ಮುಂಬೈನಿಂದ ಗದಗ ತಲುಪಿದ ರೈಲು: 124 ಪ್ರಯಾಣಿಕರ ಮೇಲೆ ಡಿಸಿ, ಎಸ್‌ಪಿ ನಿಗಾ

ಗದಗ, ಜೂನ್, 2: ಮುಂಬೈನಿಂದ ಗದಗ ನಗರಕ್ಕೆ ರೈಲು ಆಗಮಿಸಿದೆ. 124 ಪ್ರಯಾಣಿಕರನ್ನು ಹೊತ್ತು ತಂದ ಈ ರೈಲಿನಲ್ಲಿ ಒಂದು ತಿಂಗಳ ಹಸುಗೂಸು ಹೊಂದಿರುವ ಬಾಣಂತಿಯೊಬ್ಬರೂ ಇದ್ದಾರೆ.

ಈ ಹಿಂದೆ ಮಹಾರಾಷ್ಟ್ರದ ಮುಂಬೈನಿಂದ ವಲಸೆ ಬಂದವರಲ್ಲಿ ಹೆಚ್ಚಾಗಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿತ್ತು. ಈ ಕಾರಣಕ್ಕೆ ಈಗ ಸರ್ಕಾರ ಮಹಾರಾಷ್ಟ್ರದಿಂದ ಬರುವವರ ಮೇಲೆ ಹೆಚ್ಚು ನಿಗಾ ವಹಿಸಿದೆ.

ಅದರ ಪರಿಣಾಮವಾಗಿ ಮಂಗಳವಾರ ರೈಲು ಬರುವ ಹೊತ್ತಿಗೆಲ್ಲ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮತ್ತು ಎಸ್‌.ಪಿ.ಯತೀಶ್ ನಗರದ ರೈಲು ನಿಲ್ದಾಣದಲ್ಲಿ ಹಾಜರಿದ್ದು, ಎಲ್ಲಾ ಮುಂಜಾಗ್ರತೆ ಕ್ರಮಗಳು ಜಾರಿ ಆಗುವಂತೆ ನೋಡಿಕೊಂಡರು.

124 Passengers Reaches Gadag In Train from Mumbai

ಆರೋಗ್ಯ ಇಲಾಖೆಯ ವೈದ್ಯರು ಥರ್ಮಲ್ ಸ್ಕ್ಯಾನಿಂಗ್ ಮಾಡುವ ಮೂಲಕ ಪ್ರಾಥಮಿಕ ತಪಾಸಣೆ ನಡೆಸಿದರು.

ಜಿಲ್ಲಾಡಳಿತ ಆರೋಗ್ಯ ಇಲಾಖೆಯ ನೆರವಿನಿಂದ ವ್ಯವಸ್ಥೆ ಮಾಡಿರುವ ವಾಹನಗಳಲ್ಲಿ ಪ್ರಯಾಣಿಕರನ್ನು ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸುತ್ತಿದ್ದು, ಅಲ್ಲಿ ಅವರ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ.

ದಾವಣಗೆರೆ ಮೂಲದ ಬಾಣಂತಿಯನ್ನು ತಪಾಸಣೆ ನಂತರ ಕಳುಹಿಸಿ ಕೊಡುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ. ಸೋಂಕು ಲಕ್ಷಣವಿಲ್ಲದವರನ್ನು ಅವರ ಊರಿಗೆ ತಲುಪಿಸುವ ಜವಾಬ್ದಾರಿಯನ್ನು ಜಿಲ್ಲಾಡಳಿತ ಹೊತ್ತುಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+