ಹುಬ್ಬಳ್ಳಿ: 2 ದಿನದ ವ್ಯಂಗ್ಯಚಿತ್ರ ಕಲಾ ಕಾರ್ಯಾಗಾರ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ,ಜುಲೈ, 14: ನಗರದ ಸತ್ವರೂಪ ಫೌಂಡೇಷನ್ ಆಶ್ರಯದಲ್ಲಿ ಸಂಸ್ಕೃತಿ ದೃಶ್ಯ ಕಲಾ ಸಂಸ್ಥೆ ಜುಲೈ 16, 17 ರಂದು ಎರಡು ದಿನಗಳ ವ್ಯಂಗ್ಯ ಚಿತ್ರಕಲಾ ಕಾರ್ಯಾಗಾರ ಹಮ್ಮಿಕೊಂಡಿದೆ. ಅಂತರಾಷ್ಟ್ರೀಯ ಖ್ಯಾತಿ ವ್ಯಂಗ್ಯಚಿತ್ರಕಾರ ಲಾರೆನ್ಸ್ ಜೋಸೆಫ್ ಕಾರ್ಯಾಗಾರ ನಡೆಸಿಕೊಡಲಿದ್ದಾರೆ.

ಗೋಕುಲ್ ರಸ್ತೆಯ ಸಂಸ್ಕೃತಿ ಕಾಲೇಜಿನಲ್ಲಿ ನಡೆಯುವ ಕಾರ್ಯಾಗಾರದಲ್ಲಿ ಗೋವಾದಲ್ಲಿ ಸ್ವಂತ ಚಿತ್ರ ಕಲೆ ಸಂಸ್ಥೆ ಹೊಂದಿರುವ ಲಾರೆನ್ಸ್ ಜೋಸೇಫ್ ಎರಡನೇ ಬಾರಿಗೆ ತರಬೇತಿ ನೀಡುತ್ತಿದ್ದಾರೆ.[ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ವೈಫೈ: ಧಾರವಾಡಕ್ಕೂ ಶೀಘ್ರ]

Hubballi: Workshop on Portrait, landscape Cartoons

ಒಟ್ಟು ಎರಡು ಬ್ಯಾಚ್ ಗಳಲ್ಲಿ ತರಬೇತಿ ನೀಡುತ್ತಿದ್ದು, ನಿಸರ್ಗಚಿತ್ರ (ಲ್ಯಾಂಡ್ ಸ್ಕೇಪ್), ಭಾವಚಿತ್ರ (ಪೋರ್ಟೇಟ್) ಹಾಗೂ ವ್ಯಂಗ್ಯಚಿತ್ರ (ಕಾರ್ಟೂನ್) ಕಲೆಯನ್ನು ತರಬೇತಿ ನೀಡಲಾಗುವುದು ಎಂದು ಕಾಲೇಜು ತಿಳಿಸಿದೆ.[ಪ್ರತಿದಿನ ಧೂಳಿನಲ್ಲಿ ಜಳಕ ಮಾಡುತ್ತಿರುವ ಹುಬ್ಬಳ್ಳಿ ಮಂದಿ]

ಈ ಕುರಿತು ಪ್ರಕಟಣೆ ನೀಡಿರುವ ಸಂಸ್ಕೃತಿ ಕಾಲೇಜಿನ ಸಿ.ಇ.ಓ ಡಾ.ವೀಣಾಡೇನಿಯಲ್ ಹಾಗೂ ವಿವರ ಮತ್ತು ನೋಂದಣಿಗೆ 0836-2337111, 94807 50504 ಅಥವಾ 70228 06440 ಸಂಪರ್ಕಿಸಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hubballi: Sanskriti College of Visual & Performing Arts Hubballi conducting a workshop on Portrait, landscape and Pencil Cartoons. Famous cartoonist Lawrence Joseph will lead the workshop.
Please Wait while comments are loading...