ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪ್ಪು ಸಮಾಧಿ ನೋಡಲು 500 ಕಿ.ಮೀ ಪಾದಯಾತ್ರೆ ಆರಂಭಿಸಿದ ಧಾರವಾಡದ ಮಹಿಳಾ ಅಭಿಮಾನಿ

By ಧಾರವಾಡ ಪ್ರತಿನಿಧಿ
|
Google Oneindia Kannada News

ಧಾರವಾಡ: ಕನ್ನಡ ಚಿತ್ರರಂಗದ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಗಲಿ ಇದೇ ಅಕ್ಟೋಬರ್ 29 ಒಂದು ವರ್ಷವಾಗಲಿದೆ. ಆದರೆ ಅಪ್ಪು ಅಗಲಿಕೆಯ ನೋವು ಅಭಿಮಾನಿಗಳನ್ನು ಸದಾ ಕಾಡುತ್ತಿದೆ. ಪ್ರತಿನಿತ್ಯ ನೂರಾರು ಅಭಿಮಾನಿಗಳು ಅಪ್ಪು ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ.

ಇದೀಗ ಧಾರವಾಡದ ಮಹಿಳೆಯೋರ್ವರು ವಿಭಿನ್ನವಾಗಿ ಅಪ್ಪುಗೆ ತಮ್ಮ ಅಭಿಮಾನ ತೋರುತ್ತಿದ್ದಾರೆ. ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ದಾಕ್ಷಾಯಣಿ ಪಾಟೀಲ್ 500 ಕಿಲೋಮೀಟರ್ ವರೆಗೆ ಪಾದಯಾತ್ರೆ ಕೈಗೊಳ್ಳುವ ಮೂಲಕ ಅಭಿಮಾನ ಮೆರೆಯಲು ಸಜ್ಜಾಗಿದ್ದಾರೆ.

ದೀಪಾವಳಿ ವಿಶೇಷ ಅಭಿಯಾನ: ಸಣ್ಣ ವ್ಯಾಪಾರಿಗಳಿಗಾಗಿ ವೋಕಲ್ ಫಾರ್ ಲೋಕಲ್ದೀಪಾವಳಿ ವಿಶೇಷ ಅಭಿಯಾನ: ಸಣ್ಣ ವ್ಯಾಪಾರಿಗಳಿಗಾಗಿ ವೋಕಲ್ ಫಾರ್ ಲೋಕಲ್

ಕಳೆದ ವರ್ಷ ಅಕ್ಟೋಬರ್‌ 29ರಂದು ನಿಧನರಾದ ಚಂದನವನದ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ನೆನಪು ಅಭಿಮಾನಿಗಳಲ್ಲಿ ಸದಾ ಹಸಿರು. ಪುನೀತ್ ಸಾವಿನ ನೋವಿನಿಂದ ಇಡೀ ಕರ್ನಾಟಕದ ಜನತೆ ಇನ್ನೂ ಹೊರಬಂದಿಲ್ಲ.

ಅಪ್ಪು ಸಮಾಧಿಗೆ ಪಾದಯಾತ್ರೆ ಆರಂಭಿಸಿದ ಮಹಿಳಾ ಅಭಿಮಾನಿ

ಅಪ್ಪು ಸಮಾಧಿಗೆ ಪಾದಯಾತ್ರೆ ಆರಂಭಿಸಿದ ಮಹಿಳಾ ಅಭಿಮಾನಿ

ಅಪ್ಪು ಅವರ ಹೆಸರಿನಲ್ಲಿ ಹಲವು ಸಮಾಜ ಸೇವಾ ಕಾರ್ಯಗಳು ಮುಂದುವರೆದಿವೆ. ರಕ್ತದಾನ, ನೇತ್ರದಾ, ಅಂಗಾಂಗ ದಾನ ಹೀಗೆ ಅಪ್ಪು ಹೆಸರಿನಲ್ಲಿ ಅನೇಕ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ. ಅಪ್ಪು ಅಭಿಮಾನಿ ಧಾರವಾಡದ ಮನಗುಂಡಿಯ ದಾಕ್ಷಾಯಣಿ ಪಾಟೀಲ್ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ಭೇಟಿ ನೀಡಲು ಮತ್ತೆ ಪಾದಯಾತ್ರೆ ಆರಂಭಿಸಲಿದ್ದಾರೆ. ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದಿಂದ ಬೆಂಗಳೂರಿನ ಕಂಠೀರವ ಸ್ಟುಡಿಯೋದವರೆಗೆ ಪಾದಯಾತ್ರೆ ನಡೆಸಲು ದಾಕ್ಷಾಯಣಿ ಪಾಟೀಲ್ ನಿರ್ಧರಿಸಿದ್ದಾರೆ.

