Darshan Case: A9 ಆರೋಪಿ ಬೆಂಗಳೂರಿನಿಂದ ಧಾರವಾಡಕ್ಕೆ ಶಿಫ್ಟ್, ಪೊಲೀಸರಿಂದ ಸೂಕ್ತ ಭದ್ರತೆ

ಧಾರವಾಡ, ಆಗಸ್ಟ್ 28: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಜೊತೆಗೆ ಒಟ್ಟು 17 ಮಂದಿ ಅಂಧರ್ ಆಗಿದ್ದರು. ಇದೀಗ ಜೈಲಿನಲ್ಲಿ ಆರೋಪಿಗಳಿಗೆ ವಿಶೇಷ ಆತಿಥ್ಯ ಸಿಗುತ್ತಿದೆ ಎಂಬ ಕಾರಣಕ್ಕೆ ಎಲ್ಲರನ್ನು ಬೇರೆ ಬೇರೆ ಜೈಲಿಗೆ ಸ್ಥಳಾಂತರ ಮಾಡುತ್ತಿದೆ. 9ನೇ ಆರೋಪಿಯನ್ನು ಧಾರವಾಡ ಜಿಲ್ಲೆಯ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲು ಎಲ್ಲ ತಯಾರಿ ನಡೆದಿದೆ. ಜೈಲಿನ ಅಧಿಕಾರಿಗಳು ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A9 ಆರೋಪಿ ಧನರಾಜ್ ಸಹ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ. ಒಂದಷ್ಟು ಫೋಟೋಗಳು ವೈರಲ್ ಆಗುತ್ತಿದ್ದಂತೆ ಆತನನ್ನು ಕೋರ್ಟ್ ಆದೇಶದನ್ವಯ ಧಾರವಾಡ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗುತ್ತಿದೆ. ಇಂದು ಸಂಜೆ 6 ಗಂಟೆಯೊಳಗೆ ಆರೋಪಿ ಧನರಾಜ್ ಈ ಜೈಲಿಗೆ ಬರಲಿದ್ದಾನೆ.

Renukaswamy Case Accused 9 Dhanraj Shift to Dharwad Cental Prison from Bengaluru Jail

ಜೈಲಿಗೆ ಬರುತ್ತಿದ್ದಂತೆ ಧನರಾಜ್ ಆರೋಗ್ಯ ತಪಾಸಣೆ

ಬೆಂಗಳೂರಿನಿಂದ ಧಾರವಾಡಕ್ಕೆ ಶಿಫ್ಟ್ ಆಗಲಿರುವ ಆರೋಪಿ ಧನರಾಜ್ ಅನ್ನು ಜೈಲಿನ ಒಳಗೆ ಬರುತ್ತಿದ್ದಂತೆ ಅಗತ್ಯ ತಪಾಸಣೆ ನಡೆಯಲಿದೆ. ವೈದ್ಯರು ಸ್ಥಳದಲ್ಲಿದ್ದು, ಆರೋಪಿಯ ಆರೋಗ್ಯ ತಪಾಸಣೆ ಮಾಡಿ ಜೈಲಾಧಿಕಾರಿಗಳಿಗೆ ವರದಿ ನೀಡಲಿದ್ದಾರೆ. ಆತನನ್ನು ಸಾಮಾನ್ಯ ಬ್ಯಾರೆಕ್‌ನಲ್ಲಿ ಇಡಲು ಜೈಲಾಧಿಕಾರಿಗಳು ತಿರ್ಮಾನಿಸಿದ್ದಾರೆ.

ಈ ಸಂಬಂಧ ಬುಧವಾರ ಬೆಳಗ್ಗೆಯಿಂದಲೇ ಧಾರವಾಡ ಕಾರಾಗೃಹ ಜೈಲಿನ ಅಧಿಕಾರಿಗಳು ಸೂಕ್ತ ತಯಾರಿ ಮಾಡಿಕೊಂಡಿದ್ದಾರೆ. ಜೈಲಿನ ಸುತ್ತ ಬಿಗಿ ಭದ್ರತೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+