ಬೇಹುಗಾರಿಕೆ ಆರೋಪ; ಬ್ರಿಟಿಷ್ ವಿದ್ಯಾರ್ಥಿಗೆ ಯುಎಇಯಲ್ಲಿ ಜೀವಾವಧಿ ಜೈಲು

ದುಬೈ, ನವೆಂಬರ್ 21: ಬೇಹುಗಾರಿಕೆ ಆರೋಪದ ಮೇಲೆ ಬ್ರಿಟಿಷ್ ವಿದ್ಯಾರ್ಥಿ ಮ್ಯಾಥ್ಯೂಸ್ ಹೆಡ್ಜಸ್ ಗೆ ಯುನೈಟೆಡ್ ಅರಬ್ ಎಮಿರೇಟ್ಸ್ ನ್ಯಾಯಾಲಯವು ಬುಧವಾರ ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ ಎಂದು ಕುಟುಂಬದ ವಕ್ತಾರರು ತಿಳಿಸಿದ್ದಾರೆ. ಮ್ಯಾಥ್ಯೂಸ್ ಗೆ ಜೀವಾವಧಿ ಜೈಲು ಶಿಕ್ಷೆ ಘೋಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಚಾರಣೆ ಐದು ನಿಮಿಷದಲ್ಲಿ ಮುಗಿಯಿತು. ಮತ್ತು ಆಗ ಆತನ ವಕೀಲರು ಇರಲಿಲ್ಲ. ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಜೆರೆಮಿ ಹಂಟ್ ಮಾತನಾಡಿ, ಯುಎಇ ನ್ಯಾಯಾಲಯದ ಆದೇಶದಿಂದ ಆಘಾತವಾಗಿದೆ ಹಾಗೂ ಬೇಸರ ಆಗಿದೆ ಎಂದು ಹೇಳಿದ್ದಾರೆ.

ಯುನೈಟೆಡ್ ಕಿಂಗ್ ಡಮ್ ನ ಮಿತ್ರ ಹಾಗೂ ನಂಬಿಕಸ್ತ ಪಾಲುದಾರ ದೇಶದಿಂದ ಇಂದಿನ ತೀರ್ಪು ನಿರೀಕ್ಷೆ ಮಾಡಿರಲಿಲ್ಲ. ಈ ಹಿಂದೆ ನೀಡಿದ್ದ ಭರವಸೆಗೆ ವಿರುದ್ಧವಾಗಿ ನಡೆದುಕೊಳ್ಳಲಾಗಿದೆ ಎಂದಿದ್ದಾರೆ.

British student accused of spying, sentenced to life Imprisonment in UAE

2011ರ ಅರಬ್ ಕ್ರಾಂತಿ ನಂತರ ಆದ ನಂತರದ ಯುಎಇ ವಿದೇಶ ಹಾಗೂ ಆಂತರಿಕ ನೀತಿಗಳು ಎಂಬ ವಿಷಯವಾಗಿ 31 ವರ್ಷದ ಹೆಡ್ಜಸ್ ಸಂಶೋಧನೆ ನಡೆಸುತ್ತಿದ್ದರು. ಅವರನ್ನು ಮೇ ಐದರಂದು ವಶಕ್ಕೆ ಪಡೆಯಲಾಗಿತ್ತು.

ಅಕ್ಟೋಬರ್ 29ರಂದು ತಾತ್ಕಾಲಿಕ ಜಾಮೀನು ನೀಡಲಾಗಿತ್ತು. ಆದರೆ ಬುಧವಾರದಂದು ವಿಚಾರಣೆ ನಡೆಸುವ ತನಕ ಅವರ ಮೇಲೆ ಕಣ್ಗಾವಲು ಇರಿಸಲಾಗಿತ್ತು. ಹೆಡ್ಜಸ್ ನ ಪತ್ನಿ ಡೇನಿಯೆಲಾ ತೆಜಡಾ ಪತಿಯ ಬಿಡುಗಡೆಗಾಗಿ ದೊಡ್ಡ ಮಟ್ಟದಲ್ಲಿ ಅಭಿಯಾನ ನಡೆಸುತ್ತಿದ್ದರು.

ಯುಎಇ ಅಟಾರ್ನಿ ಜನರಲ್ ಹಮದ್ ಅಲ್ ಶಂಶಿ ಕಳೆದ ತಿಂಗಳು ಮಾತನಾಡಿ, ವಿದೇಶಕ್ಕಾಗಿ ಬೇಹುಗಾರಿಕೆ, ಸೇನೆ, ರಾಜಕೀಯ ಹಾಗೂ ಆರ್ಥಿಕ ಭದ್ರತೆಗೆ ಅಪಾಯ ತಂದೊಡ್ಡಿದ್ದಾರೆ ಎಂದಿದ್ದರು. ಆದರೆ ಹೆಡ್ಜಸ್ ತಮ್ಮ ಮೇಲಿನ ಆರೋಪವನ್ನು ಪದೇಪದೇ ನಿರಾಕರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+