ಎಲ್ಐಸಿ ಪಾಲಿಸಿ ಹೆಸರಿನಲ್ಲಿ ಹೆಂಡತಿಗೆ ಡೈವೋರ್ಸ್

ಹುಬ್ಬಳ್ಳಿ, ಜೂ. 16 : ಎಲ್ಐಸಿ ಪಾಲಿಸಿ ಮಾಡಿಸುತ್ತೇನೆ ಖಾಲಿ ಹಾಳೆಯ ಮೇಲೆ ಪತ್ನಿಯ ಸಹಿ ಮಾಡಿಸಿಕೊಂಡ ಪತಿರಾಯ ಅವಳಿಗೆ ವಿಚ್ಛೇದನ ನೀಡಿ ವಂಚಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಪತಿ ಮತ್ತು ಪತ್ನಿ ಪರಸ್ಪರರ ಮೇಲೆ ಆರೋಪ ಮಾಡುತ್ತಿದ್ದು, ಸಂಪ್ರದಾಯಬದ್ಧವಾಗಿ ನಡೆದ ಮದುವೆ ಮುರಿದು ಬಿದ್ದಿದೆ.

ಹುಬ್ಬಳ್ಳಿಯ ಎಸ್​.ಎಂ.ಕೃಷ್ಣ ಬಡಾವಣೆ ನಿವಾಸಿ ಲೋಕೇಶ್ ಎಂಬುವವರು​ ಪತ್ನಿ ಶ್ವೇತಾಳ ಬಳಿ ಖಾಲಿ ಕಾಗದಕ್ಕೆ ಸಹಿ ಮಾಡಿಸಿಕೊಂಡು ಅವಳಿಗೆ ವಿಚ್ಛೇದನ ನೀಡಿದ್ದಾರೆ. ಸದ್ಯ ಎರಡನೆ ಮದುವೆ ಮಾಡಿಕೊಳ್ಳಲು ತಯಾರಾಗುತ್ತಿರುವ ಲೋಕೇಶ್ ವಿರುದ್ಧ ಶ್ವೇತಾ ಕುಟುಂಬದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Divorce

ಶ್ವೇತಾ ಅವರು ಹೇಳುವ ಪ್ರಕಾರ ಕೆಲವು ದಿನಗಳ ಹಿಂದೆ ಲೊಕೇಶ್ ಎಲ್​ಐಸಿ ಪಾಲಿಸಿ ಮಾಡಿಸುತ್ತೇನೆಂದು ಹೇಳಿ ಖಾಲಿ ಪೇಪರ್ ​ನಲ್ಲಿ ಅವರ ಸಹಿ ಪಡೆದಿದ್ದಾರೆ. ನಂತರ ಸಹಿಯಿಂದ ವಿಚ್ಛೇದನದ ಅಫಿಡವಿಟ್​ ಮಾಡಿಸಿಕೊಂಡಿದ್ದು, ಎರಡನೇ ಮದುವೆಗೆ ಸಿದ್ಧವಾಗುತ್ತಿದ್ದಾರೆ. [ಹೃತಿಕ್-ಸುಸಾನೆ ವಿಚ್ಛೇದನ: ಅಸಲಿ ಕಾರಣ ಏನಿತ್ತು?]

ಲೋಕೇಶ್ ಹೇಳಿದ್ದೇನು : ಆದರೆ, ಪತ್ನಿಯನ್ನು ವಂಚಿಸಿದ ಆರೋಪ ಎದುರಿಸುತ್ತಿರುವ ಲೋಕೇಶ್ "ಶ್ವೇತಾಳ ನಡತೆ ಸರಿಯಿಲ್ಲ. ಆಕೆ ಬೇರೊಬ್ಬನೊಂದಿಗೆ ಸಂಬಂಧ ಹೊಂದಿದ್ದಳು. ಆದ್ದರಿಂದ ಆಕೆಯೇ ನನ್ನಿಂದ ವಿಚ್ಛೇದನ ಪಡೆದಿದ್ದಾಳೆ" ಎಂದು ಹೇಳುತ್ತಿದ್ದಾರೆ.

ಸದ್ಯ ಪತಿ-ಪತ್ನಿ ಇಬ್ಬರು ತಮಗೆ ನ್ಯಾಯಬೇಕೆಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪತಿಯ ನಯವಂಚನೆ ಬಗ್ಗೆ ಮಹಿಳಾ ಆಯೋಗಕ್ಕೆ ದೂರು ಕೊಡಲು ಶ್ವೇತಾ ತಯಾರಿ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+