ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್ ರೈಲು ಸಂಚಾರ
ಧಾರವಾಡ ಸೆಪ್ಟೆಂಬರ್ 29: ಭಾರತೀಯ ರೈಲ್ವೆ 2024ರ ಹೊತ್ತಿಗೆ ಒಟ್ಟು 102 ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸಲು ತೀರ್ಮಾನಿಸಿದೆ. ಬೆಂಗಳೂರು-ಧಾರವಾಡ ನಡುವೆ ಸಹ ಈ ರೈಲು ಸಂಚಾರ ನಡೆಸಲು ಮಾಡಿದ ಮನವಿಗೆ ಇಲಾಖೆ ಸ್ಪಂದಿಸಿದೆ.
ಧಾರವಾಡದ ಬಿಜೆಪಿ ಸಂಸದ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್ ಭೇಟಿ ಮಾಡಿದ್ದಾರೆ. ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಓಡಿಸುವ ಕುರಿತು ಮನವಿ ಸಲ್ಲಿಸಿದ್ದಾರೆ.
ಮೊದಲ ದೇಶಿಯ ರೈಲು ವಂದೇ ಭಾರತ್ ಎಕ್ಸ್ಪ್ರೆಸ್ ಸಂಚಾರ ಆರಂಭಿಸಿ ಒಂದು ವರ್ಷ ಕಳೆದಿದೆ. ಶೇ 100ರಷ್ಟು ದೇಶಿಯವಾಗಿ ನಿರ್ಮಾಣ ಮಾಡಲಾದ ರೈಲು ಇದಾಗಿದೆ. ಪ್ರಧಾನಿ ನರೇಂದ್ರ ಮೋದಿ ಕನಸಿನ ಆತ್ಮ ನಿರ್ಭರ ಭಾರತ ಪರಿಕಲ್ಪನೆ ಗಮನದಲ್ಲಿಟ್ಟುಕೊಂಡು ರೈಲು ತಯಾರಿಸಲಾಗಿದೆ.
ಸದ್ಯ ದೇಶದ ಅತಿ ವೇಗದ ರೈಲು ಇದಾಗಿದೆ. ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭವಾದರೆ ರಾಜಧಾನಿಯಿಂದ ಉತ್ತರ ಕರ್ನಾಟಕವನ್ನು ಕೆಲವೇ ಗಂಟೆಗಳಲ್ಲಿ ತಲುಪಬಹುದಾಗಿದೆ. ರೈಲು ಸಂಚಾರ ಯಾವಾಗ ಆರಂಭವಾಗಲಿದೆ? ಎಂಬುದು ಇನ್ನೂ ಅಂತಿಮವಾಗಿಲ್ಲ.

ಹಲವು ಜಿಲ್ಲೆಗಳಿಗೆ ಅನುಕೂಲ
ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭವಾದರೆ ಹಲವು ಜಲ್ಲೆಗಳಿಗೆ ಅನುಕೂಳವಾಗಲಿದೆ. ಬೆಂಗಳೂರಿನಿಂದ ಹೊರಡುವ ರೈಲು ತುಮಕೂರು, ದಾವಣಗೆರೆ, ಹಾವೇರಿ ಮಾರ್ಗವಾಗಿ ಸಂಚಾರ ನಡೆಸಲಿದೆ.
ಹುಬ್ಬಳ್ಳಿ-ಧಾರವಾಡದಲ್ಲಿ ನೈಋತ್ಯ ರೈಲ್ವೆ ವಲಯ ಕಚೇರಿ ಇದೆ. ಮೆಡಿಕಲ್ ಕಾಲೇಜು, ಐಐಟಿ ಸೇರಿದಂತೆ ಶೈಕ್ಷಣಿಕ, ವಾಣಿಜ್ಯೋದ್ಯಮಕ್ಕೆ ಅವಳಿ ನಗರ ಪ್ರಸಿದ್ಧಿಯಾಗಿದೆ. ರೈಲು ಸಂಚಾರ ಆರಂಭವಾದರೆ ಸಹಾಯಕವಾಗಲಿದೆ ಎಂದು ಪ್ರಹ್ಲಾದ್ ಜೋಶಿ ವಿವರಣೆ ನೀಡಿದ್ದಾರೆ.

