Get Updates
Get notified of breaking news, exclusive insights, and must-see stories!

ಗುರ್ ಗಾಂವ್ ನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು 6 ಮಂದಿ ಸಾವು

ಗುರ್ ಗಾಂವ್, ಜನವರಿ 24: ನಿರ್ಮಾಣ ಹಂತದಲ್ಲಿದ್ದ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು, 6 ಮಂದಿ ಮೃತಪಟ್ಟು, ಕನಿಷ್ಠ ಇಬ್ಬರು ಒಳಗೆ ಸಿಲುಕಿದ ಘಟನೆ ಗುರುವಾರದಂದು ಗುರ್ ಗಾಂವ್ ನ ಉಲ್ಲಾವಾಸ್ ಗ್ರಾಮದಲ್ಲಿ ಸಂಭವಿಸಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ರಾಜ್ಯ ತಂಡ ಹಾಗೂ ಗಡಿ ಭದ್ರತಾ ಪಡೆಯಿಂದ ಅವಶೇಷಗಳನ್ನು ಬುಲ್ಡೋಜರ್ ಮೂಲಕ ತೆರವು ಮಾಡಲಾಗುತ್ತಿದೆ.

ಈ ಕಟ್ಟಡವು ದಯಾರಾಮ್ ಎಂಬುವರಿಗೆ ಸೇರಿದ್ದಾಗಿದೆ. ಹತ್ತಿರದ ಸೆಕ್ಟರ್ ಗಳಲ್ಲಿ ಭದ್ರತಾ ಸಿಬ್ಬಂದಿಯಾಗಿ ನಿಯೋಜಿಸಿದ ಹಾಗೂ ನೇಮಕ ಮಾಡಿದವರು ಹತ್ತಿರ ಹತ್ತಿರ ಇಪ್ಪತ್ತು ಮಂದಿ ಈ ಕಟ್ಟಡದಲ್ಲಿ ಬಾಡಿಗೆಗೆ ವಾಸವಿದ್ದರು ಎಂದು ಪೊಲೀಸರು ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

One killed, at least 20 trapped after building collapses in Gurgaon

ನಾಲ್ಕನೇ ಅಂತಸ್ತಿನ ಕೆಲ ಭಾಗಗಳನ್ನು ಹೊರತುಪಡಿಸಿ, ಇಡೀ ಕಟ್ಟಡ ನಿರ್ಮಾಣ ಪೂರ್ಣವಾಗಿತ್ತು. ಸುತ್ತಮುತ್ತ ಇರುವವರು ಹೇಳುವ ಪ್ರಕಾರ, ಅನುಮತಿ ಪಡೆಯದೆ ಈ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಕಟ್ಟಡದ ಮಾಲೀಕರನ್ನು ಪತ್ತೆ ಹಚ್ಚಲಾಗಿದೆ. ಕಟ್ಟಡ ಕುಸಿಯುವುದಕ್ಕೆ ಏನು ಕಾರಣ ಎಂಬುದನ್ನು ತನಿಖೆ ನಂತರವೇ ನಿರ್ಧರಿಸಲು ಸಾಧ್ಯ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+