ಧಾರವಾಡ ಲೋಕಸಭಾ ಟಿಕೆಟ್, ಸೋಲಿನ ಭವಿಷ್ಯ ನುಡಿದ ಸಂತೋಷ್ ಲಾಡ್
ಧಾರವಾಡ, ಮಾರ್ಚ್ 11: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ವಿದ್ಯಾಕಾಶಿ ಧಾರವಾಡ ಜಿಲ್ಲೆಯಲ್ಲಿ ಮಾತ್ರವಲ್ಲದೇ ಇಡಿ ದೇಶ ಹಾಗೂ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಒಳ್ಳೆ ಅವಕಾಶ ಇದೆ. ನಮ್ಮ ಅಭ್ಯರ್ಥಿಗಳು ಆಯಾ ಕ್ಷೇತ್ರಗಳಿಗೆ ಸೂಕ್ತವಾಗಿದ್ದಾರೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಸೋಮವಾರ ಧಾರವಾಡ ನಗರದಲ್ಲಿ ಸುದ್ದಿಗಾರರಿಗೆ ಧಾರವಾಡ ಲೋಕಸಭಾ ಟಿಕೆಟ್ ಕುರಿತು ಪ್ರತಿಕ್ರಿಯಿಸಿದ ಅವರು, ಧಾರವಾಡಕ್ಕೆ ಸೂಕ್ತ ಅಭ್ಯರ್ಥಿ ನಿಲ್ಲುತ್ತಾರೆ ಎಂದು ಅವರು ಮಾಹಿತಿ ನೀಡಿದರು. ಕಾಂಗ್ರೆಸ್ ಎಲ್ಲ 28 ಕ್ಷೇತ್ರಗಳಿಗೆ ಸೂಕ್ತ, ಅರ್ಹ ಅಭ್ಯರ್ಥಿಗಳೇ ನಿಲ್ಲಲಿದ್ದಾರೆ.

ಧಾರವಾಡದಲ್ಲಿ ಈ ಬಾರಿ ಪ್ರಹ್ಲಾದ್ ಜೋಶಿಯವರು ಕಣಕ್ಕಿಳಿದರೆ ಕಾಂಗ್ರೆಸ್ ಮುಂದೆ ಸೋಲು ಅನುಭವಿಸುತ್ತಾರೆ. ಕಾಂಗ್ರೆಸ್‌ನಿಂದ ಯಾರೇ ಅಭ್ಯರ್ಥಿ ಆಗಲಿ, ಸಂತೋಷ್ ಲಾಡ್ ಇದ್ದರೂ ಇಲ್ಲದಿದ್ದರೂ ಜೋಶಿಯವರು ಟಫ್ ಫೈಟ್ ಖಂಡತ ಕಡಲಿದ್ದೇವೆ ಎಂದು ಅವರು ಭವಷ್ಯ ನುಡಿದರು.
ಬಿಜೆಪಿಗೆ 200ಕ್ಕೂ ಹೆಚ್ಚು ಸ್ಥಾನ ಬರಲ್ಲ
ಬಿಜೆಪಿಯವರು ಈ ಬಾರಿ 'ಅಬಕಿ ಬಾರ್ 400 ಪಾರ್' ಎನ್ನುತ್ತಿದ್ದಾರೆ. ಡಬ್ಬಾ ಒಡೆದ ಮೇಲೆ ಕ್ಲಿನ್ ಆಂಡ್ ಕ್ಲಿನ್ ಎಲೆಕ್ಷನ್ ಟೆಂಪರ್ ಮಾಡಲಾರದೇ, ಕೇವಲ ಇವಿಎಂನಿಂದ ಸರಿಯಾಗಿ ಚುನಾವಣೆ ಮಾಡಿದರೆ ಬಿಜೆಪಿಗೆ 200ಕ್ಕೂ ಹೆಚ್ಚು ಸ್ಥಾನ ಧಕ್ಕಲಾರದು.
ಇವಿಎಂ ಬಗ್ಗೆ ಬಹಳ ಜನ ಹೋರಾಟ ಮಾಡುತಿದ್ದಾರೆ. ಈ ಬಗ್ಗೆ ಜನರಿಗೆ ಸಂಶಯ (ಡೌಟು) ಇದೆ, ಟ್ಯಾಂಪರ್ ಮಾಡಿದ ಸಾಕ್ಷಿ ಕೂಡಾ ಇವೆ. ಎಲೆಕ್ಟ್ರಾಲ್ ಸಿಸ್ಟಮ್ ನಲ್ಲಿ ಜುಡಿಸಿಯರಿ ಮೆಂಬರ್ ಇರಬೇಕಿತ್ತು. ಅದನ್ನು ಇವರು ಯಾಕೆ ತಗದರೂ? ಇಲ್ಲಿ ನಾಲ್ಕು ಡೈರೆಕ್ಟರ್ ಗಳು ಬಿಜೆಪಿಯವರೇ ಇದ್ದಾರೆ. ಹೀಗಾಗಿ ಈ ಬಗ್ಗೆ ಅನುಮಾನ ವ್ಯಕ್ತವಾಗುತ್ತದೆ. ಸರಿಯಾಗಿ ಚುನಾವಣೆ ಮಾಡಿದರೂ ಬಿಜೆಪಿಗೆ ಗೆಲ್ಲಲು ಆಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸಿಲಿಂಡರ ದರ ಕಡಿಮೆ ಮಾಡಿದ್ದು ಯಾಕೆ?
