ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರದ್ಯುಮ್ನ ಹತ್ಯೆ: ಆರೋಪಿಯ ನ್ಯಾಯಾಂಗ ಬಂಧನ ವಿಸ್ತರಣೆ

|
Google Oneindia Kannada News

ಗುರ್ಗಾಂವ್, ಜನವರಿ 30: ಗುರ್ಗಾಂವ್ ನ ರಾಯನ್ ಇಂಟರ್ನ್ಯಾಶನಲ್ ಸ್ಕೂಲಿನಲ್ಲಿ ಹತ್ಯೆಯಾದ ಪ್ರದ್ಯಮ್ನ ಪ್ರಕರಣದ ಆರೋಪಿಯ ನ್ಯಾಯಾಂಗ ಬಂಧನದ ಅವಧಿಯನ್ನು ಗುರ್ಗಾಂವ್(ಗುರುಗ್ರಾಮ) ನ ಚಿಲ್ಡ್ರನ್ಸ್ ಸೆಶನ್ಸ್ ಕೋರ್ಟ್ ವಿಸ್ತರಿಸಿದೆ.

ಆರೋಪಿ, ಇದೇ ಶಾಲೆಯಲ್ಲಿ 11 ನೇ ತರಗತಿ ಓದುತ್ತಿರುವ ವಿದ್ಯಾರ್ಥಿಯಾಘಿದ್ದು, ಆತನ ನ್ಯಾಯಾಂಗ ಬಂಧನದ ಅವಧಿಯನ್ನು ಫೆಬ್ರವರಿ 12 ರವರೆಗೆ ಮುಂದೂಡಲಾಗಿದೆ.

ಪ್ರದ್ಯುಮ್ನ ಕೊಲೆ : ಗುರ್ಗಾಂವ್ ಕೋರ್ಟ್ ನಿಂದ ಜಾಮೀನು ನಿರಾಕರಣೆ ಪ್ರದ್ಯುಮ್ನ ಕೊಲೆ : ಗುರ್ಗಾಂವ್ ಕೋರ್ಟ್ ನಿಂದ ಜಾಮೀನು ನಿರಾಕರಣೆ

ಹರ್ಯಾಣದ ಗುರ್ಗಾಂವ್ ನಲ್ಲಿರುವ ರಾಯನ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದ ಪ್ರದ್ಯುಮ್ನ ಠಾಕೂರ್ ನನ್ನು ಸೆಪ್ಟೆಂಬರ್ 8, 2017 ರಂದು ಶಾಲೆಯ ಶೌಚಾಲಯದಲ್ಲಿ ಕತ್ತು ಸೀಳಿ ಹತ್ಯೆಗೈಯಲಾಗಿತ್ತು.

Judicial custody of accused in Pradyuman case extended

ಈ ಸಂಬಂಧ ಇದೇ ಶಾಲೆಯಲ್ಲಿ ಓದುತ್ತಿದ್ದ 16 ವರ್ಷದ ವಿದ್ಯಾರ್ಥಿಯನ್ನು ಕೆಲ ದಿನಗಳ ನಂತರ ಬಂಧಿಸಲಾಗಿತ್ತು. ಪರೀಕ್ಷೆ ಮತ್ತು ಪಾಲಕರ ಮೀಟಿಂಗ್ ಮುಂದೂಡುವ ಸಲುವಾಗಿ ಆರೋಪಿಯೇ ಈ ಕೃತ್ಯ ಎಸಗಿರುವುದಾಗಿ ತನಿಖೆ ಸಂದರ್ಭದಲ್ಲಿ ತಿಳಿದುಬಂದಿತ್ತು.

ಈ ಪ್ರಕರಣವನ್ನು ಸದ್ಯಕ್ಕೆ ಸಿಬಿಐ ಗೆ ವಹಿಸಲಾಗಿದ್ದು, ಘಟನೆಯ ಸತ್ಯಾಸತ್ಯತೆ ಹೊರಬರಬೇಕಿದೆ. ಇತ್ತೀಚೆಗೆ ತಾನೇ ಆರೋಪಿ ಪರ ವಕೀಲರು ಎರಡು ಬಾರಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನೂ ನ್ಯಾಯಾಲಯ ತಿರಸ್ಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
The judicial custody of the accused in the Pradyuman murder case was extended till February 12 by Gurugram Children's Sessions Court on Jan 30th. The accused, a Class XI student, was arrested by the Central Bureau Investigation (CBI) last year on the charges of killing Pradyuman Thakur, a Class II student of Gurugram's Ryan International School.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X