ನಾಟಿ ವೈದ್ಯ: 100 ರೂ.ಗೆ ಮೂಳೆ ಮುರಿತಕ್ಕೆ ಚಿಕಿತ್ಸೆ ನೀಡುವ ಸವಣೂರು ಕುಟುಂಬನಾಟಿ ವೈದ್ಯ: 100 ರೂ.ಗೆ ಮೂಳೆ ಮುರಿತಕ್ಕೆ ಚಿಕಿತ್ಸೆ ನೀಡುವ ಸವಣೂರು ಕುಟುಂಬ

ಅಪ್ಪು ಅಪ್ಪಟ ಅಭಿಮಾನಿ ದಾಕ್ಷಾಯಣಿ ಕುಟುಂಬ

ಅಪ್ಪು ಅಪ್ಪಟ ಅಭಿಮಾನಿ ದಾಕ್ಷಾಯಣಿ ಕುಟುಂಬ

ಕಳೆದ ಒಂದು ವರ್ಷದ ಹಿಂದೆಯೂ ಪುನೀತ್ ಮೃತರಾದಾಗ ಸಮಯದಲ್ಲಿ ದಾಕ್ಷಾಯಣಿ, ಅಪ್ಪು ಸಮಾಧಿವರೆಗೆ ಪಾದಯಾತ್ರೆ ಮೂಲಕ ಅವರು ತೆರಳಿದ್ದರು. ಮೂಲತಃ ಅಥ್ಲೆಟಿಕ್ ಆಗಿರುವ ದಾಕ್ಷಾಯಣಿ, ಪುನೀತ್ ರಾಜ್‌ಕುಮಾರ್ ಅಪ್ಪಟ ಅಭಿಮಾನಿಯಾಗಿದ್ದಾರೆ. ಅವರ ಕುಟುಂಬಸ್ಥರು ಕೂಡ ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿಗಳಾಗಿದ್ದಾರೆ. ದಾಕ್ಷಾಯಣಿ, ಅಪ್ಪು ಅವರನ್ನು ಕಣ್ಣಾರೆ ನೋಡುವ ಬಯಕೆ ಹೊಂದಿದ್ದರು. ಆದರೆ ಅಪ್ಪು ಅಕಾಲಿಕ ಮರಣದಿಂದ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಸಮಾಧಿ ಇರುವ ಜಾಗಕ್ಕೆ ಧಾರವಾಡದ ಮನಗುಂಡಿಯಿಂದ ಪಾದಯಾತ್ರೆ ಕೈಗೊಂಡಿದ್ದರು. ಮನಗುಂಡಿಯಿಂದ ಬೆಂಗಳೂರಿಗೆ 500 ಕಿಲೋಮೀಟರ್ ನಡೆಯುವ ಮೂಲಕ ದಾಕ್ಷಾಯಣಿ ಸಮಾಧಿ ತಲುಪಿದ್ದರು.

ದಾಕ್ಷಾಯಣಿ ಅಭಿಮಾನಕ್ಕೆ ಪತಿಯ ಬೆಂಬಲ

ದಾಕ್ಷಾಯಣಿ ಅಭಿಮಾನಕ್ಕೆ ಪತಿಯ ಬೆಂಬಲ

'ಅಭಿ' ಸಿನಿಮಾ ನೋಡಿದ ಬಳಿಕ ಅಪ್ಪು ಮೇಲೆ ಅಭಿಮಾನ ಬೆಳೆಸಿಕೊಂಡಿದ್ದ ದಾಕ್ಷಾಯಣಿ, ಪಾದಯಾತ್ರೆಯಲ್ಲಿ ಬಂದು ನೇತ್ರದಾನಕ್ಕೆ ಸಹ ಹೆಸರು ನೊಂದಾಯಿಸಿದ್ದಾರೆ. ದಾಕ್ಷಾಯಣಿ ಅವರ ಈ ಅಭಿಮಾನಕ್ಕೆ ಪತಿ ಹಾಗೂ ಮಕ್ಕಳಿಂದಲೂ ಸಹಕಾರ ಸಿಗುತ್ತಿದೆ. 30 ವರ್ಷ ವಯಸ್ಸಿನ ದಾಕ್ಷಾಯಣಿ ಪಾಟೀಲ್ ಉತ್ತಮ ಓಟಗಾರ್ತಿ. ಪತಿ ಉಮೇಶ್ ಅವರ ಸಹಕಾರ ಹಾಗೂ ಕುಟುಂಬಸ್ಥರ ಬೆಂಬಲೊಂದಿಗೆ ದಿನಕ್ಕೆ 40 ಕಿಮೀ ಪ್ರಯಾಣಿಸುವ ಗುರಿಹೊತ್ತ ದಾಕ್ಷಾಯಿಣಿ ಕಳೆದ ವರ್ಷ ಬೆಂಗಳೂರಿಗೆ ಹೋಗಿದ್ದರು. ಅಪ್ಪುವಿಗೆ ಪ್ರೀತಿಯ ನಮನ ಸಲ್ಲಿಸಿದ ಬಳಿಕ ಪುನೀತ್ ಅವರ ಮನೆಯವರನ್ನು ಭೇಟಿಯಾಗಿದ್ದರು.