58 ರೈಲುಗಳ ನಿರ್ಮಾಣಕ್ಕೆ ಟೆಂಡರ್
ಈಗಾಗಲೇ ಭಾರತೀಯ ರೈಲ್ವೆ 58 ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ನಿರ್ಮಾಣಕ್ಕೆ ಟೆಂಡರ್ ಕರೆದಿದೆ. 2022ರ ಆಗಸ್ಟ್ 23ರೊಳಗೆ ಇನ್ನೂ 75 ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸುವ ಗುರಿಯನ್ನು ಇಲಾಖೆ ಹೊಂದಿದೆ. 2024ರ ಹೊತ್ತಿಗೆ 102 ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ ನಡೆಸಬೇಕು ಎಂಬುದು ಗುರಿಯಾಗಿದೆ.
ಆಗಸ್ಟ್ 15ರಂದು ದೆಹಲಿಯ ಕೆಂಪುಕೋಟೆ ಮೇಲೆ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ 75 ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸುವುದಾಗಿ ಘೋಷಣೆ ಮಾಡಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾದ ಹಿನ್ನಲೆಯಲ್ಲಿ 75 ರೈಲುಗಳನ್ನು ಘೋಷಣೆ ಮಾಡಲಾಗಿತ್ತು.

ದೇಶದಲ್ಲೇ ರೈಲು ತಯಾರಿಕೆ
ವಂದೇ ಭಾರತ್ ರೈಲುಗಳನ್ನು ದೇಶದಲ್ಲಿಯೇ ತಯಾರು ಮಾಡಲಾಗುತ್ತದೆ. ಚೆನ್ನೈನಲ್ಲಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ, ಚೆನ್ನೈನ ಮಾಡರ್ನ್ ಕೋಚ್ ಫ್ಯಾಕ್ಟರಿ, ರಾಯ್ಬರೇಲಿ ಮತ್ತು ಕಪುರ್ತಲಾದ ರೈಲು ಕೋಚ್ ಫ್ಯಾಕ್ಟರಿಗಳಲ್ಲಿ ಈ ರೈಲು ನಿರ್ಮಾಣವಾಗಲಿದೆ. ವಂದೇ ಭಾರತ್ ರೈಲಿನ ವಿನ್ಯಾಸ ಸಹ ಆಕರ್ಷಕವಾಗಿದೆ. ನರೇಂದ್ರ ಮೋದಿ ಕನಸಿನ ಆತ್ಮನಿರ್ಭರ್ ಭಾರತ್ ಪರಿಕಲ್ಪನೆಯಲ್ಲಿ ಈ ರೈಲನ್ನು ತಯಾರು ಮಾಡಲಾಗಿದೆ. ನರೇಂದ್ರ ಮೋದಿ ಕ್ಷೇತ್ರವಾದ ವಾರಣಾಸಿ-ದೆಹಲಿ ನಡುವೆ ಈಗಾಗಲೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ ನಡೆಸುತ್ತಿದೆ. ಈ ರೈಲಿನ ವೇಗ 160 ಕಿ. ಮೀ.ಗಳು.
Recommended Video

