ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಧಾನಸೌಧದ ಗೋಡೆಗಳು ಕಾಸು‌ ಕಾಸು‌ ಅನ್ನುತ್ತಿವೆ: ಬಿಜೆಪಿ ವಿರುದ್ಧ ಡಿ.ಕೆ. ಶಿವಕುಮಾರ್‌ ಆರೋಪ

By ಗದಗ ಪ್ರತಿನಿಧಿ
|
Google Oneindia Kannada News

ಗದಗ, ಜನವರಿ, 19: ಪ್ರಜಾಧ್ವನಿ ಸಮಾವೇಶದಲ್ಲಿ ಭಾಗಿಯಾದ ಜನರನ್ನು ನೋಡಿದರೆ ಇಲ್ಲಿ ನಾಲ್ಕೂ ಕ್ಷೇತ್ರ‌ಗಳು ಕಾಂಗ್ರೆಸ್ ಪಾಲಾಗುವುದರಲ್ಲಿ ಸಂದೇಹವಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದ ಜನರು ಅಧಿಕಾರಕ್ಕೆ ಬಂದಹಾಗೆ ಎಂದು ಕೆಪಿಸಿಸಿ‌ ಅಧ್ಯಕ್ಷ‌ ಡಿ.ಕೆ.ಶಿವಕುಮಾರ್ ಗದಗದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು. ಹಾಗೆಯೇ ಬಿಜೆಪಿ ಸರ್ಕಾರ ಬಂದಾಗಿನಿಂದಲೂ ವಿಧಾನಸೌಧದ ಗೋಡೆಗಳು ಕಾಸು‌ ಕಾಸು‌ ಅಂತಿವೆ. ಬಿಜೆಪಿ ಕಮಿಷನ್‌ ಸರ್ಕಾರ ಎಂದು ಟೀಕಿಸಿದರು.

ಗದಗದಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡಬಲ್‌ ಇಂಜಿನ್ ಸರ್ಕಾರ ಇದ್ದರೂ ಯಾವ ಕೆಲಸ ಮಾಡಿದ್ದೇವೆ ಅನ್ನುವುದರ ಬಗ್ಗೆ ಒಂದು ಸಾಕ್ಷಿ ಕೊಡಲಿ. ಬಸವರಾಜ ಬೊಮ್ಮಾಯಿ ಅವರ ಸರ್ಕಾರ ರಾಜ್ಯದಲ್ಲಿ ಸಾಕ್ಷಿ ಕೊಡುವಂತಹ ಯಾವುದೇ ಕೆಲಸವನ್ನು ಮಾಡಿಲ್ಲ ಎಂದು ಟೀಕಿಸಿದರು.

ಯತ್ನಾಳ್ ಮತ್ತು ನಿರಾಣಿ ನಡುವಿನ ಒಳಜಗಳ ಸಮಾಜವೇ ತಲೆ ತೆಗ್ಗಿಸುವಂತೆ ಮಾಡಿದೆ: ಎಚ್.ಕೆ. ಪಾಟೀಲ್ಯತ್ನಾಳ್ ಮತ್ತು ನಿರಾಣಿ ನಡುವಿನ ಒಳಜಗಳ ಸಮಾಜವೇ ತಲೆ ತೆಗ್ಗಿಸುವಂತೆ ಮಾಡಿದೆ: ಎಚ್.ಕೆ. ಪಾಟೀಲ್

ಬಿಜೆಪಿ ಕಮಿಷನ್‌ ಸರ್ಕಾರ

ಬಿಜೆಪಿಯವರು 15 ಲಕ್ಷ ನಿಮ್ಮ ಖಾತೆಗೆ ಹಾಕುತ್ತೇವೆ ಅಂದಿದ್ದರು. 15 ರೂಪಾಯಿ ಸಹ ಹಾಕಲಿಲ್ಲ. ಕೊರೊನಾ ಕಾಲದಲ್ಲಿ ಆಸ್ಪತ್ರೆಯಲ್ಲಿ ಬೆಡ್‌ಗಾಗಿ‌ ಕಮಿಷನ್ ಪಡೆಯುವ ಮೂಲಕ ಅಲ್ಲಿಯೂ ಹಗರಣ ಮಾಡಿತ್ತು. ಬಿಜೆಪಿ ಸರ್ಕಾರದಲ್ಲಿ ಕಮಿಷನ್ ಇಲ್ಲದೆ ಯಾವುದೇ ಕೆಲಸ ಆಗುವುದಿಲ್ಲ. ಸ್ವತಃ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಅವರೇ ಈ ಬಗ್ಗೆ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಈ ಹಿಂದೆ ಪರಿಶುದ್ಧ ಆಡಳಿತ ನೀಡಿದೆ. ಗ್ಲೋಬಲ್‌ ಇನ್ವೆಸ್ಟ್‌ಮೆಂಟ್ ಅಂತಾ ಮಾಡಿ 10 ಲಕ್ಷ‌ ಕೋಟಿ ಬಂಡವಾಳ ಬಂದಿದೆ ಎಂದು ಹೇಳಿದ್ದಾರೆ. ಹಾಗೆಯೇ ಶೋಭಾ ಕರಂದ್ಲಾಜೆ,‌ ಜಗದೀಶ್‌ ಶೆಟ್ಟರ್ ಅವರೇ ನಿಮ್ಮೂರಿಗೆ ಎಷ್ಟು‌ ಲಕ್ಷ ಬಂತು ಹೇಳಿ ಎಂದು ಸವಾಲು ಹಾಕಿದರು.

BJP is Commission Government: D.K. Shivakumar allegation

ಗೋಡೆಗಳು ಕಾಸು‌ ಕಾಸು‌ ಅನ್ನುತ್ತಿವೆ

"ವಿಧಾನಸೌಧದ ಗೋಡೆಗಳು ಕಾಸು‌ ಕಾಸು‌ ಅನ್ನುತ್ತಿವೆ. ಟಕ್‌ ಟಕ್ ಅಂತಾ ಹೊಡೆದರೆ ಗೋಡೆಗಳು ಕಾಸು ಕಾಸು ಅಂತಿವೆ". ಬಿಜೆಪಿ ಪಾಪದ ಪುರಾಣ ಪುಸ್ತಕ ಅಂತಾ ಪ್ರಜಾಧ್ವನಿ‌ ಯಾತ್ರೆಯಲ್ಲಿ ಮಾಡಿದ್ದೇವೆ. ಪ್ರತಿ‌ ಕುಟುಂಬಕ್ಕೂ 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡಬೇಕು‌ ಎಂದು ತೀರ್ಮಾನಿಸಿದ್ದೇವೆ. ಗೃಹಿಣಿಗೆ ವರ್ಷಕ್ಕೆ 24,000 ಸಾವಿರ ಕೊಡುತ್ತೇವೆ ಎಂದು ಪ್ರೀಯಾಂಕ ಗಾಂಧಿ ಅವರು ಘೋಷಣೆ‌ ಮಾಡಿದ್ದಾರೆ ಎಂದರು. ಪ್ರತಿ ಮನೆಗೂ ಕಾಂಗ್ರೆಸ್‌ ಕಾರ್ಯಕರ್ತರು ತೆರಳಿ ಈ ವಿಚಾರ ಮುಟ್ಟಿಸಬೇಕು ಎಂದು ಸೂಚನೆ ನೀಡಿದರು.

English summary
KPCC President D.K. Shivakumar said in gadag, BJP is Commission Government, D.K. Shivakumar allegation against BJP Government, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X