Power Cut Alert: ನಗರದಲ್ಲಿ ನ.7ರಂದು ಗುರುವಾರ ವಿದ್ಯುತ್ ವ್ಯತ್ಯಯ, ಬಡಾವಣೆಗಳ ಪಟ್ಟಿ
ಹುಬ್ಬಳ್ಳಿ, ನವೆಂಬರ್ 06: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ) ಗೋಪನಕೊಪ್ಪ 110/11 ಕೆ.ವಿ. ವಿದ್ಯುತ್ ಉಪಕೇಂದ್ರ ಮತ್ತು ಕುಸುಗಲ್ ರಸ್ತೆಯ 33 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣೆ ಕಾರ್ಯ ನಡೆಯಲಿದೆ. ಈ ಸಂಬಂಧ ಹುಬ್ಬಳ್ಳಿ ನಗರದಲ್ಲಿ ಅನೇಕ ಬಡಾವಣೆಗಳಲ್ಲಿ ನವೆಂಬರ್ 7ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಮೇಲಿನ ಎರಡು ವಿದ್ಯುತ್ ವಿತರಣೆ ಕೇಂದ್ರಗಳಿಂದ ವಿದ್ಯುತ್ ಸರಬರಾಜು ಪಡೆಯುವ ಎಲ್ಲಾ 11ಕೆ.ವಿ. ಮಾರ್ಗಗಳ ವ್ಯಾಪ್ತಿಯ ಎಲ್ಲ ಬಡಾವಣೆಗಳಲ್ಲಿ ಗುರುವಾರ ಬೆಳಗ್ಗೆ 10 ರಿಂದ ಸಂಜೆ 4 ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ತುರ್ತು ನಿರ್ವಹಣಾ ಕಾಮಗಾರಿ ಬಳಿಕ ಎಂದಿನಂತೆ ಬಡಾವಣೆಗಳಿಗೆ ವಿದ್ಯುತ್ ಪೂರೈಕೆ ಆಗಲಿದೆ ಎಂದು ಪ್ರಕಟಣೆ ಹೊರಡಿಸಿದೆ..

ವಿದ್ಯುತ್ ಸರಬರಾಜು ಕಡಿತದ ಬಡಾವಣೆಗಳ ವಿವರ
ನಗರದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕಚೇರಿ, ಕೋರ್ಟ್ ಸರ್ಕಲ್, ರಾಣಿ ಚನ್ನಮ್ಮ ಸರ್ಕಲ್, , ಹೊಸುರು, ಕ್ಲಬ್ ರಸ್ತೆ, ಮಿನಿವಿಧಾನ ಸೌಧ, ವಾಮನ ರಸ್ತೆ, ಹಳೇ ಬಸ್ ನಿಲ್ದಾಣದ ಎದುರಿಗಿನ ಪ್ರದೇಶ, ಜ್ಯೋತಿ ಕಾಲೋನಿ, ಸಾಯಿನಗರ, ಗೋಪನಕೊಪ್ಪ, ಮಹಾಲಕ್ಷ್ಮೀ ಬಡಾವಣೆ, ತಾಜ್ ನಗರ, ಅಂಬಿಕಾ ನಗರ, ಏಕತಾ ನಗರ, ತಹಸೀಲ್ದಾರ್ ಕಾಲೋನಿ, ಬ್ರಹ್ಮಗಿರಿ ಕಾಲೋನಿ, ಟೀರ‍್ಸ್ ಕಾಲೋನಿ.
ಉಣಕಲ್ ಕ್ರಾಸ್, ಬಿ.ವಿ.ಬಿ ಕಾಲೇಜ್, ಸಿದ್ದವೀರ ಬಡಾವಣೆ, ವೆಂಕಟೇಶ್ವರ ಕಾಲೋನಿ, ಬೆಂಗೇರಿ, ಮಹಾವೀರ ಕಾಲೋನಿ,, ಮನೋಜ ಎಸ್ಟೇಟ್, ಟಿಂಬರ್ ಯಾರ್ಡ, ವಿನೋಭ ಪಾರ್ಕ್, ಬಸವೇಶ್ವರ ಪಾರ್ಕ್, ಸಿಲ್ವರ್ ಪಾರ್ಕ್, ದೇವಾಂಗ ಪೇಟ್, ಬಾಲಾಜಿ ನಗರ, ಗಂಗಾಧರ ಕಾಲೋನಿ, ಎಸ್.ಬಿ.ಐ ಕಾಲೋನಿ, ರಾಜೇಂದ್ರ ಪ್ರಸಾದ ಕಾಲೋನಿ, ಮಯೂರ ಎಸ್ಟೇಟ್, ಗಾಯತ್ರಿ ಕಾಲೋನಿ ಮತ್ತು ಚೇತನಾ ಕಾಲೋನಿ.
ಚೇತನಾ ವಿಹಾರ, ಸೂರ್ಯ ನಗರ, ಸನ್ ಸಿಟಿ, ಸ್ವಾಗತ್ ಕಾಲೋನಿ, ಹಗವಿ ಸಿದ್ದೇಶ್ವರ ಕಾಲೋನಿ, ಗಂಗಾವತಿ ಗಾರ್ಡನ್, ರಾಘವೇಂದ್ರ ಕಾಲೋನಿ, ರಮೇಶ ಭವನ ರಸ್ತೆ, ದಯಾನಂದ ನಗರ, ಸಾಮಿ ಲೇಔಟ್, ಸಪ್ತಗಿರಿ ಪಾರ್ಕ್, ಆಜಾದ ಕಾಲೋನಿ, ಸುಳ್ಳ ರಸ್ತೆ ಸರ್ವೋದಯ ಸರ್ಕಲ್, ಇಂದಿರಾ ನಗರ, ಶೆಟ್ಟರ್ ಕಾಲೋನಿ, ಗಾರ್ಡನ್ ಕಾಲೋನಿ, ದಾನೇಶ್ವರಿ ಕಾಲೋನಿ, ದೇಶಪಾಂಡೆ ಲೇಔಟ್, ಶಾಖಾಂಬರಿ ಬಡಾವಣೆ, ರೆಡ್ಸನ್ ಪಾರ್ಕ್, ರಾಜಾಜಿ ನಗರ, ಸಾಗರ ಕಾಲೋನಿ.

