Get Updates
Get notified of breaking news, exclusive insights, and must-see stories!

Gruhalakshmi scheme: ಬೋರ್‌ವೆಲ್‌ ಕೊರೆಸಲು ನೆರವಾದ 'ಗೃಹಲಕ್ಷ್ಮಿ', ಅತ್ತೆ-ಸೊಸೆಗೆ ಆಸರೆ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಗೃಹಲಕ್ಷ್ಮಿಯು ಹಲವು ಯಶೋಗಾಥೆಗಳಿಗೆ ಸಾಕ್ಷಿಯಾಗಿದೆ. ಸರ್ಕಾರದಿಂದ ಪ್ರತಿ ತಿಂಗಳು ಮನೆಯ ಯಜಮಾನಿಯರಿಗೆ ಸಿಗುತ್ತಿರುವ ಈ ಯೋಜನೆಯ 2000 ರೂಪಾಯಿ ಹಣದಿಂದ ಹಲವರು ತಮ್ಮ ಬದುಕಿನಲ್ಲಿ ಬದಲಾವಣೆ ಕಂಡಿದ್ದಾರೆ. ಇದೀಗ ಮಹಿಳೆಯೊಬ್ಬರು ಗೃಹಲಕ್ಷ್ಮಿ ಯೋಜನೆಯ ಹಣ ಕೂಡಿಟ್ಟು ಬೋರ್‌ವೆಲ್‌ ಕೊರೆಸಿ ಯಶಸ್ಸು ಕಂಡಿದ್ದಾರೆ.

ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಅತ್ತೆ ಮಾಬುಬಿ ಹಾಗೂ ಸೊಸೆ ರೋಷನ್ ಬೇಗಂ ಸೇರಿ ಬೋರ್‌ವೆಲ್‌ ಕೊರೆಸಿದ್ದಾರೆ. ಇನ್ನು ಬೋರ್‌ವೆಲ್‌ ಕೊರೆಸಿದ ನಂತರ ಉತ್ತಮ ನೀರು ಕೂಡ ಸಿಕ್ಕಿದೆ. ಇದರಿಂದ ಗೃಹಲಕ್ಷ್ಮಿ ಈ ಕುಟುಂಬ ಧನ್ಯವಾದಗಳನ್ನು ಅರ್ಪಿಸಿ, ಸಂತಸ ವ್ಯಕ್ತಪಡಿಸಿದ್ದಾರೆ.

Karnataka Government Gruhalakshmi Scheme Helps Family In Gadag Drill Successful Borewell

ಇನ್ನು ಅತ್ತೆ ಹಾಗೂ ಸೊಸೆ ಗೃಹಲಕ್ಷ್ಮಿ ಯೋಜನೆಯಡಿ ಖಾತೆಗೆ ಬಂದಿದ್ದ 44000 ರೂಪಾಯಿ ಹಣ ಕೂಡಿಟ್ಟಿದ್ದರು ಎನ್ನಲಾಗಿದೆ. ಈ ಹಣವನ್ನು ಅವರು ಕೊಳವೆ ಬಾವಿ ಕೊರೆಸಲು ನೀಡಿದ್ದರು. ಒಟ್ಟಾರೆ ಬೋರ್‌ವೆಲ್‌ ಕೊರೆಸಲು 60000 ರೂಪಾಯಿವರೆಗೆ ಖರ್ಚಾಗಿದೆ. ಇದಕ್ಕೆ ಪ್ರಧಾನವಾಗಿ ಗೃಹಲಕ್ಷ್ಮಿ ಹಣವೇ ಬಳಕೆಯಾಗಿದ್ದು, ಬಾಕಿ ಹಣವನ್ನು ಪುತ್ರ ನೀಡಿರುವುದಾಗಿ ತಿಳಿಸಿದ್ದಾರೆ.

ಬೋರ್‌ವೆಲ್‌ ಈಗ ಅವರ ಬದುಕಿಗೆ ಆಸರೆಯಾಗಲಿದ್ದು, ಇನ್ಮುಂದೆ ನಿಶ್ಚಿಂತೆಯಾಗಿ ಜೀವನ ನಡೆಸಬಹುದು ಎಂದು ಅವರು ಧನ್ಯತಾ ಭಾವದಲ್ಲಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯ ಅವರು ನೀಡಿದ ಗೃಹಲಕ್ಷ್ಮಿ ಯೋಜನೆಯಿಂದ ನಮ್ಮ ಕುಟುಂಬಕ್ಕೆ ಬಹಳ ಅನುಕೂಲವಾಗಿದ್ದು, ನಮ್ಮ ಬದುಕಿಗೂ ದಾರಿದೀಪವಾಗಿದ್ದಾರೆ. ಅವರಿಗೆ ನಮ್ಮ ಕುಟುಂಬದ ಪರವಾಗಿ ಧನ್ಯವಾದಗಳು ಎಂದು ಮಾಬುಬಿ ಅವರು ತಿಳಿಸಿದ್ದಾರೆ.