ಅಡುಗೆ ಪ್ರತಿ ಸಿಲಿಂಡರ್ ಬೆಲೆ 1000 ರೂಪಾಯಿ ಆಗಿದೆ. ಆದರೆ ನೂರು ರೂಪಾಯಿ ಕಡಿಮೆ ಮಾಡಿದರೆ ಏನು ಮಾಡುವುದು? ಚುನಾವಣೆಗಾಗಿ ಕೇಂದ್ರ ಸರ್ಕಾರದವರು ಇದನ್ನು ಮಾಡಿದ್ದಾರೆ. ಯಾಕೆ ನೂರು ರೂಪಾಯಿ ಕಡಿಮೆ ಮಾಡಿದ್ದು? ಪ್ರಶ್ನಿಸಿದರು. ಬಿಜೆಪಿ ಹಾಗೂ ಮೋದಿ ಮಾಡಿದ ಕೆಲಸಗಳು ಬಿಜೆಪಿಗೆ ಲಾಭ ತರುವ ನಂಬಿಕೆ ಜನರಿಗೆ ಇಲ್ಲಾ. ಕಳೆದ ಹತ್ತು ವರ್ಷಗಳಲ್ಲಿ ಯಾವ ಒಬ್ಬ ಹಿಂದೂ ಬಡವರಿಗೆ ಲಾಭ ಆಗಿಲ್ಲ ಎಂದು ಅವರು ದೂರಿದರು.
ಬಿಜೆಪಿ ಬಂದ ಈ ಕಳೆದ ಎರಡು ಅವಧಿಯಲ್ಲಿ ದೇಶದ ರೈತರು, ಬಡವರಿಗೆ, ಕೂಲಿ ಕಾರ್ಮಿಕ, ಸಣ್ಣ ವ್ಯಾಪಾರಿಗೆ ಒಂದು ರೂ ಲಾಭ ಆಗಿಲ್ಲ. ಅನುಕೂಲ ಆಗಿದ್ದರೆ ಉದಾಹರಣೆ ಕೊಡಲಿ ನೋಡೋಣ ಎಂದು ತಮ್ಮದೇ ಸ್ಟೈಲಿನಲ್ಲಿ ಸವಾಲು ಹಾಕಿದರು.
ದೇಶದ ಸಾಲದ ಬಗ್ಗೆ ಯಾರು ಮಾತನಾಡಬೇಕು?, 10 ವರ್ಷದಲ್ಲಿ ಬಹಳಷ್ಟು ಸಾಲ ಮಾಡಿದ್ದಾರೆ. ದೇಶದ ಸಾಲ ದುಪ್ಪಟ್ಟು ಆಗಿದೆ. ಇದೆಕ್ಕೆ ಯಾರು ಉತ್ತರ ಕೊಡುತ್ತಾರೆ? ಎಂದು ಪ್ರಶ್ನಿಸಿದ ಅವರು, 'ಹಿಂದು ಕೊಡಿಫಿಕೆಷನ್' ಮಸೂದೆಯನ್ನು ಇದೇ ಸಂಘ ಪರಿವಾರ ಹಾಗೂ ಬಿಜೆಪಿ ವಿರೋಧ ಮಾಡಿದ್ದರು ಎಂದು ಕೇಂದ್ರ ವಿರುದ್ಧ ಕಿಡಿ ಕಾರಿದರು.
ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರವನ್ನು ಕಟುವಾಗಿ ಸಂತೋಷ್ ಲಾಡ್ ಪ್ರಶ್ನೆ ಮಾಡುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ ಏನು ಅಭಿವೃದ್ಧಿ ಆಗಿಲ್ಲ ಎಂದು ಪ್ರತಿಪಾದಿಸುತ್ತಿರುವ ಅವರು ಚರ್ಚೆ ಬನ್ನಿ ಎಂದು ಸವಾಲು ಹಾಕಿರುವ ವಿಡಿಯೋ ತುಣಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.












Click it and Unblock the Notifications