• search
  • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಧಾರವಾಡದಲ್ಲಿ 2 ಇಂದಿರಾ ಕ್ಯಾಂಟೀನ್‌ಗಳ ಲೋಕಾರ್ಪಣೆ

|

ಧಾರವಾಡ, ನವೆಂಬರ್ 16 : ಧಾರವಾಡದ ಮಿನಿವಿಧಾನಸೌಧದ ಆವರಣ ಹಾಗೂ ಹೊಸ ಬಸ್‌ ನಿಲ್ದಾಣದ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟೀನ್‌ಗಳು ಉದ್ಘಾಟನೆಗೊಂಡಿವೆ.

ಶುಕ್ರವಾರ ಕಂದಾಯ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಖಾತೆಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ, ಉಪಹಾರ ಸವಿದರು.

ಇಂದಿರಾ ಕ್ಯಾಂಟೀನ್‌ನಲ್ಲಿ ಇನ್ಮುಂದೆ ಟೀ, ಕಾಫಿನೂ ಸಿಗುತ್ತೆ

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, 'ರೈತರು, ಬಡವರ ಪಾಲಿನ ತಾಯಿಯಂತಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಸ್ಮರಣಾರ್ಥ ರಾಜ್ಯದಲ್ಲಿ ಮುಖ್ಯವಾಗಿ ಪಟ್ಟಣ ಪ್ರದೇಶದಲ್ಲಿ ರಾಜ್ಯದ ಎಲ್ಲಾ ಕಡೆ ಕ್ಯಾಂಟೀನ್ ಪ್ರಾರಂಭವಾಗಿವೆ' ಎಂದರು.

ಶೀಘ್ರದಲ್ಲೇ ಬದಲಾಗಲಿದೆ ಇಂದಿರಾ ಕ್ಯಾಂಟೀನ್ ಮೆನು

'ರಾಜ್ಯದಲ್ಲಿ ಅಡುಗೆ ಕೋಣೆ ಸಹಿತವಾಗಿ 171 ಮತ್ತು ಕೇವಲ ಕ್ಯಾಂಟೀನ್‌ 248 ಕಡೆ ಇವೆ. ಧಾರವಾಡ ಜಿಲ್ಲೆಯಲ್ಲಿ 12 ಇಂದಿರಾ ಕ್ಯಾಂಟೀನ್‌ಗಳಿವೆ. ನವೆಂಬರ್ 17 ರಂದು ಹುಬ್ಬಳ್ಳಿಯಲ್ಲಿ 4 ಕ್ಯಾಂಟೀನ್‌ಗಳನ್ನು ಆರಂಭಿಸಲಾಗುತ್ತಿದೆ' ಎಂದು ಸಚಿವರು ಹೇಳಿದರು.

ಪೌರಕಾರ್ಮಿಕರಿಗೆ ಇಸ್ಕಾನ್‌ ಬದಲಾಗಿ ಇಂದಿರಾ ಕ್ಯಾಂಟೀನ್‌ ಊಟ

ಬಡವರು, ಕಾರ್ಮಿಕರಿಗೆ, ಕೂಲಿಕಾರರಿಗೆ ಮುಂಜಾನೆ 5 ರೂ.ದರದಲ್ಲಿ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ 10 ರೂ.ದರದಲ್ಲಿ ಊಟ ನೀಡಲಾಗುತ್ತದೆ. ಜನರು ಭೋಜನ ಕೂಪನ್‌ ಗಳನ್ನು ಪಡೆದು ಊಟ, ಉಪಹಾರ ಸವಿಯಬಹುದು.

ಒಟ್ಟು 15 ರೂ.ಗಳಲ್ಲಿ ಒಬ್ಬ ವ್ಯಕ್ತಿ ದಿನದ ಮೂರು ಹೊತ್ತು ಆಹಾರ ಪಡೆಯ ಬಹುದಾಗಿದೆ. ಒಬ್ಬರಿಗೆ ಆಹಾರ ತಯಾರು ಮಾಡಲು 57 ರೂ. ಖರ್ಚಾಗುತ್ತದೆ. ಸರ್ಕಾರ 32 ರೂ. ಸಬ್ಸಿಡಿ ನೀಡುತ್ತದೆ.

English summary
Dharwad district in-charge and revenue minister R.V.Deshpande inaugurated Indira Canteen in Dharwad, Karnataka on November 16, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X