ದೇಶದಲ್ಲಿ ಮೋದಿ ಸರ್ಕಾರ, ದೇಶದ ಅರ್ಥ ವ್ಯವಸ್ಥೆ ಭದ್ರ

By: ಶಂಭು ಹುಬ್ಬಳ್ಳಿ
Subscribe to Oneindia Kannada

ಹುಬ್ಬಳ್ಳಿ, ಜೂನ್. 20: ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರಕಾರದಿಂದ ದೇಶವು ಆರ್ಥಿಕವಾಗಿ ಸಬಲಗೊಳ್ಳುತ್ತಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಚೌಧರಿ ಬೀರೇಂದ್ರಸಿಂಗ್ ಹೇಳಿದರು.

ಅವರು ನಗರದ ಗೋಕುಲ ಗಾರ್ಡನ್ ನಲ್ಲಿ ಸೋಮವಾರ ಸಂಜೆ ನಡೆದ ವಿಕಾಸ ಪರ್ವ ಸಮಾವೇಶ ಉದ್ದೇಶಿಸಿ ಮಾತನಾಡುತ್ತಿದ್ದರು. ಹಿಂದಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಚೌಧರಿ, ಶಂಕರಾರಾಚಾರ್ಯರು ಸಾಂಸ್ಕೃತಿಕವಾಗಿ ಭಾರತವನ್ನು ಒಂದೂಗೂಡಿಸಿದರು. ಈಗ ಮೋದಿ ಸರಕಾರ ಬಂದ ನಂತರ ದೇಶವು ಆರ್ಥಿಕವಾಗಿ ಸಬಲಾಗುತ್ತದೆ ಎಂದರು.[ಅಂತೂ-ಇಂತೂ ಉಣಕಲ್ ಕೆರೆ ಸ್ವಚ್ಛತೆ ಆರಂಭ]

hubballi

ಮುಂದಿನ ದಿನಗಳಲ್ಲಿ ಭಾರತ ದೇಶದ ವಾಯುಸೇನೆಯಲ್ಲಿನ ಯುದ್ಧ ವಿಮಾನಗಳ ಸಾಮರ್ಥ್ಯ ಮತ್ತು ಸಂಖ್ಯೆಗಳನ್ನು ಹೆಚ್ಚಿಸಲಾಗುವುದು. ದೇಶದ ಅಭಿವೃದ್ಧಿಗೆ 20 ಕೋಟಿ ರು. ಗಳಲ್ಲಿ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

2018 ರಲ್ಲಿ ಬರುವ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಬಿಜೆಪಿ ಮತ ಹಾಕುವುದರಲ್ಲಿ ಸಂಶಯವೇ ಇಲ್ಲ. ಏಕೆಂದರೆ ಮೋದಿ ಸರಕಾರದ ಅಭಿವೃದ್ಧಿಯಿಂದಲೇ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.[ನರೇಂದ್ರ ಮೋದಿ ಬೆನ್ನು ತಟ್ಟಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ]

-
-
-
-

ಕೇಂದ್ರ ಸರಕಾರದ ಎರಡು ವರ್ಷಗಳ ಸಾಧನೆಯನ್ನು ಜನತೆಗೆ ತಿಳಿಸಿಕೊಡುವ ಸಲುವಾಗಿ ಇಂಥಹ ಸಮಾವೇಶ ಏರ್ಪಡಿಸಲಾಗುತ್ತಿದೆ. ಈ ಸಮಾವೇಶದಲ್ಲಿ ನರೇಂದ್ರ ಮೋದಿ ಸರಕಾರ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಎರಡು ವರ್ಷಗಳಲ್ಲಿ ಕಂಡುಕೊಂಡ ಮಹತ್ತರ ಅಭಿವೃದ್ಧಿಗಳ ಕುರಿತು ಚರ್ಚಿಸಲಾಗುತ್ತಿದೆ ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hubballi: Now Indian Economy is stable condition because of Narendra Modi Government said by Union rural development and panchayat raj minister Chaudhary Birender Singh. Singh participated in Vikas Parv program at Hubballi on 20 June, 2016.
Please Wait while comments are loading...