ಧಾರವಾಡ : ಕಾರು ಪಲ್ಟಿ ಇಬ್ಬರ ಸಾವು

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಧಾರವಾಡ, ಮಾರ್ಚ್ 26 : ಅತೀ ವೇಗವಾಗಿ ಬಂದ ಕಾರು ಪಲ್ಟಿಯಾಗಿ ಇಬ್ಬರು ಮೃತಪಟ್ಟ ಘಟನೆ ಧಾರವಾಡದಲ್ಲಿ ನಡೆದಿದೆ. ಅಳ್ನಾವರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಶನಿವಾರ ಬೆಳಗ್ಗೆ ಧಾರವಾಡ ತಾಲೂಕಿನ ಹುಲಕೊಪ್ಪ ಗ್ರಾಮದ ಕ್ರಾಸ್ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ರಾಬಿನ್ (19) ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಸ್ಟೀಫನ್ (19) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. [ಅಪಘಾತವಾದಾಗ ಜೀವ ಉಳಿಸಲು ನೆರವಾಗಿ]

crime beat

ಸ್ಟೀಫನ್, ರಾಬಿನ್ ಸೇರಿದಂತೆ ನಾಲ್ವರು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಗಾಯಗೊಂಡಿರುವ ಇನ್ನಿಬ್ಬರಿಗೆ ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಳ್ನಾವರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. [ದೇಹ ತುಂಡಾದರೂ ಕಣ್ಣು ದಾನ ಮಾಡಿ ಬೆಳಕಾದರು]

ಅತಿಯಾದ ವೇಗವೇ ಘಟನೆಗೆ ಕಾರಣ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ವೇಗವಾಗಿ ಬಂದ ಕಾರು, ನಿಯಂತ್ರಣ ತಪ್ಪಿ ಪಲ್ಟಿಯಾಗಿ ಈ ಅಪಘಾತ ನಡೆದಿದೆ.

-
-
-
-
-

1 ಕೋಟಿ ಮೌಲ್ಯದ ಬ್ರೌನ್ ಶುಗರ್ ವಶ : 1 ಕೋಟಿ ಮೌಲ್ಯದ ಬ್ರೌನ್ ಶುಗರ್ ವಶ : ಬೆಂಗಳೂರಿನಲ್ಲಿ ಬ್ರೌನ್‌ ಶುಗರ್ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, 1 ಕೋಟಿ ಮೌಲ್ಯದ ಬ್ರೌನ್ ಶುಗರ್‌ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ತಮಿಳುನಾಡು ಮೂಲದ ಮುರುಗನ್, ಸೀನಾ, ಪಳನಿ ಎಂದು ಗುರುತಿಸಲಾಗಿದೆ.

ಪೆರಂಬದೂರಿನಿಂದ ಬ್ರೌನ್‌ ಶುಗರ್‌ ಅನ್ನು ತಂದು ಹೊಸೂರು ರಸ್ತೆಯ ಪರಪ್ಪನ ಅಗ್ರಹಾರದ ಖಾಲಿ ಜಾಗವೊಂದರಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Robin (19) and Stefun (19) were killed Dharwad, Karnataka after car overturns on Saturday, March 26th, early morning.
Please Wait while comments are loading...