Waqf Bill 2025: ಕೈ ನಾಯಕರ 'ವಕ್ಫ್ ತಿದ್ದುಪಡಿ ಮಸೂದೆ' ಹೇಳಿಕೆ ಬೆಂಬಲಿಸಿದ ಲಕ್ಷ್ಮೀ ಹೆಬ್ಬಾಳ್ಕರ್

ಧಾರವಾಡ, ಏಪ್ರಿಲ್ 03: ವಕ್ಫ್ ಮಂಡಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತಿದ್ದುಪಡಿ ಮಸೂದೆ ಮಂಡಿಸಿ ಬಿಲ್ ಪಾಸ್ ಮಾಡಿದೆ. ತಡರಾತ್ರಿ ಸಂಸತ್‌ನಲ್ಲಿ ಬಿಲ್ ಪಾಸ್ ಮಾಡಲಾಗಿದೆ. ಭಾರತೀಯ ಸೇನೆ, ರೈಲ್ವೆ ಹೊರತುಪಡಿಸಿದರೆ, ವಕ್ಫ್‌ ಮಂಡಳಿಗೆ ಭೂಮಿ ಸ್ವಾಧೀನಕ್ಕಿದ್ದ ಪರಮಾಧಿಕಾರದ ವಿರುದ್ಧ ಪಾರದರ್ಶಕತೆ ತರಲು, ಮುಸ್ಲಿಂ ಬಡವರಿಗೂ, ಎಲ್ಲ ವರ್ಗದವರಿಗೂ ಮಂಡಳಿಯಲ್ಲಿ ಅವಕಾಶ ನೀಡಲು ವಕ್ಫ್ ತಿದ್ದಪಡಿ ಮಸೂದೆ ತರಲಾಗಿದೆ. ಇದೀಗ ಇದರ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿದ್ದಾರೆ.

ವಕ್ಫ್ ಕಾಯಿದೆ ತಿದ್ದುಪಡಿ ವಿಚಾರ ಕುರಿತು ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸಂಸದ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾತನಡಿದ್ದಾರೆ. ನಮ್ಮ ನಾಯಕರ ಹೇಳಿಕೆ ಸರಿಯಾಗಿದೆ ಎಂದು ಕಾಂಗ್ರೆಸ್‌ ವರಿಷ್ಠರ ಮುಸ್ಲಿಮರಿಗೆ ಅನ್ಯಾಯ ಮಾಡುತ್ತಿದೆ ಎಂಬ ಹೇಳಿಕೆಯನ್ನು ಅವರು ಬೆಂಬಲಿಸಿದ್ದಾರೆ. ಇನ್ನೂ ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ್‌ರನ್ನು ಉಚ್ಛಾಟನೆ ಮಾಡಲಾಗಿದೆ. ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಅವರು ಭಾಗಿಯಾಗಿದ್ದಾರೆ. ಉಚ್ಛಾಟನೆ ಅವರ ಪಕ್ಷದ ವಿಚಾರ ಎಂದರು.

Lakshmi Hebbalkar Reacts on Waqf Amendment Bill 2025 and Price Hike in Karnataka

ಈ ಹೋರಾಟದಲ್ಲಿ ಯತ್ನಾಳ್ ನಮ್ಮ ಬಾಂಧವರು

ಶಾಸಕ ಯತ್ನಾಳ್ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡಿದಾಗಲೂ ನಾವು ಖಂಡಿಸಿದ್ದೇವೆ. ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಮಾತ್ರ ಅವರು ನಮಗೆ ಬಾಂಧವರು. ಸಚಿವ ಸಂಪುಟ ವಿಸ್ತರಣೆ ವಿಚಾರ ನೋಡುವುದಾದರೆ, ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಂಪುಟ ವಿಸ್ತರಣೆ ಇಲ್ಲ ಎಂದು ಹೇಳಿದ್ದಾರೆ ಎಂದು ಧಾರವಾಡದಲ್ಲಿ ಗುರುವಾರ ಅವರು ಪ್ರತಿಕ್ರಿಯಿಸಿದರು.

ಬೆಲೆ ಏರಿಕೆ: ಬಿಜೆಪಿಗೆ ತಿರುಗೇಟು

ಮುಂದೆ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಯಲಿದೆ. ಈ ಬಗ್ಗೆ ಹೈಕಮಾಂಡ್ ನಿರ್ಧಾರ ಏನು ತೆಗೆದುಕೊಳ್ಳುತ್ತದೆ ಗೊತ್ತಿಲ್ಲ. ಇನ್ನೂ ಬೆಲೆ ಏರಿಕೆ ಎಂದಿರುವ ಬಿಜೆಪಿ ಹೋರಾಟಕ್ಕೆ ಮುಂದಾಗಿದೆ. ಕಳೆದ ನಾಲ್ಕು ವರ್ಷ ಬಿಜೆಪಿ ಸರ್ಕಾರದಲ್ಲಿ ಬೆಲೆ ಏರಿಕೆ ಆಗಿಯೇ ಇಲ್ಲವಾ. ಹಾಲು, ಪೆಟ್ರೊಲ್, ಡಿಸೇಲ್, ದಿನಸಿ ದರಗಳು ಹೆಚ್ಚಾಗಿವೆ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಪ್ರತಿಭಟನೆ ಡಂಬಾಚಾರದ ನಾಟಕ ಪ್ರದರ್ಶನವಾಗಿದೆ. ಮೊದಲು ಕರ್ನಾಟಕಕ್ಕೆ ಬರಬೇಕಿರುವ ತೆರಿಗೆ ಹಣ ಕೊಡಬೇಕು. ಕರ್ನಾಟಕಕ್ಕೆ ಕೇಂದ್ರ ಬಿಜೆಪಿ ಸರ್ಕಾರ ತೆರಿಗೆ ವಿಚಾರದಲ್ಲಿ ಅನ್ಯಾಯ ಮಾಡುತ್ತಿದೆ.

Lakshmi Hebbalkar Reacts on Waqf Amendment Bill 2025 and Price Hike in Karnataka

ಆ ತೆರಿಗೆ ಹಣ ತರಲು ಬಿಜೆಪಿ ಮುಂದಾಗಬೇಕು ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಹಾಲಿನ ದರ ಕಡಿಮೆ ಇದೆ. ಬೆಲೆ ಏರಿಕೆ ನಾನು ಸಮರ್ಥನೆ ಮಾಡುತ್ತಿಲ್ಲ. ಆರೋಪವೂ ಮಾಡುತ್ತಿಲ್ಲ. ಬೆಲೆ ಏರಿಕೆಗಳ ಬಗ್ಗೆ ಚರ್ಚೆ ಆಗಬೇಕಿದೆ. ಬಿಜೆಪಿ ಅವಧಿಯಲ್ಲೂ ಬೆಲೆ ಹೆಚ್ಚಾಗಿದೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+