ಗದಗ: ಮಕ್ಕಳ ಕಳ್ಳರ ವದಂತಿಗೆ ನಂಬಬೇಡಿ, ವಿಡಿಯೋಗಳನ್ನು ಶೇರ್‌ ಮಾಡಬೇಡಿ- ಎಸ್‌ಪಿ ಸೂಚನೆ

ಗದಗ, ಸೆಪ್ಟೆಂಬರ್ 14: ಮಕ್ಕಳ ಕಳ್ಳರು ಬಂದಿದ್ದಾರೆ, ಮಕ್ಕಳನ್ನು ಕದ್ದೊಯ್ದು ಅಂಗಾಂಗ ಕದ್ದು ಮಾರಾಟ ಮಾಡುವ ವಿದೇಶ ಗುಂಪು ಜಿಲ್ಲೆಯಲ್ಲಿ ಮಕ್ಕಳನ್ನು ಟಾರ್ಗೆಟ್‌ ಮಾಡುತ್ತಿದೆ ಎನ್ನುವ ವಿಡಿಯೋಗಳು ವೈರಲ್ ಆಗುತ್ತುದ್ದು, ಯಾರು ನಂಬಬೇಡಿ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಈ ಬಗ್ಗೆ ವೀಡಿಯೋ ಮಾಹಿತಿ ನೀಡಿದ ಅವರು, ಇತ್ತೀಚೆಗೆ ಮಕ್ಕಳ ಕಳ್ಳರು ವೀಡಿಯೋ ಅಂತಾ ಬಿಂಬಿಸುವ ವೀಡಿಯೋಗಳನ್ನ ಹರಿಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ಜಿಲ್ಲೆಗೆ ಬರುವ ಜನರನ್ನು ಹಿಡಿದು ಥಳಿಸುವ ಪ್ರಕರಣ ಬೆಳಕಿಗೆ ಬಂದಿವೆ. ಆದರೆ ಗದಗ ಜಿಲ್ಲೆಯಲ್ಲಿ ಮಕ್ಕಳ ಕಳ್ಳತನದ ಪ್ರಕರಣಗಳು ದಾಖಲಾಗಿಲ್ಲ. ಸಂದೇಹ ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ, ಕಾನೂನು ಕೈಗೆ ತೆಗೆದುಕೊಳ್ಳಬೇಡಿ ಅಂತಾ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮಕ್ಕಳ ಕಳ್ಳರ ಆತಂಕ ಇಲ್ಲ:

ಗದಗ ತಾಲೂಕಿನ ಲಕ್ಕುಂಡಿಯಲ್ಲಿ ಮಂಗಳವಾರ ಮಕ್ಕಳ ಕಳ್ಳ ಎಂದು ಓರ್ವ ವ್ಯಕ್ತಿಯನ್ನು ಸ್ಥಳೀಯರು ಹಿಡಿದಿದ್ದರು. ಆದರೆ ಆತ ಕಲ್ಕತ್ತಾ ಮೂಲದ ವ್ಯಕ್ತಿ, ಆತ ಮಕ್ಕಳಿಗೆ ಚಾಕಲೇಟ್ ಕೊಡಿಸಿದ್ದ ಎನ್ನುವ ಕಾರಣಕ್ಕೆ ಸ್ಥಳೀಯರು ಆತನನ್ನು ಹಿಡಿದು ಥಳಿಸಿದ್ದರು. ವಿಚಾರಣೆ ನಡೆಸಿದಾಗ ಆತ ಮಕ್ಕಳ ಕಳ್ಳ ಅಲ್ಲಾ ಎನ್ನುವುದು ಗೊತ್ತಾಗಿದೆ. ಪಿಕ್ ಪ್ಯಾಕೆಟ್ ಕಳ್ಳತನ ಮಾಡುವವನು ಎಂಬ ಅನುಮಾನ ಇದೆ. ಹಾಗಾಗಿ ಆತನನ್ನ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

Dont Share Fake videos on Rumours of Children Theft: Gadag SP Order

ಅನುಮಾನ ಬಂದರೆ 112 ಗೆ ಕರೆ ಮಾಡಿ:

ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಹಲ್ಲೆ ಮಾಡುವ ಅಥವಾ ಥಳಿಸುವುದರ ಬದಲು ಪೊಲೀಸರಿಗೆ ಮಾಹಿತಿ ನೀಡಿ. 10 ನಿಮಿಷಗಳಲ್ಲಿ ಪೊಲೀಸರು ಸ್ಥಳಕ್ಕೆ ಬಂದು ವಿಚಾರಣೆ ನಡೆಸಲಿದ್ದಾರೆ ಎಂದು ಜಿಲ್ಲಾದಿಕಾರಿ ತಿಳಿಸಿದ್ದಾರೆ.

