ಧಾರವಾಡ: ವೈದ್ಯರ ಮುಷ್ಕರ, ನವಜಾತ ಶಿಶುವಿಗೆ ಚಿಕಿತ್ಸೆ ನಿರಾಕರಣೆ
ಧಾರವಾಡ, ಜನವರಿ 02: ರಾಷ್ಟ್ರೀಯ ವೈದ್ಯಕೀಯ ಆಯೋಗ ರಚನೆ ವಿರೋಧಿಸಿ ವೈದ್ಯರು ಹೂಡಿರುವ ಮುಷ್ಕರದಿಂದ ರೋಗಿಗಳು ಪರದಾಡುವಂತಾಗಿದೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗವನ್ನು ಬಂದ್ ಮಾಡಲಾಗಿದ್ದು, ತುರ್ತು ಚಿಕಿತ್ಸೆ ಅವಶ್ಯಕವಾದ ರೋಗಿಗಿಳು ಇದರಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ಧಾರವಾಡದಲ್ಲಿ ಇಂತಹದ್ದೊಂದು ಘಟನೆ ವರದಿ ಆಗಿದ್ದು, ವೈದ್ಯರ ಮುಷ್ಕರದಿಂದಾಗಿ ನವಜಾತ ಶಿಶುವೊಂದು ಚಿಕಿತ್ಸೆ ದೊರೆಯದೆ ತೊಂದರೆಗೊಳಗಾದ ಘಟನೆ ನಡೆದಿದೆ.
20 ದಿನಗಳ ಹಿಂದೆಯಷ್ಟೇ ಇದೆ ಖಾಸಗಿ ಆಸ್ಪತ್ರೆಯಲ್ಲಿ ಜನನವಾಗಿದ್ದ ಗಂಡು ಮಗುವಿಗೆ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಧಾರವಾಡದ ರಾಮನಗೌಡರ ಆಸ್ಪತ್ರೆಗೆ ಕರೆತರಲಾಗಿದೆ ಆದರೆ ಓಪಿಡಿ ಬಂದ್ ಆಗಿರುವ ಕಾರಣ ಶಿಶುವಿಗೆ ಚಿಕಿತ್ಸೆ ನಿರಾಕರಿಸಲಾಗಿದೆ.
ಬೇರೆ ದಾರಿ ಕಾಣದೆ ಮಗುವಿನ ಪೋಷಕರು ಖಾಸಗಿ ವಾಹನ ಮಾಡಿಕೊಂಡು ಸರ್ಕಾರಿ ಆಸ್ಪತ್ರೆಯನ್ನು ಅರಸಿ ಹೊರಟಿದ್ದಾರೆ, ಮಗುವಿನ ಪ್ರಸ್ತುತ ಸ್ಥಿತಿ ತಿಳಿದುಬಂದಿಲ್ಲ.












Click it and Unblock the Notifications