ವಿದ್ಯುತ್ ಸರಬರಾಜಿಗೆ ಮತ್ತಷ್ಟು ಬಲ: ಧಾರವಾಡಕ್ಕೆ ಬರಲಿದೆ ಸೌರ ಹಾಗೂ ಪವನಶಕ್ತಿ ಹೈಬ್ರೀಡ್ ಪಾರ್ಕ್!

ಧಾರವಾಡ, ಜೂನ್‌ 08: ರಾಜ್ಯದಲ್ಲಿನ ವಿದ್ಯುತ್ ಸರಬರಾಜು ವ್ಯವಸ್ಥೆಗೆ ಮತ್ತಷ್ಟು ಬಲ ತುಂಬಲು ಸರ್ಕಾರ ನಿರ್ಧಾರ ಮಾಡಿದ್ದು, ಧಾರವಾಡ ಜಿಲ್ಲೆಯಲ್ಲಿ ಸೌರ ಮತ್ತು ಪವನಶಕ್ತಿಯ ಹೈಬ್ರಿಡ್ ಪಾರ್ಕ್ ನಿರ್ಮಾಣದ ಕನಸು ದಟ್ಟವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಂಟು ಜಿಲ್ಲೆಯಲ್ಲಿ ಹೈಬ್ರೀಡ್ ಪಾರ್ಕ್ ನಿರ್ಮಾಣಕ್ಕೆ ಚಿಂತನೆ ನಡೆಸಿದ್ದು, ಧಾರವಾಡಕ್ಕೂ ಹೈಬ್ರೀಡ್ ಪಾರ್ಕ್ ಬರಲಿದೆ.

ರಾಜ್ಯದಲ್ಲಿ ವಿದ್ಯುತ್‌ ಉತ್ಪಾದನೆ ಹೆಚ್ಚಿಸಲು ಸೌರ ಮತ್ತು ಪವನ ಶಕ್ತಿ ಮೂಲಕ 'ಹೈಬ್ರಿಡ್ ವಿದ್ಯುತ್' ಉತ್ಪಾದಿಸುವ ಯೋಜನೆ ರೂಪಿಸಿದ್ದು, ರಾಜ್ಯದ ಎಂಟು ಜಿಲ್ಲೆಗಳಲ್ಲಿ ಹೈಬ್ರಿಡ್ ಪಾರ್ಕ್ ನಿರ್ಮಿಸಲು ಉದ್ದೇಶಿಸಲಾಗಿದೆ. ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ' (ಕ್ರೆಡಲ್) ಯೋಜನೆ ರೂಪಿಸಿದ್ದು, ಈ ಸಂಬಂಧ ವಿವರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ.

The Government Is Planning To Build Solar And Wind Power Hybrid Parks

ರಾಜ್ಯದಲ್ಲಿ ನವೀಕರಿಸಬಹುದಾದ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಸೌರ ಮತ್ತು ಪವನ ವಿದ್ಯುತ್ ಪ್ರಮಾಣ ಹೆಚ್ಚಿಸಲಾಗುತ್ತಿದೆ. ರಾಜ್ಯದಲ್ಲಿ ಪ್ರಸ್ತುತ 15.7 ಗಿಗಾ ವ್ಯಾಟ್ ನವೀಕರಿಸಬಹುದಾದ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ಈ ವಿದ್ಯುತ್‌ನಲ್ಲಿ ಶೇ.50 ವಿದ್ಯುತ್‌ ರಾಜ್ಯಕ್ಕೆ ಪೂರೈಸಿ, ಉಳಿದ ವಿದ್ಯುತ್ತನ್ನು ಮಾರಾಟ ಮಾಡಲಾಗುತ್ತಿದೆ.

ಇದೀಗ ಸೌರ ಮತ್ತು ಪವನ ಶಕ್ತಿ ಮೂಲಕ ಉತ್ಪಾದಿಸಲಾಗುವ ವಿದ್ಯುತ್ತನ್ನು ಸಮೀಕರಿಸಿ 'ಹೈಬ್ರಿಡ್ ವಿದ್ಯುತ್‌' ಆಗಿ ಪರಿವರ್ತಿಸಿ ಬ್ಯಾಟರಿಗಳಲ್ಲಿ ಸಂಗ್ರಹಿಸಿ ಪೂರೈಸುವ ಯೋಜನೆ ಸಂಬಂಧ ಡಿಪಿಆರ್ ಸಿದ್ಧಪಡಿಸಲಾಗುತ್ತಿದ್ದು, ಶೀಘ್ರ ಯೋಜನೆ ಜಾರಿಗೆ ಚಾಲನೆ ನೀಡಲಾಗುತ್ತದೆ.

