Rajyotsava Award 2023: ಸಾಂಸ್ಕೃತಿಕ ನಗರಿಯ 6 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ, ಯಾವ್ಯಾವ ಕ್ಷೇತ್ರ?, ಮಾಹಿತಿ
ಮೈಸೂರು, ನವೆಂಬರ್, 01: ಸಾಂಸ್ಕೃತಿಕ ನಗರಿ ಮೈಸೂರಿನ ಆರು ಸಾಧಕರಿಗೆ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸುವ ಮೂಲಕ ಗೌರವಿಸಿದೆ.
ಪಿ.ಗೌರಯ್ಯ (ಶಿಲ್ಪಕಲೆ/ಚಿತ್ರಕಲೆ), ಪಿ.ಗಂಗಾಧರಸ್ವಾಮಿ(ರಂಗಭೂಮಿ), ಮಹದೇವು(ಜಾನಪದ), ಮಿಮಿಕ್ರಿ ದಯಾನಂದ್ ಹಾಗೂ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್(ಸಂಕೀರ್ಣ), ಜವರಪ್ಪಘಿ(ಮಾಧ್ಯಮ) ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅದೇ ರೀತಿ ಮೊದಲ ಬಾರಿಗೆ 'ಪುಸ್ತಕ ಪ್ರಕಾಶನ'ಕ್ಕೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.

ಪಿ.ಗಂಗಾಧರ ಸ್ವಾಮಿ
ಹಿರಿಯ ರಂಗಭೂಮಿ ಕಲಾವಿದರಾದ 74 ವರ್ಷದ ಪಿ.ಗಂಗಾಧರ ಸ್ವಾಮಿ ಈ ಕ್ಷೇತ್ರದಲ್ಲಿ 49 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. 1971ರಲ್ಲಿ ಬೆಂಗಳೂರಿನಲ್ಲಿ ರಂಗಭೂಮಿಗೆ ಪದಾರ್ಪಣೆ ಮಾಡಿದ ಗಂಗಾಧರ ಸ್ವಾಮಿ ಅವರು ಗದಗ ಮೂಲದ ಮುಂಡರಗಿ ಗ್ರಾಮದವರು. 1989ರಲ್ಲಿ ಮೈಸೂರು ರಂಗಾಯಣದಲ್ಲಿ ಪ್ರಾಧ್ಯಾಪಕರಾಗಿ, 2007ರಲ್ಲಿ ಧಾರವಾಡ ರಂಗಾಯಣ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು.
ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್
ಪ್ರತಿಭೆ ಮತ್ತು ಪಾಂಡಿತ್ಯಗಳ ಸಮಪಾಕದ ಅಪೂರ್ವ ವ್ಯಕ್ತಿತ್ವ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಅವರದು. ಕಾವ್ಯ, ಕಥೆ, ಅನುವಾದ, ಸಂಶೋಧನೆ, ವಿಮರ್ಶೆ, ನಿಘಂಟುರಚನೆ, ಗ್ರಂಥಸಂಪಾದನೆ, ಗೀತರೂಪಕ ಮುಂತಾದ ವಿವಿಧ ಪ್ರಕಾರಗಳಲ್ಲಿ 150ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಇನ್ಲೆ ಕಲೆಯ ಪಿ.ಗೌರಯ್ಯ
ಳಿವಿನಂಚಿನಲ್ಲಿರುವ ಸಾಂಪ್ರದಾಯಿಕ ಇನ್ಲೆ ಕಲೆಯನ್ನು ಸಂರಕ್ಷಣೆಯೊಂದಿಗೆ ಕಲೆಯ ಉಳಿವಿಗೆ ಪಿ.ಗೌರಯ್ಯ ಶ್ರಮಿಸುತ್ತಿದ್ದಾರೆ. 68 ವರ್ಷದ ಗೌರಯ್ಯನವರು ಕರಕುಶಲ ಕಲೆಯ ಮಹಾಗುರು ಮೀರ್ ಶೌಕತ್ ಆಲಿ ಅವರಲ್ಲಿ ಇನ್ಲೆ ಕಲೆಯನ್ನು ಕಲಿತರು. ಅದೇ ಕಲೆಯಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ. "ಕಲಾಕೃತಿ ರಚನೆಯಲ್ಲಿ ಇನ್ಲೆ ಕಲೆ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಅಪರೂಪದ ಕಲೆಯನ್ನು ಗುರುತಿಸಿದ ಸರಕಾರಕ್ಕೆ ಅಭಿನಂದನೆ ತಿಳಿಸುತ್ತೇನೆ," ಎಂದು ಗೌರಯ್ಯ ತಿಳಿಸಿದ್ದಾರೆ.
