Breaking: ಕ್ಲಬ್‌ನಲ್ಲಿ ಗಲಾಟೆ; ಮ್ಯಾನೇಜರ್‌ ಸೇರಿ 7 ಮಂದಿ ಬಂಧನ

ಗುರ್‌ಗಾಂವ್, ಆಗಸ್ಟ್ 11: ಹರಿಯಾಣದ ಗುರ್‌ಗಾಂವ್‌ನಲ್ಲಿರುವ ಕ್ಲಬ್ ಕಾಸಾ ಡಾಂಝಾದಲ್ಲಿ ವ್ಯಕ್ತಿಯೊಬ್ಬರ ಮೇಲೆ ಅಮಾನುಷವಾಗಿ ಬೌನ್ಸರ್‌ಗಳು ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲೇ ಗುರ್‌ಗಾಂವ್ ಪೊಲೀಸರು ಕ್ಲಬ್ ಮ್ಯಾನೇಜರ್ ಮತ್ತು ಆರು ಮಂದಿ ಬೌನ್ಸರ್‌ಗಳನ್ನು ಬಂಧಿಸಿದ್ದಾರೆ.

ಉದ್ಯೋಗ್ ವಿಹಾರ್‌ನಲ್ಲಿರುವ ಕ್ಲಬ್ ಕಾಸಾ ಡಾಂಜಾದಲ್ಲಿ ಆಗಸ್ಟ್ 7-8 ರ ಮಧ್ಯರಾತ್ರಿಯಲ್ಲಿ ಬೌನ್ಸರ್‌ಗಳು ಮತ್ತು ಕ್ಲಬ್‌ಗೆ ಭೇಟಿ ನೀಡಿದ್ದ ಗುಂಪಿನ ನಡುವೆ ಗಲಾಟೆ ನಡೆದಿತ್ತು. ಗುಂಪಿನಲ್ಲಿದ ಯುವತಿಯನ್ನು ಅನುಚಿತವಾಗಿ ಮುಟ್ಟಿದ ಆರೋಪದ ಮೇಲೆ ವಾಗ್ವಾದ ಆರಂಭವಾಗಿ ಘರ್ಷಣೆ ನಡೆದಿತ್ತು.

ದೈಹಿಕ ಹಲ್ಲೆ ಮತ್ತು ಕಿರುಕುಳದ ದೂರಿನ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಗುರುಗ್ರಾಮ್ ಪೊಲೀಸ್ ಮುಖ್ಯಸ್ಥ ಕಲಾ ರಾಮಚಂದ್ರನ್ ಹೇಳಿದ್ದಾರೆ. ಕ್ಲಬ್‌ನ ಮ್ಯಾನೇಜರ್ ಲೋಕೇಶ್, ಹಲ್ಲೆ ಮಾಡಿದ್ದ ಬೌನ್ಸರ್‌ಗಳಾದ ಸೋನು, ಮನ್‌ದೀಪ್, ಸುಮಿತ್, ನಿತಿನ್, ರಾಮ್ ಸಿಂಗ್ ಮತ್ತು ರಾಕೇಶ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.

Gurugram pub brawl: Six bouncers, manager have been arrested

"ಪೊಲೀಸ್ ಕಮಿಷನರ್ ಅವರ ನಿರ್ದೇಶನದ ಹಿನ್ನೆಲೆಯಲ್ಲಿ, ಭದ್ರತಾ ಏಜೆನ್ಸಿಗಳಲ್ಲಿ ನೇಮಕಗೊಂಡಿರುವ ಬೌನ್ಸರ್‌ಗಳ ಕುರಿತು ಪೊಲೀಸ್ ಪರಿಶೀಲನೆ ನಡೆಯುತ್ತಿದೆ. ಕರ್ತವ್ಯಲೋಪ ಎಸಗುವ ಏಜೆನ್ಸಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು" ಎಂದು ಅಪರಾಧ ವಿಭಾಗದ ಎಸಿಪಿ ಪ್ರೀತ್ ಪಾಲ್ ಸಾಂಗ್ವಾನ್ ಹೇಳಿದ್ದಾರೆ.

ದೂರುದಾರರು ಹಂಚಿಕೊಂಡ ವೈರಲ್ ವಿಡಿಯೋದಲ್ಲಿ, ಹಲವಾರು ಮಂದಿ ಬೌನ್ಸರ್‌ಗಳು ಯುವತಿಯ ಸ್ನೇಹಿತನನ್ನು ಥಳಿಸುತ್ತಿರುವುದನ್ನು ಕಾಣಬಹುದು. ಯುವತಿ ತನ್ನ ಸ್ನೇಹಿತನನ್ನು ಉಳಿಸುವಂತೆ ಬೌನ್ಸರ್‌ಗಳಲ್ಲಿ ಮನವಿ ಮಾಡುವುದನ್ನು, ತನ್ನ ಸ್ನೇಹಿತನಿಗೆ ರಕ್ತ ಬರುತ್ತಿದೆ ಎಂದು ಆಕೆ ಕಿರುಚುವುದನ್ನು ಸಹ ಕೇಳಬಹುದು.

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 147 (ಗಲಭೆ), 149 (ಕಾನೂನುಬಾಹಿರ ಸಭೆ), 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು), 354 ಎ (1) (ಐ) (ಲೈಂಗಿಕ ಕಿರುಕುಳ), 379 ಎ (ಕಳ್ಳತನ) ಮತ್ತು 506 (ಕ್ರಿಮಿನಲ್) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Recommended Video

      ಊರ್ವಶಿ ರೌಟೇಲಾಗೆ ರಿಷಬ್ ಪಂತ್ ಒಟ್ಟು ಎಷ್ಟು ಸಲ ಫೋನ್ ಮಾಡಿದ್ರು? ವೈರಲ್ ಆಯ್ತು ಊರ್ವಶಿ ಹೇಳಿಕೆ | Oneindia

      ಕಾಸಾ ಡಾಂಜಾ ಕ್ಲಬ್ ಹಿಂಸಾಚಾರವನ್ನು ಖಂಡಿಸಿ ಹೇಳಿಕೆ ನೀಡಿದೆ. ಆದರೆ ಕಿರುಕುಳದ ಆರೋಪಗಳನ್ನು ನಿರಾಕರಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+