಿರುವ ಹಂದಿ ಸಾಕಾಣಿಕಾ ಕೇಂದ್ರಗಳ ಪಟ್ಟಿ ಮಾಡುವಂತೆ ಸೂಚಿಸಲಾಗಿದ್ದು, ನಷ್ಟು ಸಂಭವಿಸದಂತೆ ಸರ್ಕಾರದಿಂದ ಕ್ರಮ ತೆಗೆದುಕೊಳ್ಳಲು ರಾಜ್ಯ ಸರ್ಕಾರವು ಮುಂದಾಗಿದೆ.

ಆಫ್ರಿಕನ್ ಹಂದಿಜ್ವರ ಮೊದಲು ಕಾಣಿಸಿಕೊಂಡಿದ್ದು ಯಾವಾಗ?
ವಿಶ್ವದಲ್ಲೇ ಮೊದಲು ಆಫ್ರಿಕನ್ ಹಂದಿಜ್ವರವು 1921ರಲ್ಲಿ ಕೀನ್ಯಾದ ಎಥಿಯೋಪಿಯಾದಲ್ಲಿ ಕಾಣಿಸಿಕೊಂಡಿತು. ಆದರೆ ಅಂದು ಸುತ್ತಮುತ್ತಲಿನ ರಾಷ್ಟ್ರಗಳಲ್ಲಿ ಆಗಲಿ, ಸ್ವತಃ ಕೀನ್ಯಾದಲ್ಲೇ ಆದರೂ ಅಷ್ಟಾಗಿ ಸೋಂಕು ಮಾರಕ ಪರಿಣಾಮವನ್ನು ಬೀರಲಿಲ್ಲ.












Click it and Unblock the Notifications