ಹುಬ್ಬಳ್ಳಿಯಲ್ಲಿ ನರೇಂದ್ರ ಮೋದಿ ಕಪ್ ಕಬಡ್ಡಿ ಪಂದ್ಯಾವಳಿ

Subscribe to Oneindia Kannada

ಹುಬ್ಬಳ್ಳಿ, ಮೇ, 04: ನಗರದ ನೆಹರು ಮೈದಾನದಲ್ಲಿ ಮೇ 14 ಮತ್ತು 15 ರಂದು ಮುಕ್ತ ಕಬಡ್ಡಿ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದು ಸಂಘಟಕ, ಚಲನಚಿತ್ರ ನಟ ಜಶ್ವಂತ್ ಜಾಧವ ತಿಳಿಸಿದ್ದಾರೆ.

ನರೇಂದ್ರ ಮೋದಿ ಕಪ್ ಹೆಸರಿನಲ್ಲಿ ಹೊನಲು ಬೆಳಕಿನ ಟೂರ್ನಿ ನಡೆಸಲಾಗುತ್ತಿದೆ. ಜಶ್ವಂತ್ ತಿಳಿಸಿದ್ದಾರೆ. ನಗರದ ಸೆಟ್ಲಮೆಂಟ್ ಪ್ರದೇಶದ ದಿ.ಲಾಲಪ್ಪ ಈ ಜಾಧವ ಕುಟುಂಬ ಹಾಗೂ ಹುಬ್ಬಳ್ಳಿ ಧಾರವಾಡ ಜಿಲ್ಲಾ ಅಮೆಚ್ಯೂರ ಕಬ್ಬಡ್ಡಿ ಸಂಸ್ಥೆ ಮತ್ತು ಕರ್ನಾಟಕ ರಾಜ್ಯ ಅಮೆಚ್ಯೂರ ಕಬ್ಬಡ್ಡಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಪಂದ್ಯಾವಳಿ ನಡೆಯಲಿದೆ.[ಪ್ರೋ ಕಬಡ್ಡಿ ಬಗ್ಗೆ ನಿಮಗೆಷ್ಟು ಗೊತ್ತು?]

hubballi

65 ಕೆಜಿ ಒಳಗಿನವರು ಪಂದ್ಯಾವಳಿಯಲ್ಲಿ ಭಾಗವಹಿಸಬಹುದಾಗಿದ್ದು, ಪ್ರಥಮ ಬಹುಮಾನ 30 ಸಾವಿರ ರೂ. ದ್ವಿತೀಯ 20 ಸಾವಿರ ರೂ. ತೃತೀಯ 10 ಸಾವಿರ ರೂ. ಹಾಗೂ ನಾಲ್ಕನೇಯ ಬಹುಮಾನ 5 ಸಾವಿರ ರೂ. ನೀಡಲಾಗುವುದು.[ಹುಬ್ಬಳ್ಳಿ: ವಾಟರ್ ಸಪ್ಲೈ ಅಲರ್ಟ್ ಬಂದ್, ತಪ್ಪು ಯಾರದ್ದು?]

ಉತ್ತಮ ರೀಡರ್, ಕ್ಯಾಚರ್, ಉತ್ತಮ ತಂಡಕ್ಕೆ ವಿಶೇಷ ಬಹುಮಾನ ನೀಡಲಾಗುತ್ತಿದ್ದು, ದೇಶಿ ಕ್ರೀಡೆಯ ಈ ಪಂದ್ಯಾವಳಿಗೆ ಸಾರ್ವಜನಿಕರು ಆಗಮಿಸಿ ಪ್ರೋತ್ಸಾಹಿಸಬೇಕೆಂದು ಜಶ್ವಂತ್ ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ಜಶ್ವಂತ್ ಜಾಧವ (9964375916), ಮಂಜುನಾಥ ಜಾಧವ (9916245060), ಅನೀಲ ಹಾರುಗೇರಿ (9845203313), ಚಂದ್ರು ಗುಡಗೇರಿ (7899819173), ನರೇಂದ್ರ ಜಾಧವ (9844522172) ಅವರನ್ನು ಸಂಪರ್ಕಿಸಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hubballi: Narendra Modi Cup Kabaddi tournament will be held on 14 and 15th May, at Hubballi Neharu Stadium. Actor and organizer Jashwanth Jhadhav said in a press meet.
Please Wait while comments are loading...