ಮಿಮಿಕ್ರಿ ದಯಾನಂದ್
ಮಿಮಿಕ್ರಿ ದಯಾನಂದ್ ಅವರು ಕನ್ನಡದಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿ ಕಲಾವಿದರ ಪೈಕಿ ಅಗ್ರಸಾಲಿನಲ್ಲಿ ನಿಲ್ಲುತ್ತಾರೆ. 1990ರಿಂದ ಕನ್ನಡದ ಹಿರಿತೆರೆ-ಕಿರುತೆರೆ ಕಲಾವಿದನಾಗುವ ಜತೆಗೆ ನೂರಾರು ಹಾಸ್ಯಗೋಷ್ಠಿಗಳಲ್ಲಿ ಕಾರ್ಯಕ್ರಮ ನೀಡುತ್ತಾ ಬರುತ್ತಿದ್ದಾರೆ.
ಕೆಂಪಿಸಿದ್ದನಹುಂಡಿ ಮಹದೇವು
ಜಾನಪದ ಕ್ಷೇತ್ರದಲ್ಲಿ ಸಾಧನೆಗೈದಿರುವ ನಂಜನಗೂಡು ತಾಲೂಕಿನ ಕೆಂಪಿಸಿದ್ದನಹುಂಡಿ ಮಹದೇವು ಅವರು 2023ರ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. 74 ವರ್ಷದ ಇವರು 50 ವರ್ಷಗಳ ಕಾಲ ಬೀಸು ಕಂಸಾಳೆ ಕಲೆಯನ್ನೇ ಉಸಿರಾಗಿಸಿಕೊಂಡಿದ್ದಾರೆ. ಶ್ರೀ ಮಲೆ ಮಹದೇಶ್ವರಸ್ವಾಮಿ ಬೀಸು ಕಂಸಾಳೆ ಸಂಘ ಕಟ್ಟಿಕೊಂಡ ಅವರು, ಮೈಸೂರು ದಸರಾ, ದಿಲ್ಲಿ ಸೇರಿದಂತೆ ದೇಶದ ವಿವಿಧ ಭಾಗ ಹಾಗೂ ರಾಜ್ಯದ ಹಲವೆಡೆ ಕಾರ್ಯಕ್ರಮ ನೀಡಿದ್ದಾರೆ.
ಜವರಪ್ಪ
ಕಳೆದ 56 ವರ್ಷದಿಂದ ಪತ್ರಿಕಾ ವಿತಕರರಾಗಿ ಕಾರ್ಯ ನಿರ್ವಹಿಸುತ್ತಿರುವ ಮೈಸೂರಿನ ಜವರಪ್ಪ ಅವರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ. ರಾಜ್ಯದ ಇತಿಹಾಸದಲ್ಲೇ ಇದು ಮೊದಲು ಎಂಬುದೇ ವಿಶೇಷ. ಜವರಪ್ಪ ಅವರು ನಗರದ ಕೆ.ಆರ್.ಮೊಹಲ್ಲಾದ ಚಾಮುಂಡಿಪುರಂನ ನಿವಾಸಿಯಾಗಿದ್ದಾರೆ. 71 ವರ್ಷದ ಇವರು ತಮ್ಮ 15ನೇ ವಯಸ್ಸಿನಲ್ಲಿಯೇ ಪತ್ರಿಕಾ ವಿತರಕರಾಗಿ ಕೆಲಸ ಆರಂಭಿಸಿದರು. ಪತ್ರಿಕೆ ಹಂಚಿಕೆಯ ವೃತ್ತಿಯಿಂದಲ್ಲೇ ಇಂದಿಗೂ ಜೀವನ ನಡೆಸುತ್ತಿದ್ದು, ಮನೆ ಮನೆಗೂ ಸೈಕಲ್‌ನಲ್ಲಿಯೇ ತೆರಳಿ ಪತ್ರಿಕೆ ವಿತರಣೆ ಮಾಡುತ್ತಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆ ಬಲ್ಲವರಾಗಿರುವ ಇರುವ ಕಥೆ ಮತ್ತು ಪುಸ್ತಕ ಓದುವುದನ್ನು ಹವ್ಯಾಸ ಇಟ್ಟುಕೊಂಡಿದ್ದಾರೆ.
-
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ












Click it and Unblock the Notifications