ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರಿ ವಾಹನದಲ್ಲಿ ಹಣ ಸಾಗಾಟ, ಇಂಜಿನಿಯರ್ ಬಂಧನ

|
Google Oneindia Kannada News

ಧಾರವಾಡ, ಮೇ 7 : ಸರ್ಕಾರಿ ವಾಹನದಲ್ಲಿ ಅಕ್ರಮವಾಗಿ ಹಣ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 36 ಲಕ್ಷ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಚಿತ್ರದುರ್ಗದ ಲೋಕಾಯುಕ್ತ ಪೊಲೀಸರು ಹಿರಿಯೂರು ತಾಲೂಕಿನ ಐಮಂಗಲದ ಚೆಕ್‌ಪೋಸ್ಟ್‌ ಬಳಿ ಗುರುವಾರ ಬೆಳಗ್ಗೆ ಇಂಜಿನಿಯರ್ ಚಂದ್ರಶೇಖರ ಹಳಿಯಾರ್ ಅವರನ್ನು ಬಂಧಿಸಿದ್ದಾರೆ. ಸರ್ಕಾರಿ ವಾಹನದಲ್ಲಿ ಅಕ್ರಮವಾಗಿ ಹಣ ಸಾಗಣೆ ಮಾಡುತ್ತಿದ್ದ ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿ ಬಂಧಿಸಲಾಗಿದೆ. [ಇಬ್ಬರು ಮಾಜಿ ಸಿಎಂಗಳ ವಿರುದ್ಧ ಎಫ್ ಐಆರ್]

Money

ಚಂದ್ರಶೇಖರ ಹಳಿಯಾರ್ ಧಾರವಾಡದ ಲೋಕೋಪಯೋಗಿ ಇಲಾಖೆಯಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ವಾಹನದಲ್ಲಿ 36 ಲಕ್ಷ ರೂ. ಹಣ ಪತ್ತೆಯಾಗಿದೆ. ಇಂಜಿನಿಯರ್ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. [ರೇಣುಕಾಚಾರ್ಯ ವಿರುದ್ಧ ಲೋಕಾ ತನಿಖೆ]

ಚಂದ್ರಶೇಖರ ಅವರು ಪ್ರಯಾಣ ಮಾಡುತ್ತಿದ್ದ ವಾಹನದಲ್ಲಿ ಸೂಟ್‌ ಕೇಸ್ ಮತ್ತು ಬಾಕ್ಸ್‌ನಲ್ಲಿ ಹಣ ಪತ್ತೆಯಾಗಿದೆ. ಸೂಟ್‌ಕೇಸ್‌ನಲ್ಲಿ 12 ಸಾವಿರ ಹಣ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಹಣಕ್ಕೆ ದಾಖಲೆ ಇಲ್ಲದ ಕಾರಣ ಅವರನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ.

English summary
Chirtadurga Lokayukta police on Thursday morning arrested Public work department engineer for illegally carrying money and sized 36 lakh Rs. Chandrashekar working in PWD department Dharwad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X