Hubballi: ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಪಾದ ಪೂಜಿಸಿ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಕುಟುಂಬ
ಹುಬ್ಬಳ್ಳಿ, ಜನವರಿ 01: ರಾಜ್ಯದಲ್ಲಿ ಇತ್ತೀಚೆಗೆ ಕೋಮುಧ್ವೇಷ, ಸಂಘರ್ಷ, ಜಾತಿ ಜಾತಿಗಳ ಮಧ್ಯ ವೈಮಸ್ಸು ಹೆಚ್ಚಾದ ಸನ್ನಿವೇಶದಲ್ಲಿ ಕೋಮು ಸಾಮರಸ್ಯ, ಸೌಹಾರ್ದತೆಯ ಘಟನೆ ನಡೆದಿದೆ. ಮುಸ್ಲಿಂ ಮನೆಯಲ್ಲಿ ಸ್ವಾಮಿ ಅಯ್ಯಪ್ಪ ವಿಶೇಷ ಪೂಜೆ ಮತ್ತು ಅಯ್ಯಪ್ಪ ಮಾಲಾಧಾರಿಗಳ ಪಾದ ಪೂಜೆ ನಡೆದಿದೆ. ಈ ಮೂಲಕ ಮುಸ್ಲಿಂ ಸಮುದಾಯ ಮಾದರಿ ಕೆಲಸ ಮಾಡಿದೆ.
ಇಂದು ಧರ್ಮ ಧರ್ಮಗಳ, ಜಾತಿ ಜಾತಿ ಗಳ ಹಾಗೂ ಮನಸ್ಸು ಮನಸ್ಸು ಗಳ ನಡುವೆ ಧ್ವೇಷ ವೈರುತ್ವ ಹೆಚ್ಚಾಗುತ್ತಿದೆ. ಕೋಮು ಘರ್ಷಣೆ ಯಿಂದ ಜನರು ನಲುಗಿ ಹೋಗಿದ್ದಾರೆ. ಅದರಲ್ಲೂ ಹಿಂದು ಮುಸ್ಲಿಂ ಗಳ ನಡುವೆ ಸಾಕಷ್ಟು ಅಸಮಾಧಾನ ವೈಮನಸ್ಸು ಬೆಳೆಯುವ ಘಟನೆಗಳು ನಡೆಯುತ್ತಿವೆ.

ಇಂತಹ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಮುಸ್ಲಿಂ ಕುಟುಂಬ ತಮ್ಮ ಮನೆಯಲ್ಲಿ ಅಯ್ಯಪ್ಪ ಮಾಲಾಧಾರಿಗಳ ಪಾದಪೂಜೆ ಮಾಡಿದೆ. ಗ್ರಾಮದ ಹಜೇಸಾಬ ಕುಟುಂಬ ಸದಸ್ಯರಿಂದ ಪೂಜೆ ಈ ಮುಸ್ಲಿಂ ಕುಟುಂಬ ಮಾದರಿ ಆಗಿದ್ದಾರೆ. ಸಾಂಪ್ರದಾಯದಂತೆ ಮಾಲಾಧಾರಿಗಳನ್ನು ಸತ್ಕರಿಸಿ ಕೋಮು ಸೌಹಾರ್ಧತೆ ಮೆರೆದಿದೆ.
ಮಾಲಾಧಾರಿಗಳ ಪಾದ ಪೂಜೆ ಮಾಡಿದ ಯರಗುಪ್ಪಿ ಗ್ರಾಮದ ಮುಸ್ಲಿಂ ಕುಟುಂಬ ಸದಸ್ಯರ ಪೈಕಿ ಮನೆಯ ಯಜಮಾನರಾದ ಹಜೇಸಾಬ ಬೆಳಗಳಿ ಅವರು ವೃತ್ತಿಯಲ್ಲಿ ಗಾರೆ ಕೆಲಸ ಮಾಡುವವರು. ಅಯ್ಯಪ್ಪ ಸ್ವಾಮಿಗಳಿಗೆ ಪೂಜೆ ಸಲ್ಲಿಸಲೆಂದು ಮನೆಯನ್ನು ಸಾರಿಸಿದ್ದಾರೆ. ಶುಚಿಗೊಳಿಸಿ ಮಡಿಯಿಂದಲೇ ಹಿಂದೂ ಸಾಂಪ್ರದಾಯದಂತೆ ಪೂಜೆ ನೆರವೇರಿಸುವ ಮೂಲಕ ಭಾವಕ್ಕತೆ ಮರೆದಿದ್ದಾರೆ.
ಗ್ರಾಮದಲ್ಲಿದ್ದ ಅಯ್ಯಪ್ಪ ಗುರುಸ್ವಾಮಿ ಹನಮಪ್ಪ ಮೇಟಿ ಅವರ ಮಾರ್ಗದರ್ಶನದಂತೆ ಪೂಜೆ ನೆರವೇರಿಸಲಾಗಿದೆ. ಒಟ್ಟು 18 ಅಯ್ಯಪ್ಪ ಮಾಲಾಧಾರಿಗಳನ್ನು ಮನೆಗೆ ಬರಮಾಡಿಕೊಂಡು ಅವರ ಪಾದಪೂಜೆ ನಡೆಸಲಾಗಿದೆ. ಅಯ್ಯಪ್ಪನ ಫೋಟೋ, ಮೂರ್ತಿ ಇಟ್ಟು ಪ್ರಸಾಧ ಮಾಡಿ ಆರತಿ ಬೆಳಗಿದ್ದಾರೆ. ಪಂಚಾಮೃತ ಅಭಿಷೇಕ ನೈವೇಧ್ಯಕ್ಕೆ ಮಾಡಿ ಅಯ್ಯಪ್ಪಗೆ ಅರ್ಪಿಸಿದ್ದಾರೆ.
ಅಕ್ಕಪಕ್ಕ ಮನೆಯವರು ಬಂದು ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.
ಈ ಪೂಜೆಗೆ ಗ್ರಾಮದ ಹಿರಿಯರಿಗೆ ಸಹ ಆಹ್ವಾನ ನೀಡಲಾಗಿತ್ತು. ಈರುಮುಡಿ ಪೂಜೆ ಸಲ್ಲಿಸಿ ಬಂದವರಿಗೆ ಪ್ರಸಾದ ವಿತರಣೆ ಮಾಡಲಾಯಿತು.












Click it and Unblock the Notifications