ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರೀರಾಮುಲು ಯಾಕೆ ಹೀಗಂದ್ರು, ಸರ್ಕಾರದ ಆಯಸ್ಸು ಇಷ್ಟೇನಾ?

|
Google Oneindia Kannada News

Recommended Video

BJP leaders shock about SriRamulu statement

ಗದಗ, ನವೆಂಬರ್ 4: ನಾಳೆ ಏನಾದರೂ ಆದರೆ ನಾನು ಆರೋಗ್ಯ ಮಂತ್ರಿಯಾಗಿರಲ್ಲ, ಸರ್ಕಾರದ ಅನುದಾನವನ್ನು ಮೂರು ತಿಂಗಳಲ್ಲಿ ಎಷ್ಟಿದೆಯೋ ಅಷ್ಟೂ ಬಳಸಿ ಎಂದಿರುವ ಸಚಿವ ಶ್ರೀರಾಮುಲು ಮಾತು ಚರ್ಚೆಗೆ ಗ್ರಾಸವಾಗಿದೆ.

ಅವರ ಈ ಮಾತಿನಿಂದ ಬಿ.ಎಸ್. ಯಡಿಯೂರಪ್ಪ ಸರ್ಕಾರದ ಆಯಸ್ಸು ಕೇವಲ ಮೂರು ತಿಂಗಳೇನಾ, ಅಥವಾ ಶ್ರೀರಾಮುಲು ಸ್ಥಾನಕ್ಕೆ ಬೇರೆ ಸಚಿವರು ಬರುತ್ತಾರಾ ಹೀಗೆ ಹಲವು ಪ್ರಶ್ನೆಗಳು ಅವರ ಹೇಳಿಕೆಯ ಸುತ್ತ ಗಿರಕಿ ಹೊಡೆಯುತ್ತಿದೆ.

ಶ್ರೀರಾಮುಲು ನಿವೃತ್ತಿ ಹೇಳಿಕೆ ಬಳಿಕ ಡಿಸಿಎಂ ಹುದ್ದೆ ಚರ್ಚೆ ಮತ್ತೆ ಶುರುಶ್ರೀರಾಮುಲು ನಿವೃತ್ತಿ ಹೇಳಿಕೆ ಬಳಿಕ ಡಿಸಿಎಂ ಹುದ್ದೆ ಚರ್ಚೆ ಮತ್ತೆ ಶುರು

ಎಲ್ಲರೂ ಎಲ್ಲಾ ರೀತಿಯಲ್ಲೂ ಸುಧಾರಣೆ ಆಗಬೇಕು. ನಾನೂ ಕೂಡ ಸುಧಾರಣೆ ಆಗಬೇಕು, ಆದರೆ ರಾಜಕೀಯ ಒತ್ತಡ ಇರುವುದರಿಂದ ನಾನು ಸುಧಾರಣೆ ಆಗಲು ಆಗುತ್ತಿಲ್ಲ. ಒಂದು ಕಡೆ ವ್ಯವಸ್ಥೆ ಕೆಟ್ಟುಹೋಗಿದೆ ಅದನ್ನು ಸರಿಪಡಿಸಬೇಕಾದರೆ, ಎಲ್ಲರೂ ಒಟ್ಟಿಗೆ ಕೆಲಸ ಮಾಡಬೇಕಿದೆ ಎಂದರು.

ಮೂರು ತಿಂಗಳಲ್ಲಿ ಅನುದಾನ ಅಷ್ಟನ್ನೂ ಬಳಸಿ

ಮೂರು ತಿಂಗಳಲ್ಲಿ ಅನುದಾನ ಅಷ್ಟನ್ನೂ ಬಳಸಿ

ಯಾಕಂದರೆ ಗದಗದಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು ಅವರು ನಾಳೆ ಏನಾದರು ಆದ್ರೆ ನಾನು ಆರೋಗ್ಯ ಮಂತ್ರಿಯಾಗಿರಲ್ಲ, 3 ತಿಂಗಳಲ್ಲಿ ಸರ್ಕಾರದ ಅನುದಾನ ಎಷ್ಟಿದೆಯೋ ಅಷ್ಟನ್ನೂ ಬಳಸಿ ಅಂತಾ ಅಧಿಕಾರಿಗಳಿಗೆ ಆದೇಶ ಹೊರಡಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ರಾಜಕೀಯ ವ್ಯವಸ್ಥೆ ಕೆಟ್ಟು ಹೋಗಿದೆ