ಮನಗುಂಡಿಯಿಂದ-ಕಂಠೀರವ ಸ್ಟುಡಿಯೋವರೆಗೆ ಪಾದಯಾತ್ರೆ

ಮನಗುಂಡಿಯಿಂದ-ಕಂಠೀರವ ಸ್ಟುಡಿಯೋವರೆಗೆ ಪಾದಯಾತ್ರೆ

'ಅಪ್ಪು' ಮಹಿಳಾ ಅಭಿಮಾನಿ ದಾಕ್ಷಾಯಣಿ ಪಾಟೀಲ್ ತಮ್ಮ ನೆಚ್ಚಿನ ನಟನಿಗೆ ವಿಭಿನ್ನವಾಗಿ ಶ್ರದ್ಧಾಂಜಲಿ ಅರ್ಪಿಸಲು ಮತ್ತೆ ಈಗ ಸಜ್ಜಾಗಿದ್ದಾರೆ. ಪುನೀತ್​​​ಗಾಗಿ ಬರೋಬ್ಬರಿ 500 ಕಿಲೋ ಮೀಟರ್​​ ಪಾದಯಾತ್ರೆ ಹಮ್ಮಿಗೊಂಡಿದ್ದಾರೆ. ಧಾರವಾಡದ ಮನಗುಂಡಿಯಿಂದ ಕಂಠೀರವ ಸ್ಟುಡಿಯೋದ ಪುನೀತ್​​​ ಸಮಾಧಿವರೆಗೂ ಪಾದಯಾತ್ರೆ ದಾಕ್ಷಾಯಣಿ ನಡೆಸಲಿದ್ದಾರೆ.

ಅಪ್ಪು' ಅಗಲಿಕೆಯಿಂದ ಇಡೀ ಕರ್ನಾಟಕವೇ ಮಂಕಾದಂತಿದೆ. ಅಪ್ಪು ಅಗಲಿ ಒಂದು ವರ್ಷಗಳು ಕಳೆದರು ಆ ಕಹಿ ದಿನವನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಪುನೀತ್ ಕರುನಾಡಿಗರ ಮನಸ್ಸಿನಲ್ಲಿ ಶಾಶ್ವತವವಾಗಿ ಉಳಿದುಬಿಟ್ಟಿದ್ದಾರೆ. ಕೆಲ ಅಭಿಮಾನಿಗಳು ದೂರದ ಊರಿನಿಂದ ಎತ್ತಿನ ಬಂಡಿ ಹತ್ತಿ ಅಪ್ಪು ಸಮಾಧಿ ಬಳಿ ಬಂದಿದ್ದರು. ಇನ್ನು ಕೆಲ ಅಭಿಮಾನಿಗಳು ನೂರಾರು ಕಿಲೋ ಮೀಟರ್ ದೂರದಿಂದ ಬೈಕ್‌ನಲ್ಲಿ ಅಪ್ಪು ಸಮಾಧಿ ದರ್ಶನಕ್ಕೆ ಧಾವಿಸಿದ್ದರು. ಇದೀಗ ಧಾರವಾಡದ ಮಹಿಳಾ ಅಭಿಮಾನಿ 500ಕಿಲೋ ಮೀಟರ್ ದೂರದಿಂದ ಅಪ್ಪು ಸಮಾಧಿಗೆ ನಡೆದುಕೊಂಡು ಬರುತ್ತಿದ್ದಾರೆ.

English summary
Puneeth Rajkumar A female fan starts padayatra from dharwad to bangalore Appu Samadhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X