Get Updates
Get notified of breaking news, exclusive insights, and must-see stories!

B.Sriramulu: ಪ್ರಧಾನಿ ಮೋದಿ ವಿರುದ್ಧ "ವಿಷಸರ್ಪ" ಹೇಳಿಕೆಯ ಅಸ್ತ್ರಕ್ಕೆ ಶ್ರೀರಾಮುಲು ತಿರುಗುಬಾಣ

ಗದಗ, ಮೇ, 03: ವಿಧಾನಸಭೆ ಚುನಾವಣೆ ಸಮೀಸುತ್ತಿದ್ದಂತೆ ಆಡಳಿತ ಪಕ್ಷ ಮತ್ತು ವಿಪಕ್ಷಗಳ ವಡುವೆ ವಾಕ್ಸಮರ ಯುದ್ಧ ಜೋರಾಗಿದೆ. ಅದೇ ರೀತಿ ಇತ್ತೀಚೆಗಷ್ಟೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರು ನರೇಂದ್ರ ಮೋದಿಯವರ ವಿರುದ್ಧ ವಿಷ ಸರ್ಪದ ಹೇಳಿಕೆಯ ಅಸ್ತ್ರವನ್ನು ಬಳಿಸಿದ್ದರು. ಇದೀಗ ಇದಕ್ಕೆ ಸಚಿವ ಶ್ರೀರಾಮುಲು ಗದಗದಲ್ಲಿ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್‌ನವರಿಗೆ ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕಾಗಿದೆ ಎಂದು ವಾಗ್ದಾಳಿ ನಡೆಸಿದರು.

ಗದಗದ ತಮ್ಮ ನಿವಾಸದಲ್ಲಿ ಮಾತನಾಡಿದ ಸಚಿವ ಬಿ. ಶ್ರೀರಾಮುಲು, ಕಾಂಗ್ರೆಸ್‌ನವರು ಲಿಂಗಾಯತ ಸಮುದಾಯದವರು ಯಾರು ಮುಖ್ಯಮಂತ್ರಿ ಆಗುತ್ತಾರೆಯೋ ಅವರೆಲ್ಲಾ ಭ್ರಷ್ಟರು ಅಂತಾ ಉಲ್ಲೇಖ ಮಾಡಿದ್ದಾರೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಷಸರ್ಪಕ್ಕೆ ಹೋಲಿಸಿದ್ದಾರೆ. ಇದನ್ನೆಲ್ಲ ಗಮನಿಸಿದರೆ ಅವರು ಬೌಧ್ಧಿಕವಾಗಿ, ನೈತಿಕವಾಗಿ ದಿವಾಳಿ ಎದ್ದು ಹೋಗಿದ್ದಾರೆ ಅಂತಾ ನಾನು ತಿಳಿದಿದ್ದೇನೆ ಎಂದು ವ್ಯಂಗ್ಯವಾಡಿದರು.

Congress leaders should be treated in mental hospital says B.Sriramulu

ಕಾಂಗ್ರೆಸ್‌ನವರ ತಲೆಯಲ್ಲಿ ಹುಳ ಹೋಗಿದೆ. ಅವರು ಮದದಿಂದ, ದುರಹಂಕಾರದಿಂದ, ಎಲ್ಲೋ ಒಂದು ಕಡೆ ಅಧಿಕಾರಕ್ಕೆ ಬರುತ್ತೇವೆ ಅನ್ನುವ ಭ್ರಮೆಯಲ್ಲಿದ್ದಾರೆ. ಆದರೆ ಅವರು ಯಾವಾಗಲೂ ಕೂಡ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದಿಲ್ಲ. ಅವತ್ತಿನ ಸಂದರ್ಭದಲ್ಲಿ ಲಾಟರಿ ಮೂಲಕ ಸರ್ಕಾರ ರಚನೆ ಆಗುತ್ತಿತ್ತು. ಈ ಬಾರಿ ಲಾಟರಿ ಸಕ್ಸಸ್ ಅಗುವುದಿಲ್ಲ. ಖಂಡಿತವಾಗಿ ಈ ಚುನಾವಣೆಯಲ್ಲಿ ಸೋಲು ಅನುಭವಿಸುತ್ತಾರೆ.

ನಮ್ಮ ಸರ್ಕಾರ ಒಳ್ಳೆಯ ಕೆಲಸಗಳನ್ನು ಮಾಡಿದ್ದು, ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ. 120ಕ್ಕೂ ಹೆಚ್ಚು ಸ್ಥಾನ ಗಡಿ ದಾಟಿ ನಮ್ಮ ಸರಕಾರ ಅಧಿಕಾರಕ್ಕೆ ಬರೋವಂತಹ ಕೆಲಸವನ್ನು ಮಾಡಿದ್ದೇವೆ ಎಂದರು.

ಮೀಸಲಾತಿ ಪ್ರಮಾಣ‌ವನ್ನು ಶೇಕಡಾ 75ರಷ್ಟು ಏರಿಸುವ ಕಾಂಗ್ರೆಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಮೀಸಲಾತಿ ಕೊಟ್ಟ ನಂತರ ಅವರಿಗೆ ತುಂಬಾ ಮುಜುಗರ ಆಗಿದೆ. ಅವರಿಗೆ ಸಂವಿಧಾನವೇ ಗೊತ್ತಿಲ್ಲ. ಇಷ್ಟು ದಿನ ಎಸ್‌ಸಿ, ಎಸ್‌ಟಿ, ಹಿಂದುಳಿದ ಜಾತಿಗಳ ಹೆಸರು ಹೇಳಿ ರಾಜಕಾರಣ ಮಾಡುತ್ತಿದ್ದರು. ಲಿಂಗಾಯತ ಸೇರಿದಂತೆ ಬೇರೆ ಬೇರೆ ಸಮುದಾಯಕ್ಕೆ ಮೀಸಲಾತಿ ಕೊಟ್ಟ ನಂತರ ಅದನ್ನು ರದ್ದು ಮಾಡುತ್ತೇವೆ ಅಂತಾ ಹೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಹಿಂದೂಗಳಿಂದಲೇ ಆರಿಸಿ ಬರುವೆ