Karnataka Government Gruhalakshmi Scheme Helps Family In Gadag Drill Successful Borewell

ರಾಜ್ಯ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆಯು ಬಡ ಕುಟುಂಬಗಳ ಬದುಕಿಗೆ ಆಸರೆಯಾಗಿ ಮಹಿಳಾ ಸಬಲೀಕರಣದ ಆಶಯಕ್ಕೆ ಶಕ್ತಿ ತುಂಬಿರುವ ಬಗ್ಗೆ ಹಲವು ನಿದರ್ಶನಗಳಿವೆ. ಗೃಹಲಕ್ಷ್ಮಿ ಹಣದಿಂದಲೇ ಬೆಳಗಾವಿಯ ವೃದ್ಧೆಯೊಬ್ಬರು ಇಡೀ ಊರಿಗೆ ಸಿಹಿಯೂಟ ಹಾಕಿಸಿದರೆ, ಮಹಿಳೆಯೊಬ್ಬರು ಫ್ಯಾನ್ಸಿ ಸ್ಟೋರ್ ತೆರೆದಿದ್ದರು.

ಇದೇ ಯೋಜನೆಯ ಹಣದಿಂದ ಬೆಳಗಾವಿಯಲ್ಲಿ ಮಹಿಳೆಯೊಬ್ಬರು ತಮ್ಮ ಪತಿಯ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿದ್ದರು. ದ್ವಿತೀಯ ಪಿಯುಸಿ ಕಲಾ ವಿಭಾಗದ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ವಿದ್ಯಾರ್ಥಿ ಶಿಕ್ಷಣ ಪಡೆಯಲು ಕೂಡ ಇದೇ ಗೃಹಲಕ್ಷ್ಮಿ ಯೋಜನೆ ನೆರವಾಗಿತ್ತು. ಮಲ್ಲವ್ವ ಮೇಟಿ ಎಂಬ ಮಹಿಳೆಯೊಬ್ಬರು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡಿಟ್ಟು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗಾಗಿ ಗ್ರಂಥಾಲಯವನ್ನು ತೆರೆಯುವ ಮೂಲಕ ಮಾದರಿಯಾಗಿದ್ದರು.

ಬೆಳಗಾವಿ‌ ಜಿಲ್ಲೆಯ ರಾಯಬಾಗ್ ತಾಲೂಕಿನ ಸುಟ್ಟಟ್ಟಿ ಗ್ರಾಮದ ಅಕ್ಕಾತಾಯಿ ಲಂಗೂಟಿ ಎಂಬ ಹಿರಿಯ ಮಹಿಳೆ ತನಗೆ ಬಂದ ಗೃಹಲಕ್ಷ್ಮಿಯ ಹಣದಲ್ಲಿ ಊರಿನ ಜನಕ್ಕೆಲ್ಲ ಹೋಳಿಗೆ ಊಟ ಹಾಕಿ, ಮುತ್ತೈದೆಯರಿಗೆ ಮಡಿಲು ತುಂಬಿದ್ದರು. ಈ ಬಗ್ಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು ಗೃಹಲಕ್ಷ್ಮಿ ಯೋಜನೆಯು ಬಹಳಷ್ಟು ಕುಟುಂಬಗಳ ಪಾಲಿಗೆ ವರದಾನವಾಗಿದೆ. ಗೃಹಲಕ್ಷ್ಮಿಯ ಹಣ ಮಕ್ಕಳ ವಿದ್ಯಾಭ್ಯಾಸ, ಮನೆಗೆ ದಿನಸಿ, ಹಬ್ಬಕ್ಕೆ ಬಟ್ಟೆ, ಆಸ್ಪತ್ರೆ ಖರ್ಚು ವೆಚ್ಚ ಭರಿಸಲು ಬಳಕೆಯಾಗಿರುವುದು ಅವೆಲ್ಲವೂ ಯೋಜನೆಯ ಯಶಸ್ಸಿಗೆ ಹಿಡಿದ ಕನ್ನಡಿ ಎಂದು ಸಂತಸ ವ್ಯಕ್ತಪಡಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+