ಶತಾಬ್ದಿ ರೈಲುಗಳಿಗಿಂತ ವೇಗವಾಗಿ ಸಂಚಾರ
2019ರ ಫೆಬ್ರವರಿಯಲ್ಲಿ ದೆಹಲಿ-ವಾರಣಾಸಿ ನಡುವೆ ಮತ್ತು 2019ರ ಅಕ್ಟೋಬರ್ನಲ್ಲಿ ದೆಹಲಿ-ಶ್ರೀ ಮಾತಾ ವೈಷ್ಣೋದೇವಿ ಕಟ್ರಾ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಶತಾಬ್ದಿ ರೈಲಿಗಿಂತ ವೇಗದಲ್ಲಿ ಈ ರೈಲು ಸಂಚಾರ ನಡೆಸಲಿವೆ. ರೈಲಿನ ವಿನ್ಯಾಸವನ್ನು ಬದಲಾವಣೆ ಮಾಡಲಾಗುತ್ತಿದ್ದು, 2022ರಲ್ಲಿ ಹೊಸ ವಿನ್ಯಾಸದ ರೈಲು ಹಳಿಯ ಮೇಲೆ ಇರಲಿದೆ. ಕರ್ನಾಟಕದಲ್ಲಿಯೂ ವಂದೇ ಭಾರತ್ ರೈಲು ಸಂಚಾರಕ್ಕೆ ಇಲಾಖೆ ಯಾವಾಗ ದಿನಾಂಕ ನಿಗದಿ ಮಾಡಲಿದೆ ಎಂದು ಕಾದು ನೋಡಬೇಕಿದೆ.
-
Karnataka Budget 2026: ಮಾ.6 ಸಿದ್ದರಾಮಯ್ಯ 17ನೇ ಬಜೆಟ್ ಮಂಡನೆ, ಸಮಯ, ನೇರ ಪ್ರಸಾರ ಲಿಂಕ್, ವಿವರ -
Bengaluru-Hyderabad ಬುಲೆಟ್ ಟ್ರೈನ್: ಕೇವಲ 2 ಗಂಟೆ ಪ್ರಯಾಣ, 626 ಕಿಮೀ ಉದ್ದದ ಹಾದಿಯಲ್ಲಿ 12 ನಿಲ್ದಾಣಗಳು -
ಕರ್ನಾಟಕದ 66 ಆರ್ಟಿಓಗಳಲ್ಲಿ ಡಿಜಿಟಲ್ ವ್ಯವಸ್ಥೆ: ವಾಹನ ತೋರಿಸಿದರಷ್ಟೇ ಫಿಟ್ನೆಸ್ ಪ್ರಮಾಣಪತ್ರ, ಏನಿದು? -
Karnataka Weather: ರಾಜ್ಯದಲ್ಲಿ ಏರುತ್ತಿದೆ ಬಿಸಿಲಿನ ಝಳ; ಬೆಂಗಳೂರಿನ ತಾಪಮಾನ 34 ಡಿಗ್ರಿಗೆ ಏರಿಕೆ -
ಜೈಲಲ್ಲಿರುವ ಪವಿತ್ರಾ ಗೌಡಗೆ ಮನೆ ಊಟ ವ್ಯವಸ್ಥೆಗೆ ಬ್ರೇಕ್ ಹಾಕಿದ ಹೈಕೋರ್ಟ್ -
Dog Satish: ಇನ್ಸ್ಟಾಗ್ರಾಂ ಯಾರ ಅಪ್ಪಂದೂ ಅಲ್ಲ, ವಿಡಿಯೋ ಡಿಲೀಟ್ ಮಾಡಲ್ಲ, ನನಗೆ ಮೀಟರ್ ಇದೆ: ಡಾಗ್ ಸತೀಶ್ -
Toxic: ಅವಸರಕ್ಕಿಂತ ತಾಳ್ಮೆ ಮುಖ್ಯ: ಟಾಕ್ಸಿಕ್ ಬಿಡುಗಡೆ ಮುಂದೂಡಿದ ಬೆನ್ನಲ್ಲೇ ಯಶ್ ಬೆಂಬಲಕ್ಕೆ ನಿಂತ ಅಭಿಮಾನಿಗಳು -
Karna Serial: "ಕರ್ಣ" ಧಾರಾವಾಹಿಯಿಂದ ಹೊರಬಂದ ಟಿ.ಎಸ್.ನಾಗಾಭರಣ, ಹಿರಿಯ ನಟ ಅಭಿಜಿತ್ ಎಂಟ್ರಿ -
'ವಂತಾರ'ಕ್ಕೆ ಒಂದು ವರ್ಷ: ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ -
Bengaluru: ಗೊರಗುಂಟೆಪಾಳ್ಯದ ಟ್ರಾಫಿಕ್ಗೆ ಸಿಗಲಿದ್ಯಾ ಮುಕ್ತಿ? ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು 'ಸುರಂಗ ರಸ್ತೆ' ಪ್ರಸ್ತಾಪ -
Horoscope March 4: ಈ ರಾಶಿಯವರಿಗೆ ವೃತ್ತಿಯಲ್ಲಿ ಸುಧಾರಣೆ, ಆರೋಗ್ಯ ಕಾಳಜಿ ಮುಖ್ಯ, ದಿನ ಭವಿಷ್ಯ ಇಲ್ಲಿದೆ -
Bengaluru: ‘92 ಲಕ್ಷದ ಪ್ಯಾಕೇಜ್ ಇದ್ದರೂ ಉಳಿಯಲಿಲ್ಲ ಕೆಲಸ’; ಒಂದೇ ದಿನ ಶೇ. 40ರಷ್ಟು ಸಿಬ್ಬಂದಿ ವಜಾ ಮಾಡಿದ ಐಟಿ ಕಂಪನಿ












Click it and Unblock the Notifications