ಮುಂಬೈ ರೈಲು ಗದಗ ವರೆಗೆ ವಿಸ್ತರಣೆ: ಪ್ರಹ್ಲಾದ್ ಜೋಶಿ

ಗದಗ, ಮೇ 21: ವಿಜಯಪುರ, ಬಾಗಲಕೋಟೆ ಹಾಗೂ ಗದಗ ಭಾಗದ ಜನರ ಬೇಡಿಕೆ ಮೇರೆಗೆ ವಾರದಲ್ಲಿ 5 ದಿನ ಪ್ರಯಾಣಿಸುತ್ತಿದ್ದ ಮುಂಬೈ-ಸೊಲ್ಲಾಪುರ(12319/121140) ರೈ ಸಂಚಾರವನ್ನು ಗದಗದವರೆಗೆ ವಿಸ್ತರಿಸಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ ಎಂದು ಸಂಸದ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ವಿಜಯಪುರ, ಬಾಗಲಕೋಟೆ ಹಾಗೂ ಗದಗ ಭಾಗದ ಜನರ ಬಹುದಿನಗಳ ಬೇಡಿಕೆ ಇದಾಗಿತ್ತು. ಈ ಕುರಿತು ಈ ಭಾಗದ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಅಹ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ತಾವು ರೈಲ್ವೆ ಸಚಿವ ಪಿಯೂಷ್ ಗೋಯಲ್ ಹಾಗೂ ರೈಲ್ವೆ ಮಂಡಳಿ ಅಧ್ಯಕ್ಷ ಅಶ್ವಿನ್ ಲೋಹಾನಿ ಅವರನ್ನು ದೆಹಲಿ ಕಚೇರಿಯಲ್ಲಿ ಭೇಟಿಯಾಗಿ ಮನವಿ ಮಾಡಿದ್ದರಿಂದ ಗದಗದವರೆಗೂ ಈ ರೈಲು ಸಂಚಾರ ಆರಂಭಗೊಂಡಿದೆ.

Sholapur- Mumbai train extended to Gadag

ಇದರಿಂದ ಗದಗ, ಬಾಗಲಕೋಟೆ ಹಾಗೂ ವಿಜಯಪುರದ ಜನರು ನೇರವಾಗಿ ಮುಂಬೈಗೆ ಪ್ರಯಾಣಿಸಲು ಅನುಕೂಲವಾಗಿದೆ ಎಂದು ಜೋಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+