ಎಂ.ವಿ.ಪಿ ಕಾಲೇಜು, ಹೊಸೂರ, ಕುಸುಗಲ್, ಸಾಯಿ ಗಾರ್ಡನ್, ಎಲ್ಫಿನ ಬಡಾವಣೆ, ಕುಸುಗಲ್ ಎಪಿಎಂಸಿ ರೋಡ್, ಹೇಮಂತ ನಗರ, ಭುವನೇಶ್ವರಿ ನಗರ, ಪಾರಸವಾಡಿ- 1 ಮತ್ತು 2 ಹಂತ, ಶಬರಿನಗರ, ದೇಸಾಯಿ ಪಾರ್ಕ್, ಮಧುರಾ ಕಾಲೋನಿ, ಅಕ್ಷಯ ಎಂಕ್ಷೇವ್, ಬಾದಾಮಿ ನಗರ.
ಸುಂದರ ಟೌನ್, ದೈವಜ್ಞ ಭವನ, ಕರ್ನಾಟಕ ಭವನ, ಸಂತೋಷ ನಗರ, ಮಾದವ ನಗರ, ನೃಪತುಂಗ ಬೆಟ್ಟ, ಶಕ್ತಿ ಕಾಲೋನಿ, ಫಾರೆಸ್ಟ ಕಾಲೋನಿ, ರೆವಿನ್ಯೂ ಕಾಲೋನಿ, ಮೃತ್ಯುಂಜಯ ನಗರ, ಹೆಬಸೂರ ಹಾಗೂ ಕಿರೇಸೂರ ಗ್ರಾಮಗಳು, ಬ್ಯಾಹಟ್ಟಿ, ಸುಳ್ಳ ಗ್ರಾಮ, ಎಲ್.ಫಿನ್. ಬಡಾವಣೆ, ಕಾವೇರಿ ಕಾಲೋನಿ, ಪತ್ರಕರ್ತ ನಗರ, ಅಶೋಕ ನಗರ, ಪಾಟೀಲ್ ಬಡಾವಣೆ, ರಾಜನಗರ, ವಿದ್ಯಾನಗರ, ಲೋಕಪ್ಪನ ಹಕ್ಕಲ, ಕೆ.ಎಂ.ಸಿ ಮುಂಭಾಗ, ಅಮೃತ ಟಾಕೀಸ್, ಸಂಜಯ್ ಮೆಡಿಕಲ್ಸ್, ಮಧುರ ಎಸ್ಟೇಟ್, ಹಸ್ತಿನಾಪೂರ ಬಡಾವಣೆ, ಅರಿಹಂತ ನಗರ, ನೆಹರು ನಗರ, ಪ್ರಕಾಶ ಕಾಲೋನಿ, ನಕ್ಷತ್ರಾ ಕಾಲೋನಿ, ಬೈಲಪ್ಪನವರ ನಗರ, ಚಾಮುಂಡೆಶ್ವರಿ ನಗರ, ವಿಶ್ವೇಶ್ವರ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ ಎಂದು ತಿಳಿಸಲಾಗಿದೆ..












Click it and Unblock the Notifications