ರಾಜಕೀಯ ವ್ಯವಸ್ಥೆ ಕೆಟ್ಟು ಹೋಗಿದೆ

ನನ್ನ ರಾಜಕೀಯದಲ್ಲೂ ಕೂಡ ಸುಧಾರಣೆ ಆಗುತ್ತಿಲ್ಲ. ಎಲ್ಲೋ ಒಂದು ಕಡೆ ವ್ಯವಸ್ಥೆ ಕೆಟ್ಟುಹೋಗಿದೆ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಸ್ವತಃ ರಾಮುಲು ಅವರೇ 3 ತಿಂಗಳ ಬಳಿಕ ಸರ್ಕಾರ ಪತನದ ಮುನ್ಸೂಚನೆ ನೀಡಿದ್ರಾ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಈ ಹೇಳಿಕೆ ರಾಜಕೀಯ ಪಾಳಯದಲ್ಲಿ ತಲ್ಲಣ ಮೂಡಿಸಿದೆ.

ಭಗವಂತ ನೋಡುವ ಕೆಲಸ ಮಾಡಬೇಕು

ಭಗವಂತ ನೋಡುವ ಕೆಲಸ ಮಾಡಬೇಕು

ಸರ್ಕಾರಿ ಆಸ್ಪತ್ರೆಗಳ ಅನುದಾನದಲ್ಲಿ 20 ಕೋಟಿ ರೂ. ಉಳಿದಿದೆ. ಇದನ್ನು ಮೂರು ತಿಂಗಳೊಳಗೆ ಖರ್ಚು ಮಾಡಿ. ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು 2 ಸಾವಿರ ಕೋಟಿ ಅನುದಾನವನ್ನು ಕೊಡುತ್ತಾರೆ ಎಂದಾದರೆ ಅಧಿಕಾರಿಗಳು ಅದನ್ನು ಎನ್‌ಆರ್‌ಎಚ್‌ಎಂನಲ್ಲಿ ಖರ್ಚು ಮಾಡಿದರೆ ಮಾತ್ರ ಪೂರ್ಣ ಅನುದಾನವನ್ನು ಕೇಳಲು ಸಾಧ್ಯವಾಗುತ್ತೆ ಎಂದು ಶ್ರೀರಾಮುಲು ತಿಳಿಸಿದರು.

ನಾವು ಯಾವುದೇ ಕೆಲಸ ಮಾಡಲಿ ಭಗವಂತ ಮೆಚ್ಚುವಂತಿರಬೇಕು.
ಮನುಷ್ಯರು ಹೊಗಳುವುದು ಬೇಕಾಗಿಲ್ಲ. ಇಲ್ಲಿ ಯಾರೂ ಶಾಶ್ವತ ಅಲ್ಲ. ರಾಜ್ಯದಲ್ಲಿ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞರು ಹಾಗೂ ವೈದ್ಯರ ಕೊರತೆಯಿದೆ. ಆ ಕೊರತೆಯನ್ನು ನೀಗಿಸುವಂತೆ ನಾನು ಅಧಿಕಾರಿಗಳಿಗೆ ಸೂಚಿಸಿದ್ದೇನೆ.

ಒಂದು ಜಿಲ್ಲೆಯಲ್ಲಿ 20 ಕೋಟಿವರೆಗೆ ಹಣ ಬಾಕಿ ಇದೆ

ಒಂದು ಜಿಲ್ಲೆಯಲ್ಲಿ 20 ಕೋಟಿವರೆಗೆ ಹಣ ಬಾಕಿ ಇದೆ

ಹಾಗೆಯೇ ಒಂದು ಜಿಲ್ಲೆಯಲ್ಲಿ 20 ಕೋಟಿವರೆಗೆ ಹಣ ಹಾಗೆಯೇ ಉಳಿದಿದೆ ಎಂದರೆ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಎಷ್ಟೆಷ್ಟು ಉಳಿದಿರಬಹುದು? ಮೂರು ತಿಂಗಳೊಳಗೆ ಈ ಹಣವನ್ನು ಖರ್ಚು ಮಾಡಿ. ಆಸ್ಪತ್ರೆಗಳಿಗೆ ಆಧುನಿಕ ತಂತ್ರಜ್ಞಾನ ಹೊಂದಿರುವ ಯಂತ್ರಗಳನ್ನು ತೆಗೆದುಕೊಂಡು ಬನ್ನಿ, ಅಭಿವೃದ್ಧಿ ಮಾಡಿ ನಾವೇನು ಬೇಡ ಅನ್ನೋದಿಲ್ಲ. ನಿಮಗೆ ಪೂರ್ಣ ಸ್ವಾಂತ್ರ್ಯ ನೀಡಿದ್ದೇವೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.

English summary
Something Will happened tomorrow I am not be a health minister Says Sriramulu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X