ಕೆಡಿಪಿ ಸಭೆಯಲ್ಲಿ ಸಮರ್ಪಕ ಮಾಹಿತಿ ನೀಡದ ಅಧಿಕಾರಿಗಳ ಬೆವರಿಳಿಸಿದ ಸಚಿವ ಸಂತೋಷ್ ಲಾಡ್
ಧಾರವಾಡ, ಅಕ್ಟೋಬರ್ 11: ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಅಧಿಕಾರಿಗಳು ಪ್ರಯತ್ನಿಸಿ, ಸರ್ಕಾರದ ಅನುದಾನ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಾರ್ಮಿಕರ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸರ್ಕಾರದ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಅಧಿಕಾರಿಗಳು ಪ್ರಯತ್ನಿಸಲು ವಿಫಲರಾಗಿದ್ದಾರೆ ಅಧಿಕಾರಿಗಳು ಎಂದು ಸಚಿವ ಸಂತೋಷ್ ಲಾಡ್ ಬೇಸರ ವ್ಯಕ್ತಪಡಿಸಿದ್ದಾರೆ.

ಬುಧವಾರ ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸೆಪ್ಟೆಂಬರ್ 2023 ಅತ್ಯಂಕ್ಕೆ ಕೊನೆಗೊಂಡ 2ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸರಿಯಾಗಿ ಮಾಹಿತಿ ನೀಡದ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗದುಕೊಂಡಿದ್ದಾರೆ.
ತೋಟಗಾರಿಕೆ ಇಲಾಖೆ ಡಿಡಿ ಕಾಶಿ ನಾಥ್ ಭದ್ರ ಅವರನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಶಾಸಕರೇ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗದ ಅಧಿಕಾರಿಗಳಿಗಳ ವಿರುದ್ಧವೂ ಅಸಮಾಧಾನ ಹೊರಹಾಕಿದರು.' ನಾವು ಸಭೆಯ ಎಲ್ಲ ಮಾಹಿತಿಯನ್ನು ಓದಿಕೊಂಡು ಬಂದಿರುತ್ತೇನೆ. ನಿಮಗೆ ಜಲ್ಲೆಯ ಕಾಮಗಾರಿಗಳ ಬಗ್ಗೆ ಒಂದು ಮಾಹಿತಿ ಇರಲ್ಲ ಎಂದು ಅರಣ್ಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆಯ ಇಲಾಖೆಯ ಅಧಿಕಾರಿಗಳ ಮೇಲೆ ಗರಂ ಆದರು.
ಸುಮ್ಮನೆ ಮೀಟಿಂಗ್ ಬಂದು ಟಿ ಕಾಫಿ ಕುಡಿಯಲಿಕ್ಕೆ ಬಂದಿದ್ದೀರಾ. ಸರ್ಕಾರದ ವೇತನ ಪಡಿತ್ತೀರಿ. ಪದೇ ಪದೇ ನಿಮಗೆ ಇದನ್ನೇ ಹೇಳುವುದು ಆಗುತ್ತಿದೆ.ಯಾರು ಸರಿಯಾದ ಮಾಹಿತಿಯನ್ನು ನೀಡುತ್ತಿಲ್ಲ. ಮೂಲ ಮಾಹಿತಿ ಇಲ್ಲ. ಸಚಿವರು ಬೈದ್ರೆ ಸೊಕ್ಕಿನವರು ಅನ್ನುತ್ತೀರಿ. ಆದರೆ ನಾನು ಸಿಬಿಐ ವಿಚಾರಣೆ ಮಾಡಲಿಕ್ಕೆ ಬಂದಿಲ್ಲ. ಸೂಕ್ತವಾದ ಒಂದು ಉತ್ತರ ಇಲ್ಲ. ಯಾವುದೇ ಮಾಹಿತಿ ಇಲ್ಲ ಎಂದ ಸಚಿವ ಸಂತೋಷ್ ಲಾಡ್, ಅಧಿಕಾರ ದಿವ್ಯ ನಿರ್ಲಕ್ಷ್ಯದಿಂದ ಜಿಲ್ಲೆ ಅಭಿವೃದ್ದಿಯಾಗಲ್ಲ. ಯಾವ ಅಧಿಕಾರಿಗಳು ಸರಿಯಾದ ಡಾಟಾ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾತನಾಡಿದ ಶಾಸಕ ಎನ್.ಎಚ್. ಕೋನರೆಡ್ಡಿ 'ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಅಧಿಕಾರಿಗಳು ಮಾಡಿಸುತ್ತಿಲ್ಲ. ಕೇವಲ ಇವರು ಸಚಿವರಿಗೆ ತಪ್ಪು ಮಾಹಿತಿ ನೀಡಿ ಅಧಿಕಾರಿಗಳು ಕಾಮಗಾರಿಗಳ ಹಾದಿಯನ್ನ ತಪ್ಪಿಸುತ್ತಿದ್ದಾರೆ. ಸಚಿವರು ಇಷ್ಟೆಲ್ಲಾ ಮಾಹಿತಿ ಕೇಳಿದರೂ, ಯಾವೊಬ್ಬ ಅಧಿಕಾರಿಯು ಕೆಡಿಪಿ ಸಭೆಗೆ ಬಂದರೆ ಯಾಕೆ ಮಾಹಿತಿ ನೀಡುತ್ತಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ವಿಧಾನ ಪರಿಷ್ಯತ್ ಸದಸ್ಯ ಸಲೀಂ ಅಹ್ಮದ್, ನವಲಗುಂದ ಶಾಸಕ ಎನ್.ಎಚ್. ಕೋನರೆಡ್ಡಿ, ಹುಬ್ಬಳ್ಳಿ ಶಾಸಕ ಮಹೇಶ್ ಟೆಂಗಿನಕಾಯಿ, ಕುಂದಗೋಳ ಶಾಸಕ ಎಂ.ಆರ್ ಪಾಟೀಲ ಭಾಗವಹಿಸಿದ್ದರು. ಇನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್ ಸಭೆಯಲ್ಲಿ ಉಪಸ್ಥಿತಿರಿದ್ದರು.












Click it and Unblock the Notifications