ಕೊಪ್ಪಳ -ಬೆಳಗಾವಿ ಜಿಲ್ಲಾಧಿಕಾರಿಗಳಿಂದಲೂ ಸೂಚನೆ
ಮಕ್ಕಳನ್ನು ಕದ್ದು ಅಂಗಾಂಗಗಳನ್ನು ತೆಗೆದು ಮಾಡುತ್ತಿದ್ದಾರೆ ಎನ್ನುವ ವದಂತಿ ವಾಟ್ಸಪ್‌ಗಳಲ್ಲಿ ಹಬ್ಬುತ್ತಿದೆ. ಬೆಳಗಾವಿಯಲ್ಲಿ ರಗ್ಗು ಮಾರುವವರನ್ನು ಮಕ್ಕಳ ಕಳ್ಳರೆಂದು ಭಾವಿಸಿ ಹಿಡಿದಿಟ್ಟುಕೊಂಡಿದ್ದರು. ಕೌಜಲಗಿ ಗ್ರಾಮದಲ್ಲಿ ಉತ್ತರ ಪ್ರದೇಶ ಸಾಧುಗಳ ಮೇಲೂ ಅನುಮಾನ ಪಡಲಾಗಿತ್ತು. ಆದರೆ ಇದುವರೆಗೆ ರಾಜ್ಯದಲ್ಲಿ ಎಲ್ಲೂ ಅಂತಹ ಘಟನೆ ನಡೆದಿಲ್ಲ, ಹಾಗಾಗಿ ಯಾರ ಮೇಲೂ ಹಲ್ಲೆ ಮಾಡಬೇಡಿ, ಅನುಮಾನ ಬಂದರೆ ಕರೆ 112ಕ್ಕೆ ಕರೆ ಮಾಡಿ ಎಂದು ಬೆಳಗಾವಿ ಮತ್ತು ಕೊಪ್ಪಳ ಜಿಲ್ಲಾದಿಕಾರಿಗಳು ಮಾಹಿತಿ ಪ್ರಕಟಣೆ ಹೊರಡಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಕಳ್ಳರೆಂದು ಸಾಧುಗಳ ಮೇಲೆ ಹಲ್ಲೆ:

ಮಕ್ಕಳ ಕಳ್ಳರು ಎಂದು ಆರೋಪಿಸಿ ಊರಿನ ಜನರೂ ಸಾಧುಗಳನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. ನಾಲ್ವರು ಸಾಧುಗಳ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದ್ದು, ಅದರ ವಿಡಿಯೋ ವೈರಲ್ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಲವಣ ಗ್ರಾಮದಲ್ಲಿ ಮಂಗಳವಾರ ಈ ಘಟನೆ ನಡೆದಿತ್ತು.ಉತ್ತರ ಪ್ರದೇಶದ ನಾಲ್ವರು ಸಾಧುಗಳು ಕರ್ನಾಟಕದ ವಿಜಯಪುರದಿಂದ ದೇವಸ್ಥಾನದ ಪಟ್ಟಣವಾದ ಪಂಡರಾಪುರಕ್ಕೆ ತೆರಳುತ್ತಿದ್ದಾಗ ಬಾಲಕನೊಬ್ಬನಿಗೆ ದಾರಿ ಕೇಳಿದ್ದಾರೆ. ಅವರು ಮಕ್ಕಳನ್ನು ಅಪಹರಿಸುವ ಗ್ಯಾಂಗ್‌ನವರೇ ಎಂದು ಸ್ಥಳೀಯರು ಶಂಕಿಸಿ ಹಲ್ಲೆ ನಡೆಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+