ವಿವೇಕ ಕೊಠಡಿ ನಿರ್ಮಾಣಕ್ಕೆ ವಿರೋಧ ಮಾಡುವವರು ಮೂರ್ಖರು: ಪ್ರಮೋದ್ ಮುತಾಲಿಕ್‌

ಧಾರವಾಡ, ನವೆಂಬರ್‌14 : ಸರ್ಕಾರದಿಂದ ವಿವೇಕ ಕೊಠಡಿ ಘೋಷಣೆಯನ್ನು ಮುಕ್ತ ಕಂಠದಿಂದ ಸ್ವಾಗತಿಸಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಇದೊಂದು ಒಳ್ಳೆಯ ನಿರ್ಧಾರ ಎಂದು ಹೇಳಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು ಸರ್ಕಾರದ ಈ ನಿರ್ಧಾರ ಸ್ವಾಗತಾರ್ಹ ಮತ್ತು ಇದು ಎಲ್ಲರೂ ಒಪ್ಪುವ ವಿಚಾರವಾಗಿದೆ. ಸರ್ಕಾರಿ ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಹಚ್ಚುವ ಹಿನ್ನೆಲೆಯಲ್ಲಿ ನಾನು ಇದರ ಬಗ್ಗೆ ಸಂತಸಪಟ್ಟಿದ್ದೇನೆ. ಸರ್ಕಾರದ ಈ ನಿರ್ಧಾರ ಸ್ವಾಗತಾರ್ಹವಾಗಿದೆ ಎಂದು ಹೇಳಿದರು.

ವಿವೇಕ ಕೊಠಡಿ ಮೂಲಕ ಇಡೀ ಆವರಣವನ್ನೇ ಕೇಸರಿಮಯ ಆಗಲಿದ್ದು ಇಂದೊಂದು ಉತ್ತಮ ವಿಷಯ, ಇಂತಹ ಇನ್ನಷ್ಟು ಹೆಚ್ಚು ಹೆಚ್ಚು ಇಂತಹ ಕೆಲಸವಾಗಬೇಕು.ಕೇಸರಿ ಬಣ್ಣ ಇದು ಹಿಂದೂ ಸಂಘಟನೆಯದ್ದಲ್ಲ, ಭಾರತೀಯ ಜನತಾ ಪಕ್ಷದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ‌ ಸಂಘಟನೆಗಳದ್ದಲ್ಲ. ಇದು ಪುರಾತನ ಕಾಲದಿಂದಲೂ ಬಂದಿರುವ ಕೇಸರಿ ಬಣ್ಣ ಇದು. ಇದಕ್ಕೆ ತನ್ನದೇ ಆದ ಇತಿಹಾಸ ಮತ್ತು ಪರಂಪರೆ‌ ಇದೆ ಎಂದರು.

Pramod Muthalik Reaction About Viveka School Rooms

ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯ ಬೇಡ ನಾವು ಒಳ್ಳೆಯ ಕೆಲಸವನ್ನು ಸ್ವಾಗತಿಸಬೇಕು. ಇವತ್ತು ನಮ್ಮ ದೇವಾಲಯಗಳ ಮೇಲೆ ಹಾರಡುವುದು ಕೇಸರಿ ಭಗವಾಧ್ವಜ. ಇಂದು ಕರ್ನಾಟಕ ಸೇರಿದಂತೆ ನಾಡಿನಾದ್ಯಂತ ಎಲ್ಲ ಮಠಗಳ ಮಠಾಧಿಪತಿಗಳು ಧರಿಸುವುದು ಕೇಸರಿ ಬಣ್ಣನೇ. ಕೇಸರಿ ಬಣ್ಣ ಎನ್ನುವುದು ತ್ಯಾಗದ ಪ್ರತೀಕವಾಗಿದೆ.‌‌ ಆದ್ದರಿಂದ‌ ಯಾರು ಇದರ ಬಗ್ಗೆ ಅಪಸ್ಬರ ಬೇಡ ಎಂದಿರುವ ಪ್ರಮೋದ್ ಮುತಾಲಿಕ್ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಕೇವಲ ವಿವೇಕ ಕೊಠಡಿ ನಿರ್ಮಾಣ ಅಷ್ಟೇ ಬಗ್ಗೆ ಮಾತನಾಡುವುದು ಅಲ್ಲ ಈ ಕೇಸರಿ ಕುರಿತು ಜಾಗೃತಿ ಅಗತ್ಯವಾಗಿದೆ. ಇದನ್ನು ವಿರೋಧ ಮಾಡುವರು ಮೂರ್ಖರು. ಕಾಂಗ್ರೆಸ್ ಹಾಗೂ ಬುದ್ದಿಜೀವಿಗಳು ಸೇರಿದಂತೆ ಯಾರ್ಯಾರು ವಿರೋಧ ಮಾಡುತ್ತಾರೆ. ಅವರೆಲ್ಲ ಮೂರ್ಖರೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ವಿರೋಧ ಮಾಡುತ್ತೇನೆ ಅಂತಾ ಎಲ್ಲವನ್ನು ವಿರೋಧ ಮಾಡಬಾರದು ಅದು ಸರಿಯಾದ ಕ್ರಮವಲ್ಲ. ಒಂದೊಳ್ಳೆ ಕೆಲಸಕ್ಕೆ ಬೆಂಬಲ ಕೊಡುವ ಮಾನಸಿಕತೆ ಬೆಳೆಸಿಕೊಳ್ಳಬೇಕು ಮೊದಲು ಎಲ್ಲರೂ ಬೆಳಸಿಕೊಳ್ಳಬೇಕು ‌ಈ ಒಂದು ಕಾರ್ಯ ಮಾಡಿರುವ ಶಿಕ್ಷಣ ಇಲಾಖೆಗೆ ಹಾಗೂ ಸರ್ಕಾರಕ್ಕೆ ಧನ್ಯವಾದ ಹೇಳ್ತೀನಿ, ಸ್ವಾಗತ ಮಾಡುತ್ತೇನೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+