ಖಾಸಗಿ ಬಸ್‌ಗಳಿಂದ ಅವಳಿ ನಗರದ ಜನತೆಗೆ ಉಪದ್ರವ
ಹುಬ್ಬಳ್ಳಿ, ಫೆಬ್ರವರಿ 2 : ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ಖಾಸಗಿ ಬಸ್ಸುಗಳು ಸಾಕಷ್ಟು ತೊಂದರೆ ಮಾಡುತ್ತಿದ್ದು, ಇವುಗಳ ಪರ್ಮಿಟ್ ರದ್ದುಪಡಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವತಂತ್ರ ಬಣದ ರಾಜ್ಯಾಧ್ಯಕ್ಷ ನಾಗರಾಜ ಕರೆಣ್ಣವರ ಆರೋಪಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಮಧ್ಯೆ ಹಲವಾರು ವರ್ಷಗಳಿಂದ ಖಾಸಗಿ ಬಸ್ಸುಗಳು ಸಂಚರಿಸುತ್ತಿವೆ. ಈ ಖಾಸಗಿ ಬಸ್ಸುಗಳು ರಸ್ತೆ ಮಧ್ಯದಲ್ಲಿ ಯಾರೇ ಕೈ ಮಾಡಿದರೂ ಹಿಂದೆ ಮುಂದೆ ನೋಡದೇ ತಕ್ಷಣವೇ ನಿಲ್ಲಿಸುತ್ತವೆ. ಇದರಿಂದ ಅಕ್ಕಪಕ್ಕದ ಹಲವಾರು ವಾಹನ ಸವಾರರು ಅಪಘಾತಕ್ಕೀಡಾಗಿದ್ದಾರೆ ಎಂದು ಅವರು ಮಂಗಳವಾರ ದೂರಿದರು. [ಧಾರವಾಡ: ಟಾಟಾ ಮಾರ್ಕೋಪೋಲೋ ಕಂಪನಿ ಲಾಕ್ ಔಟ್?]

ಇನ್ನು ಧಾರವಾಡ ನಗರದಲ್ಲಿನ ಸಿಬಿಟಿ ಹತ್ತಿರ ರಸ್ತೆಯಲ್ಲಿಯೇ ಖಾಸಗಿ ಬಸ್ಸುಗಳನ್ನು ನಿಲುಗಡೆ ಮಾಡಲಾಗುತ್ತದೆ. ಇದರಿಂದ ಭಾರಿ ಪ್ರಮಾಣದಲ್ಲಿ ಇಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತದೆ ಎಂದು ದೂರಿರುವ ನಾಗರಾಜ, ಈ ಬಗ್ಗೆ ಹಲವಾರು ಸಂಘಟನೆಗಳು, ರಾಜಕೀಯ ಪಕ್ಷಗಳು, ವಿದ್ಯಾರ್ಥಿಗಳು, ನಾಗರಿಕರು ಸಾರಿಗೆ ಮತ್ತು ಪೊಲೀಸ್ ಇಲಾಖೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದರು.
ಎಷ್ಟೇ ದೂರುಗಳು ನೀಡಿದರೂ ಈ ಬಗ್ಗೆ ಜಿಲ್ಲಾಡಳಿತ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಈ ಬಸ್ಸುಗಳಿಗೆ ಅಕ್ರಮವಾಗಿ ಪರ್ಮಿಟ್ ನೀಡಿದ್ದಾರೆ ಎಂದು ಆರೋಪಿಸಿರುವ ನಾಗರಾಜ, ಕೂಡಲೇ ಈ ಬಸ್ಸುಗಳ ಸಂಚಾರಕ್ಕೆ ತಡೆ ಹಾಕಿ ನಾಗರಿಕರ ಪ್ರಾಣ ರಕ್ಷಣೆ ಮಾಡಬೇಕೆಂದು ಆಗ್ರಹಿಸಿದರು. [ಹುಬ್ಬಳ್ಳಿಯಲ್ಲಿ ದೇಶಪಾಂಡೆ ಫೌಂಡೇಶನ್ ನಿಂದ ಅಭಿವೃದ್ಧಿ ಮಂತ್ರ]












Click it and Unblock the Notifications