2022-27ನೇ ಸಾಲಿನ ನವೀಕರಿಸಬಹುದಾದ ಇಂಧನ ನೀತಿಯಲ್ಲಿ ನವೀಕರಿಸಬಹುದಾದ ವಿದ್ಯುತ್ ಪ್ರಮಾಣವನ್ನು ಹೆಚ್ಚಿಸಲು ಅವಕಾಶ ಕಲ್ಪಿಸಲಾಗಿದೆ. ಸದ್ಯ ಉತ್ಪಾದನೆಯಾಗುತ್ತಿರುವ 15.7 ಗಿಗಾ ವ್ಯಾಟ್ ವಿದ್ಯುತ್‌ ಪ್ರಮಾಣವನ್ನು ಶೇ.20 ಹೆಚ್ಚಿಸುವ ಗುರಿ ಹೊಂದಲಾಗಿದೆ.

The Government Is Planning To Build Solar And Wind Power Hybrid Parks

ಹೀಗೆ ಉತ್ಪಾದಿಸುವ ಹೆಚ್ಚುವರಿ ವಿದ್ಯುತ್‌ನ್ನು ಬೇರೆಯವರಿಗೆ ಮಾರಾಟ ಮಾಡುವ ಬದಲು ಅದನ್ನು ಶೇಖರಿಸಿ, ಹೆಚ್ಚುವರಿ ವಿದ್ಯುತ್‌ನ್ನು ಬ್ಯಾಟರಿಗಳಲ್ಲಿ ಸಂಗ್ರ ಹಿಸಲಾಗುತ್ತದೆ. ಅದಾದ ನಂತರ ಎರಡೂ ವಿದ್ಯುತ್‌ಅನ್ನು ಒಟ್ಟಿಗೆ ಸೇರಿಸಿ ಹೈಬ್ರಿಡ್ ವಿದ್ಯುತ್‌ ಸಿದ್ಧಪಡಿಸಲಾಗುತ್ತದೆ. ಈ ಕ್ರಮದಿಂದ ಕನಿಷ್ಠ 5 ಗಿಗಾ ವ್ಯಾಟ್‌ನಷ್ಟು ಹೈಬ್ರಿಡ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಸಂಸ್ಥೆಯು ಹೊಂದಿದೆ.

ಸದ್ಯ ಪವನ ಶಕ್ತಿ ಹಾಗೂ ಸೋಲಾರ್ ಗ್ರಿಡ್‌ಗಳ ಮೂಲಕ ವಿದ್ಯುತ್ ಉತ್ಪಾದಿಸುವ ಜಿಲ್ಲೆಗಳನ್ನು ಗುರುತಿಸಲಾಗಿದ್ದು, ಮೊದಲ ಹಂತದಲ್ಲಿ ಚಿತ್ರದುರ್ಗ, ಕೊಪ್ಪಳ, ಧಾರವಾಡ, ರಾಯಚೂರು, ವಿಜಯನಗರ, ವಿಜಯಪುರ, ತುಮಕೂರು ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಈ ಪಾರ್ಕ್ ನಿರ್ಮಿಸಲು ನಿರ್ಧರಿಸಲಾಗಿದೆ. 'ಕ್ರೆಡಲ್' ಸಿದ್ಧಪಡಿಸುತ್ತಿರುವ ಡಿಪಿಆರ್‌ನಲ್ಲಿ ಹೈಬ್ರಿಡ್ ಪಾರ್ಕ್‌ ನಿರ್ಮಿಸುವ ವಿಧಾನ, ಸ್ಥಳಾವಕಾಶ ಎಷ್ಟಿರಬೇಕು, ಪವನ ಶಕ್ತಿ, ಸೌರಶಕ್ತಿ ಗ್ರಿಡ್‌ಗಳ ಮೂಲಕ ವಿದ್ಯುತ್ ನ್ನು ಯಾವ ಮಾರ್ಗದಲ್ಲಿ ತರಬೇಕು, ಬ್ಯಾಟರಿಗಳ ಸಾಮರ್ಥ್ಯ ಎಷ್ಟಿರಬೇಕೆಂಬಂಥ ಅಂಶಗಳಿರಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+