ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡ ಜಿಪಂ ಸದಸ್ಯ ಯೋಗೇಶ್ ಗೌಡ ಹತ್ಯೆ ತನಿಖೆಗೆ ವಿಶೇಷ ತಂಡ ರಚನೆ

|
Google Oneindia Kannada News

ಧಾರವಾಡ, ನವೆಂಬರ್ 30: ಕಳೆದ ವರ್ಷ 2016 ಜೂನ್ 15ರಂದು ನಡೆದ ಧಾರವಾಡ ಜಿಲ್ಲಾ ಪಂಚಾಯಿತಿ ಬಿಜೆಪಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದೆ.

ಹತ್ಯೆಯಾದ BJP ಮುಖಂಡ ಯೋಗೇಶ್ ಪರ ವಕೀಲನಿಗೆ ಸಚಿವನಿಂದ ಧಮ್ಕಿಹತ್ಯೆಯಾದ BJP ಮುಖಂಡ ಯೋಗೇಶ್ ಪರ ವಕೀಲನಿಗೆ ಸಚಿವನಿಂದ ಧಮ್ಕಿ

ಯೋಗೀಶ್ ಗೌಡ ಹತ್ಯೆ ಕೇಸ್ ಅನ್ನು ತನಿಖೆ ನಡೆಸಲು ಬೆಳಗಾವಿ ಉತ್ತರ ವಲಯ ಐಜಿಪಿ ರಾಮಚಂದ್ರರಾವ್ ಅವರು ವಿಶೇಷ ತಂಡ ರಚಿಸಿದ್ದಾರೆ. ಇದೇ ಪ್ರಕರಣದಲ್ಲಿ ಧಾರವಾಡ ಉಸ್ತುವಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ ಮೂವರ ವಿರುದ್ಧ ದೂರು ದಾಖಲಾಗಿದೆ. ಈ ಹಿನ್ನೆಯಲ್ಲಿ ಈ ಕೇಸ್ ನ್ನು ತನಿಖೆ ನಡೆಸಲು ವಿಶೇಷ ತಂಡ ರಚಿಸಲಾಗಿದೆ.

Special squads formed to investigate Dharawada ZP BJP member Yogesh Gowda murder case

ಯೋಗೀಶ್ ಗೌಡ ಪರ ವಕೀಲ ಆನಂದ್ ಎನ್ನುವರಿಗೆ ಇತ್ತೀಚೆಗೆ ಸಚಿವ ವಿನಯ್ ಕುಲಕರ್ಣಿ ದೂರವಾಣಿ ಮೂಲಕ ಬೆದರಿಕೆ ಹಾಕಿದ್ದರು. ಬೆದರಿಕೆ ಹಾಕಿದ್ದ ಆಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ವಿನಯ್ ಕುಲಕರ್ಣಿ ರಾಜೀನಾಮೆ ನೀಡುವಂತೆ ಆಗ್ರಹಿಸಿ ಬಿಜೆಪಿ ರಾಜ್ಯಾದಂತ್ಯ ಪ್ರತಿಭಟನೆ ಮಾಡುತ್ತಿದೆ.

ಧಾರವಾಡ : ಯೋಗೇಶ ಗೌಡ ಕೊಲೆ, ಐವರ ಬಂಧನಧಾರವಾಡ : ಯೋಗೇಶ ಗೌಡ ಕೊಲೆ, ಐವರ ಬಂಧನ

ಅಷ್ಟೇ ಅಲ್ಲದೇ ವಿನಯ್ ಕುಲಕರ್ಣಿ ಸಾಕ್ಷ್ಯಗಳನ್ನು ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹತ್ಯೆಯಾದ ಯೋಗೇಶ್ ಗೌಡ ಅವರ ಸಹೋದರ ಗುರುನಾಥ್ ಗೌಡ ನವೆಂಬರ್ 29ರಂದು ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದಾರೆ.

2016, ಜೂನ್ 15ರಂದು ಸಪ್ತಾಪುರ ಪ್ರದೇಶದಲ್ಲಿರುವ ಉದಯ್ ಜಿಮ್‌ನಲ್ಲಿ ಬೆಳಗ್ಗೆ 7 ಗಂಟೆ ಸುಮಾರಿಗೆ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ ಗೌಡ (35) ಅವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.

English summary
Special squads formed to investigate Dharawada zilla panchayat BJP member Yogesh Gowda murder case. Belagavi north Zone IGP Ramachandra Rao has created a special team to investigate Yogish Gowda's murder case. Yogesh Gowda murder on June 15th, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X