ಹು-ಧಾ ಮಹಾನಗರ ಪಾಲಿಕೆ ಸ್ಥಾಯಿ ಸಮಿತಿಗೆ ಅಧ್ಯಕ್ಷರ ಆಯ್ಕೆ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ,ಜುಲೈ, 14: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಿವಿಧ ಸ್ಥಾಯಿ ಸಮಿತಿಗಳಿಗೆ ಗುರುವಾರ ಚುನಾವಣೆ ನಡೆದು ವಿವಿಧ ಹೊಸ ಅಧ್ಯಕ್ಷರ ಆಯ್ಕೆ ಆಗಿದೆ.

ತೆರಿಗೆ ನಿರ್ಧಾರಣೆ, ಹಣಕಾಸು ಅಪೀಲುಗಳ ಸ್ಥಾಯಿ ಸಮಿತಿಗೆ ವೀರಣ್ಣ ಸವಡಿ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ಸತೀಶ ಸುರೇಂದ್ರ ಹಾನಗಲ್, ನಗರ ಯೋಜನೆ ಮತ್ತು ಅಭಿವೃದ್ದಿ ಸ್ಥಾಯಿ ಸಮಿತಿಗೆ ಬಸಪ್ಪ ಹನುಮಂತಪ್ಪ ಮುತ್ತಳ್ಳಿ, ಲೆಕ್ಕಗಳ ಸ್ಥಾಯಿ ಸಮಿತಿಗೆ ಲಕ್ಷ್ಮಣ ಮಲ್ಲೇಶಪ್ಪ ಗಂಡಗಾಳೇಕರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಒಟ್ಟು ನಾಲ್ಕು ಸಮಿತಿಗಳಿಗೆ ಧಾರವಾಡದಿಂದ ಕೇವಲ ಒಬ್ಬರು ಆಯ್ಕೆಯಾಗಿದ್ದರೆ, ಹುಬ್ಬಳ್ಳಿಯಿಂದ ಮೂರು ಜನರು ಆಯ್ಕೆಗೊಂಡಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಒಟ್ಟು 28 ಸದಸ್ಯರ ಪೈಕಿ 7 ಧಾರವಾಡಕ್ಕೆ ದಕ್ಕಿದ್ದರೆ 21 ಹುಬ್ಬಳ್ಳಿಗರ ಪಾಲಾಗಿದ್ದವು.[ಹುಬ್ಬಳ್ಳಿ: ಕೊಪ್ಪೀಕರ ರಸ್ತೆಯಲ್ಲಿ ಭಾರತ್ ಬ್ಯಾಂಕ್ ಶಾಖೆ ಆರಂಭ]

 New presidents for Hubballi Palike Standing Committee

ಸ್ಥಾಯಿ ಸಮಿತಿ ಸದಸ್ಯರ ವಿವರ:
ತೆರಿಗೆ ನಿರ್ಧಾರಣೆ ಹಣಕಾಸು ಮತ್ತು ಅಪೀಲು: ಶೈಲಾ ವೆಂಕಟರೆಡ್ಡಿ ಕಾಮರೆಡ್ಡಿ, ಫಹಮೀದಾ ಮಹಮ್ಮದ ಹಾಷಮ ಕಿಲ್ಲೇದಾರ, ಬಲರಾಮ್ ನಾರಾಯಣ ಕುಸುಗಲ್, ಲಕ್ಷ್ಮೀಬಾಯಿ ಕಾಶಪ್ಪ ಬಿಜವಾಡ, ಚನ್ನೋಜಿ ಶಾಂತಾ ಬಸವರಾಜ, ಸುವರ್ಣ ಕಲ್ಲಕುಂಟ್ಲಾ.[ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ವೈಫೈ: ಧಾರವಾಡಕ್ಕೂ ಶೀಘ್ರ]

ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ: ತಿರಕಪ್ಪ ಶೇದೆಪ್ಪಾ ಜಮನಾಳ, ರಾಬಿಯಾ ಬೇಗಂ ಅ ಅಮಟೂರ, ಸುಧಾ ದೋರಾಜ್ ಮನಿಕುಂಟ್ಲಾ, ಶಿವಪ್ಪ ಫಕ್ಕೀರಪ್ಪ ಬಡವಣ್ಣವರ, ಸಜ್ಜನರ ಕಮಲಾಕ್ಷಿ ಅಂದಾನಪ್ಪ, ಬೀರಪ್ಪಾ ನಾಗಪ್ಪಾ ಖಂಡೇಕಾರ.

ನಗರ ಯೋಜನೆ ಮತ್ತು ಅಭಿವೃದ್ಧಿ: ಅಂಬೋರೆ ರಾಜು ಶಂಕರರಾವ, ಗಣೇಶ ತಿ. ಟಗರಗುಂಟಿ, ಶಂಕರ ತಿರಕಪ್ಪ ಶೇಳಕೆ, ಬಸೀರಹ್ಮದ ಎಚ್ ಗುಡಮಾಲ್, ಅರಕೇರಿ ಹೊನ್ನವ್ವ ಲಕ್ಷ್ಮಣ, ಮೇನಕಾ ಗದಿಗೆಪ್ಪ ಹುರಳಿ.

ಲೆಕ್ಕ-ಪತ್ರ : ಕರಿಯಪ್ಪ ಕರಬಸಪ್ಪ ಬೀಸಗಲ್, ಡಿ. ಕೆ. ಚವ್ಹಾಣ, ಮಹೇಶ ಬಾಳಪ್ಪ ಬುರ್ಲಿ, ಮಲ್ಲಿಕಾರ್ಜುನ ಅಜ್ಜಪ್ಪ ಹೊರಕೇರಿ, ಅಲ್ತಾಫ್ ನವಾಜ ಮಹಮ್ಮದ ಸಾಹೇಬ ಕಿತ್ತೂರ, ಅಬ್ದುಲವಹಾಬ ಅಬ್ದುಲರಜಾಕ ಮುಲ್ಲಾ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hubballi: Hubballi-Dharwad Mahanagara Palike Standing Committee rescheduled on 14 July 2016. New presidents elected for different Standing Committee.
Please Wait while comments are loading...