ಹುಬ್ಬಳ್ಳಿ ತಾಪಂ ಅಧ್ಯಕ್ಷ ಪಟ್ಟ ಕಾಂಗ್ರೆಸ್ ಪಾಲಿಗೆ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಮೇ. 17: ಹುಬ್ಬಳ್ಳಿ ತಾಲೂಕು ಪಂಚಾಯಿತಿ ಅಧ್ಯಕ್ಷ ಪಟ್ಟ ನಿರೀಕ್ಷೆಯಂತೆ ಕಾಂಗ್ರೆಸ್ ಸದಸ್ಯೆ ಚೆನ್ನಮ್ಮ ಗೊರ್ಲ ಪಾಲಾಗಿದೆ. ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿಯ ಮಹಿಳೆಗೆ ಮೀಸಲಾಗಿತ್ತು. ಹೀಗಾಗಿ ಕಟ್ನೂರ ಕ್ಷೇತ್ರ ಪ್ರತಿನಿಧಿಸುತ್ತಿರುವ ಚೆನ್ನಮ್ಮ ಅವರು ಅವಿರೋಧವಾಗಿ ಮಂಗಳವಾರ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷೆ ಸ್ಥಾನಕ್ಕೆ ಬ್ಯಾಹಟ್ಟಿಯ ಕ್ಷೇತ್ರದ ಪಕ್ಷೇತರ ಸದಸ್ಯೆ ಸರೋಜಾ ಅಳಗವಾಡಿ ಬಿಜೆಪಿ ಬೆಂಬಲದಿಂದ ಗೆದ್ದಿದ್ದಾರೆ. 7 ಸದಸ್ಯರನ್ನು ಹೊಂದಿದ್ದ ಬಿಜೆಪಿ ಕೇವಲ ಒಂದು ಸ್ಥಾನದಿಂದ ಅಧಿಕಾರ ಕಳೆದುಕೊಂಡಿದೆ.[ಹುಬ್ಬಳ್ಳಿಯಲ್ಲಿ ಮನಸೆಳೆದ ಶ್ರೀನಿವಾಸ ಕಲ್ಯಾಣೋತ್ಸವ]


women

ಪಕ್ಷೇತರ ಸದಸ್ಯೆಯ ಬೆಂಬಲ ಪಡೆದುಕೊಂಡು ಅಂತಿಮವಾಗಿ ತಾ.ಪಂ. ಉಪಾಧ್ಯಕ್ಷ ಸ್ಥಾನವನ್ನು ಪಡೆದುಕೊಂಡಿತು. ಈಗಾಗಲೇ ಬ್ಯಾಹಟ್ಟಿ ಕ್ಷೇತ್ರದವರೇ ಆದ ಶಿವಾನಂದ ಕರಿಗಾರ ಬಿಜೆಪಿಗೆ ಬೆಂಬಲ ನೀಡಿ ಪಕ್ಷೇತರ ಸದಸ್ಯರಾಗಿದ್ದರೂ ಕೂಡ ಜಿ.ಪಂ. ಉಪಾಧ್ಯಕ್ಷ ಸ್ಥಾನ ಪಡೆದಿದ್ದಾರೆ.

ಒಟ್ಟು 15 ಸದಸ್ಯ ಬಲವನ್ನು ಹೊಂದಿರುವ ಹುಬ್ಬಳ್ಳಿ ತಾಲೂಕು ಪಂಚಾಯಿತಿಯಲ್ಲಿ ಕಾಂಗ್ರೆಸ್ 5 ಸ್ಥಾನ ಪಡೆದುಕೊಂಡಿದ್ದರೆ, 2 ಸ್ಥಾನದಲ್ಲಿ ಗೆದ್ದಿರುವ ಜೆಡಿಎಸ್ ಉಪಾಧ್ಯಕ್ಷ ಸ್ಥಾನಕ್ಕೆ ಹೊಂಚು ಹಾಕಿತ್ತು. ಆದರೆ ಬಿಜೆಪಿಯು ಪಕ್ಷೇತರ ಸದಸ್ಯೆಗೆ ಬೆಂಬಲ ನೀಡಿ ಉಭಯ ಪಕ್ಷಗಳಿಗೆ ತಿರುಗೇಟು ನೀಡಿದೆ.[ಹುಬ್ಬಳ್ಳಿ : ಚರಂಡಿ ಸೇರುತ್ತಿರುವ ಕುಡಿಯುವ ನೀರು!]

ಧಾರವಾಡ ಜಿ.ಪಂ. ನಲ್ಲಿ ಕಾಂಗ್ರೆಸ್ ಅಧಿಕಾರ ವಂಚಿತಗೊಂಡಿದೆ. ತಾ.ಪಂ. ನಲ್ಲಿ ಮಾತ್ರ ತನ್ನ ವಿಜಯ ಪತಾಕೆ ಹಾರಿಸಿ ಸಮಾಧಾನಪಟ್ಟುಕೊಂಡಿದೆ.

-
-
-


ಬಿಜೆಪಿ ಜಿಲ್ಲಾಧ್ಯಕ್ಷ ಪಾಟೀಲ, ಮಾಜಿ ಶಾಸಕರಾದ ಚಿಕ್ಕನಗೌಡರ, ಶಂಕರ ಪಾಟೀಲ ಮತ್ತಿತರ ಪಕ್ಷದ ಪದಾಧಿಕಾರಿಗಳು ಅಳಗವಾಡಿಯವರ ಆಯ್ಕೆಗೆ ಸಮ್ಮತಿ ಸೂಚಿಸಿದರು.

ಹುಬ್ಬಳ್ಳಿ ತಹಸೀಲ್ದಾರ್ ಎಚ್.ಡಿ.ನಾಗಾವಿ ನಾಮಪತ್ರ ಸ್ವೀಕರಿಸಿದರು. ಉಪವಿಭಾಗಾಧಿಕಾರಿ ಚಂದ್ರಶೇಖರ ನಾಯ್ಕ ಚುನಾವಣಾಧಿಕಾರಿಯಾಗಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hubballi: Chennamma Gorla of the Congress Party and Independent candidate Saroja Agalavadi were elected president and vice-president respectively of the Hubli Taluk Panchayat here on Tuesday, May 17, 2016.
Please Wait while comments are loading...