ಇನ್ನು ವಿಜಯಪುರದಲ್ಲಿ ಒಂದು ಲಕ್ಷ‌ ಪಾಕಿಸ್ತಾನಿ ಮತದಾರರಿದ್ದಾರೆ. ನಿಮ್ಮ ಒಂದೇ ಒಂದು ವೋಟ್ ನನಗೆ ಬೇಡ. ನಾನು ಹಿಂದೂಗಳಿಂದಲೇ ಆರಿಸಿ ಬರುವೆ ಎಂದು ಹೇಳಿದ್ದೆ. ಆ ಮಾತಿಗೆ ಈಗಲೂ ಬದ್ಧ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಮಂಗಳವಾರ ರಾತ್ರಿ ಗದಗ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಪರ ರೋಡ್ ಶೋ ನಡೆಸಿ ಮಾತನಾಡಿದ ಅವರು, ಇಂದು ನಮ್ಮ ಮಂದಿಗೆ ಕಿಮ್ಮತ್ತಿಲ್ಲ ಎನ್ನುವಂತಾಗಿದೆ. ಈ ದೇಶದಲ್ಲಿ ಮುಸ್ಲೀಮರಿಗಾಗಿ ನಾವಿದ್ದೀವಾ? ಎನ್ನುವಂತಾಗಿದೆ. ಗಣಪತಿ ಹಬ್ಬ ಸೇರಿ ಎಲ್ಲದಕ್ಕೂ ನಮಗೆ ಅನುಮತಿ ಬೇಕು. ಪೊಲೀಸರು ಸುಪ್ರೀಂ ಕೋರ್ಟ್ ಆರ್ಡರ್ ಇದೆ, ಮೈಕ್ ಹಾಕಬೇಡಿ ಎನ್ನುತ್ತಾರೆ ಎಂದರು.

ನಮಗೆ ಮೈಕ್ ಹಾಕಬೇಡಿ ಅಂತಾರೆ, ಡಿ.ಜೆ ಹಾಕಬೇಡಿ ಅಂತಾರೆ. ಗಣಪತಿ ಕೂರಿಸಲಿಕ್ಕೆ ಅನುಮತಿ ಬೇಕು ಅಂತಾರೆ. ಆದರೆ, ನಮ್ಮ ವಿಜಯಪುರದಲ್ಲಿ ಇದೆಲ್ಲವನ್ನೂ ತೆಗೆದು ಹಾಕಿದ್ದೇನೆ. ಪೊಲೀಸರು ಹಾಗೂ ಕಾರ್ಪೋರೇಶನ್ ಅಧಿಕಾರಿಗಳು ಗಣಪತಿ ಕುರಿಸುವ ಪೆಂಡಾಲ್ ಬಳಿ ಅವರೇ ಬಂದು ಬರೆದುಕೊಂಡು ಬರಬೇಕು. ಗಣಪತಿ ಕೂರಿಸಲಿಕ್ಕೆ ಮೊದಲು‌ ನಾಲ್ಕೂವರೆ ಸಾವಿರ ತೆಗೆದುಕೊಳ್ಳುತ್ತಿದ್ದರು.

ಆದರೆ ಈಗ ಯಾವುದಕ್ಕೂ ರೊಕ್ಕ ಇಲ್ಲ, ರೂಪಾಯಿ‌ ಇಲ್ಲ. ಎಲ್ಲವೂ ಉಲ್ಟಾ ಆಗಿದೆ. ನಾನೇ ಒಂದೊಂದು ಗಣಪತಿಗೆ ಐದು ಸಾವಿರ ಕೊಡುತ್ತೇನೆ, ಕಾಂಗ್ರೆಸ್ ಪಕ್ಷ ಮುಸ್ಲಿಂ ಪರವಾಗಿದೆ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ಬ್ಯಾನ್ ಭರವಸೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಬಸನಗೌಡ ಪಾಟೀಲ್ ಯತ್ನಾಳ್, ಕರ್ನಾಟಕದವರು ನಿಮ್ಮನ್ನೇ ಬ್ಯಾನ್ ಮಾಡಲಿದ್ದಾರೆ.

ಇನ್ನು ನೀವೇನು ಬ್ಯಾನ್ ಮಾಡುತ್ತೀತಿ? ಎಂದು ವ್ಯಂಗ್ಯವಾಡಿದರು. ಅಲ್ಲದೇ ನಿಮಗೆ ಕಡೆಗಾಲ ಬಂದಿದೆ. ಈಗಾಗಲೇ ಹೆಲಿಕಾಪ್ಟರ್‌ನಲ್ಲಿ ಹೋದಾಗ ನಮ್ಮ ಹನುಮಪ್ಪ ದೇವರು ತೋರಿಸಿದ್ದಾನೆ. ಇದು ತಾಲಿಬಾನ್ ಅಲ್ಲ. ಚುನಾವಣೆ ಮುಗಿದ ಮೇಲೆ ವಿಧಾನಸೌಧಕ್ಕೆ ಹೋಗಲ್ಲ, ನೇರ ತಿಹಾರ್‌ ಜೈಲಿಗೆ ಹೋಗುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ವಿರುದ್ಧ ಕಿಡಿಕಾರಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+