ಆತ್ಮಹತ್ಯೆ ಮಾಡಿಕೊಂಡ ದ್ವೀತಿಯ ಪಿಯುಸಿ ವಿದ್ಯಾರ್ಥಿ

ಧಾರವಾಡ, ಮಾರ್ಚ್ 7: ದ್ವಿತೀಯ ಪಿಯುಸಿ ಪರೀಕ್ಷೆ ಚೆನ್ನಾಗಿ ಬರೆದಿಲ್ಲ ಎಂದು ಮನನೊಂದ ವಿದ್ಯಾರ್ಥಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿದೆ.

ಧಾರವಾಡದ ಧಾನೇಶ್ವರ ನಗರದಲ್ಲಿ ಶುಕ್ರವಾರ ಸಂಜೆ ಈ ಘಟನೆ ಸಂಭವಿಸಿದ್ದು, ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಾಗರ ಗಾಣಿಗ ( 17 ) ಸಾವಿಗೆ ಶರಣಾದ ರ್ದುದೈವಿ.

ಬೆಳಗಾವಿ ತಾಲೂಕಿನ ಕೆ . ಕೆ . ಕೊಪ್ಪ ಗ್ರಾಮದ ಸಾಗರ ನಗರದ ಖಾಸಗಿ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ. ಸಾಗರ , ಬುಧವಾರ ಬರೆದ ಪರೀಕ್ಷೆಯಲ್ಲಿ 15 ಅಂಕಗಳಿಗೆ ಉತ್ತರಿಸಲು ಆಗಿಲ್ಲ ಎಂದು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ.

PUC Student Committed Suicide In Dharwad

ಇದರಿಂದಾಗಿ ಮನಸ್ಸಿಗೆ ಆಘಾತ ಮಾಡಿಕೊಂಡು ದಾನೇಶ್ವರಿ ನಗರದಲ್ಲಿ ಓದಲು ಮಾಡಿದ್ದ ರೂಮ್‌ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+