ಪ್ರತ್ಯೇಕ ಧರ್ಮ ಸಮಿತಿಗೆ ಆರು ತಿಂಗಳ ಸಮಯ ಕೊಡಲು ಆಗಲ್ಲ: ಕುಲಕರ್ಣಿ

ಧಾರವಾಡ, ಜನವರಿ 8: ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರಕ್ಕೆ ಸಂಬಂಧಿಸಿದಂತೆ ರಚಿಸಿದ ತಜ್ಞರ ಸಮಿತಿಯು ವರದಿ ನೀಡಲು ಆರು ತಿಂಗಳ ಸಮಯಾವಕಾಶ ಕೇಳಿರುವುದು ನಮಗೆ ಅಸಮಾಧಾನ ತಂದಿದೆ ಎಂದು ಸಚಿವ ವಿನಯ ಕುಲಕರ್ಣಿ ಇಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ತಜ್ಞರು ಇಷ್ಟು ಕಾಲಾವಕಾಶ ಕೇಳಿದ್ದು ನಮಗೆ ಸಮಾಧಾನ ತಂದಿಲ್ಲ, ಆರು ತಿಂಗಳು ಕೇಳಿರುವುದಕ್ಕೆ ನಮಗೆ ಅಸಮಾಧಾನ ಇದೆ. ಈ ಬಗ್ಗೆ ಚರ್ಚೆ ಮಾಡುವ ಸಲುವಾಗಿ ನಾಳೆಯೇ ನಾವೆಲ್ಲ ಮುಖ್ಯಮಂತ್ರಿ ಅವರನ್ನು ಭೇಟಿಯಾಗ್ತೀವಿ. ಮತ್ತೆ ಪ್ರಯತ್ನ ಮಾಡ್ತೀವಿ ಎಂದು ಕುಲಕರ್ಣಿ ಹೇಳಿದ್ದಾರೆ.

We cannot give 6 months time to Lingayat separate religion committee

ಇನ್ನು ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ಅವರು ಎಲೆಕ್ಷನ್ ಗಾಗಿ ಲಿಂಗಾಯತ ಹೋರಾಟ ಎಂದಿರುವ ಬಗ್ಗೆ ಉತ್ತರ ನೀಡಿದ ಸಚಿವ ಕುಲಕರ್ಣಿ, ಅವರು ನಮ್ಮ ಪರವಾಗಿ ಇಲ್ಲ. ಹೀಗಾಗಿ ಏನೇನೋ ಹೇಳಿಕೆ ನೀಡುತ್ತಾ ಇದ್ದಾರೆ. ಲಿಂಗಾಯತ ಸಮಾಜದವರು ತೊಂದರೆಯಲ್ಲಿದ್ದಾರೆ. ಅದಕ್ಕಾಗಿ ನಾವು ಈ ಹೋರಾಟ ಮಾಡ್ತಾ ಇದ್ದೀವಿ. ಆದರೆ ಅವರಿಗೆ ಇದೆಲ್ಲ ಗೊತ್ತಿಲ್ಲ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+