ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈಗ ಅಧಿಕೃತ, ಧಾರವಾಡದಲ್ಲಿಯೇ ಐಐಟಿ ಸ್ಥಾಪನೆ

|
Google Oneindia Kannada News

ಧಾರವಾಡ, ಡಿಸೆಂಬರ್ 03 : ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯನ್ನು ಧಾರವಾಡದಲ್ಲಿ ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಮೊದಲ ವರ್ಷದಲ್ಲಿ 180 ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಸ ಸಚಿವ ಸಂಪುಟ ಸಭೆಯಲ್ಲಿ ದೇಶದಲ್ಲಿ ನೂತನವಾಗಿ 6 ಐಐಟಿಗಳನ್ನು ಆರಂಭಿಸಲು ಒಪ್ಪಿಗೆ ನೀಡಲಾಗಿದೆ. ಕರ್ನಾಟಕ, ಆಂಧ್ರಪ್ರದೇಶ, ಛತ್ತೀಸ್‌ ಗಢ, ಗೋವಾ, ಜಮ್ಮು ಮತ್ತು ಕೇರಳದಲ್ಲಿ ನೂತನ ಐಐಟಿಗಳು ಸ್ಥಾಪನೆಯಾಗಲಿವೆ. [ಧಾರವಾಡದಲ್ಲಿ ಸ್ಥಾಪನೆಯಾಗಲಿದೆ ಐಐಟಿ]

iit

ಧಾರವಾಡದಲ್ಲೇ ಐಐಟಿ : ಕರ್ನಾಟಕದಲ್ಲಿ ಧಾರವಾಡದಲ್ಲಿ ಐಐಟಿ ಸ್ಥಾಪನೆ ಮಾಡಲು ಮೊದಲು ಕೇಂದ್ರ ಒಪ್ಪಿಗೆ ನೀಡಿತ್ತು. ಇದರಿಂದ ರಾಯಚೂರಿನಲ್ಲಿ ಪ್ರತಿಭಟನೆ ಆರಂಭವಾಗಿತ್ತು. ಹಿಂದುಳಿದ ಪ್ರದೇಶವಾದ ರಾಯಚೂರಿನಲ್ಲೇ ಐಐಟಿ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆಗಳು ನಡೆದಿದ್ದವು. ಸದ್ಯ, ಧಾರವಾಡದಲ್ಲಿಯೇ ಐಐಟಿ ಸ್ಥಾಪನೆಯಾಗುವುದು ಖಚಿತವಾದಂತಾಗಿದೆ. [ಐಐಟಿ ರಾಯಚೂರಿಗೆ ನೀಡಿ: ಕೇಂದ್ರಕ್ಕೆ ಸಿಎಂ ಪತ್ರ]

ಧಾರವಾಡದಲ್ಲಿ ಸ್ಥಾಪನೆಯಾಗುವ ಐಐಟಿಯಲ್ಲಿ ಮೊಲದ ವರ್ಷದಲ್ಲಿ 180 ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. 2ನೇ ವರ್ಷದಲ್ಲಿ 450 ಮತ್ತು ಮೂರನೇ ವರ್ಷದಲ್ಲಿ 928 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ. [ಒನ್ ಇಂಡಿಯಾ ಓದುಗರ ಆಯ್ಕೆ : ಧಾರವಾಡದಲ್ಲೇ ಐಐಟಿ]

ಒಟ್ಟು 6 ಐಐಟಿಗಳ ಕಾರ್ಯನಿರ್ವಹಣೆಗಾಗಿ ಕೇಂದ್ರ ಸರ್ಕಾರ 2015 ರಿಂದ 18ರ ತನಕ 1,411 ಕೋಟಿ ಅನುದಾನವನ್ನು ನೀಡಲಿದೆ. ಮೂರುವರ್ಷ ತಾತ್ಕಾಲಿಕ ಸ್ಥಳದಲ್ಲಿ ಐಐಟಿಗಳು ಕೆಲಸ ಮಾಡಲಿದ್ದು, 4ನೇ ವರ್ಷಕ್ಕೆ ಶಾಶ್ವತ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗುತ್ತದೆ.

Today cabinet has formally approved IIT for Dharwad. Thanks to beloved PM Shri Naredra Modiji, H.R.D. Minister Smt...

Posted by Pralhad Joshi onWednesday, December 2, 2015

English summary
The Union Cabinet on December 2 approved to setting up of six new Indian Institutes of Technology (IITs) in Andhra Pradesh, Chhattisgarh, Goa, Jammu, Kerala and Karnataka (Dharwad).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X